ಲಾಹೋರ್‌ನಲ್ಲಿ ಶ್ರೀಲಂಕಾ ಕ್ರಿಕೆಟಿಗರ ಮೇಲೆ ನಡೆದಿರುವ ಉಗ್ರವಾದಿ ದಾಳಿಯ ಹಿಂದೆ ವಿದೇಶಿ ಕೈವಾಡವಿದೆ ಎನ್ನತ್ತಾ ಭಾರತದತ್ತ ಬೆಟ್ಟು ಮಾಡುತ್ತಿರುವ ಪಾಕಿಸ್ತಾನದ ಹುನ್ನಾರವನ್ನು ಬೇಜವಾಬ್ದಾರಿಯ ಹೇಳಿಕೆ ಎಂದಿರುವ ಭಾರತ ಈ ಹೇಳಿಕೆಗಳನ್ನು ನಿರಾಕರಿಸಿದೆ.
ಶ್ರೀಲಂಕಾದ ಆಟಗಾರರ ಮೇಲಿನ ದಾಳಿಯಲ್ಲಿ ವಿದೇಶದ ಕೈವಾಡವನ್ನು ತಳ್ಳಿಹಾಕಲಾಗದು ಎಂಬುದಾಗಿ ಪಾಕ್‌ನ ಒಳಾಡಳಿತ ಸಚಿವ ರೆಹ್ಮಾನ್ ಮಲ್ಲಿಕ್ ಹೇಳಿಕೆ ನೀಡಿದ್ದರು.
"ರಾಷ್ಟ್ರದ ಪ್ರಜಾತಂತ್ರವನ್ನು ದುರ್ಬಲಗೊಳಿಸಲಾಗಿದೆ. ಪಾಕಿಸ್ತಾನವು ನಿರಂತರ ಆಕ್ರಮಣಕ್ಕೆ ತುತ್ತಾಗುತ್ತಿದೆ. ಮತ್ತು ವಿದೇಶಿಯರು ಪಾಕಿಸ್ತಾನಕ್ಕೆ ಕೆಟ್ಟಹೆಸರು ತರುವ ಗುರಿಇರಿಸಿಕೊಂಡಿರುವ ಕಾರಣ ದಾಳಿಯ ಹಿಂದೆ ವಿದೇಶಿ ಕೈವಾಡವನ್ನು ತಾನು ತಳ್ಳಿಹಾಕಲಾರೆ ಎಂಬುದಾಗಿ ರೆಹ್ಮಾನ್ ಹೇಳಿದ್ದರು.
14 ಮಂದಿ ಬಂಧನ ಏತನ್ಮಧ್ಯೆ, ಘಟನೆಗೆ ಸಂಬಂಧಿಸಿದಂತೆ 14 ಮಂದಿ ಶಂಕಿತರನ್ನು ಬಂಧಿಸಲಾಗಿದೆ. ಈ ದಾಳಿಯು ಸ್ಥಳೀಯವಾಗಿ ಯೋಜಿತವಾದುದಲ್ಲ ಎಂಬುದನ್ನು ಪ್ರಾಥಮಿಕ ವರದಿಗಳು ತಿಳಿಸುತ್ತವೆ. ಹಾಗೂ "ವಾಗದಿಂದ ವಲಸೆ ದಾಖಲೆಗಳಿಗಾಗಿ ವಿನಂತಿಸಲಾಗಿದೆ" ಎಂದು ಪಾಕ್ ಒಳಾಡಳಿತ ಸಚಿವಾಲಯ ಹೇಳಿದೆ.
ಪಾಕ್ ಪೊಲೀಸರು ಲಾಹೋರಿನ ಹೊಟೇಲುಗಳಿಗೆ ದಾಳಿ ನಡೆಸಿದ್ದು ಹೆಚ್ಚಿನವರನ್ನು ವಶಕ್ಕೆ ಪಡೆಯಲಾಗಿದೆ. ಪ್ರಾಥಮಿಕ ತನಿಖೆಯ ವರದಿಯನ್ನು 48 ಗಂಟೆಗಳೊಳಗಾಗಿ ಸಲ್ಲಿಸಲಿದೆ.
ಆದರೆ ಪಾಕಿಸ್ತನಾದ ಇಂತಹ ವಿದೇಶಿ ಕೈವಾಡ ಸಿದ್ಧಾಂತವನ್ನು ಅಲ್ಲಿನ ಮಾಧ್ಯಮಗಳೇ ಗೇಲಿಮಾಡಿವೆ.
|