ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಬ್ರಹ್ಮೋಸ್ ಕ್ಷಿಪಣಿ ಯಶಸ್ವಿ ಉಡಾವಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬ್ರಹ್ಮೋಸ್ ಕ್ಷಿಪಣಿ ಯಶಸ್ವಿ ಉಡಾವಣೆ
ಕಳೆದ ಬಾರಿ ಸಣ್ಣಪುಟ್ಟ ದೋಷಗಳಿಂದಾಗಿ ಗುರಿತಲುಪಲು ವಿಫಲವಾಗಿದ್ದ ಸೂಪರ್ ಸೋನಿಕ್ ಬ್ರಹ್ಮೋಸ್ ಕ್ಷಿಪಣಿಯ ಪರಿಕ್ಷಾರ್ಥ ಉಡಾವಣೆಯನ್ನು ಬುಧವಾರ ರಾಜಸ್ಥಾನ ಮರುಭೂಮಿಯ ಉಡಾವಣಾ ವಲಯದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.

"ಬ್ಲಾಕ್ II ಬ್ರಹ್ಮೋಸ್ ಕ್ಷಿಪಣಿಯನ್ನು ಇಂದು ಮುಂಜಾನೆ 10.30ಕ್ಕೆ ಯಶಸ್ವಿಯಾಗಿ ಉಡಾಯಿಸಲಾಯಿತು" ಎಂದು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ)ಯ ಅಧಿಕಾರಿಗಳು ತಿಳಿಸಿದ್ದಾರೆ. ಅವರು ರಶ್ಯಾದ ವಿಜ್ಞಾನಿಗಳ ಸಹಯೋಗದಲ್ಲಿ ಈ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿದ್ದಾರೆ.

ಕ್ಷಿಪಣಿಯು ತನ್ನ ಗುರಿ ತಲುಪಲು ಎರಡೂವರೆ ನಿಮಿಷಗಳ ಕಾಲಾವಕಾಶ ಪಡೆಯಿತು ಎಂಬುದಾಗಿ ಅವರು ಹೇಳಿದ್ದಾರೆ.
ಈ ಉಡಾವಣೆಯನ್ನು ಸೇನಾ ಉಪಮುಖ್ಯಸ್ಥ(ಯೋಜನೆ ಮತ್ತು ವ್ಯವಸ್ಥೆಗಳು) ರಾದ ಲೆಫ್ಟಿನೆಂಟ್ ಜನರಲ್ ಎಂ.ಎಸ್. ದಡ್ವಾಲ್ ಇತರ ಅಧಿಕಾರಿಗಳೊಂದಿಗೆ ವೀಕ್ಷಿಸಿದರು. ಕ್ಷಿಪಣಿಯ ಅತ್ಯಾಧುನಿಕ ಭೂ ದಾಳಿ ಆವೃತ್ತಿಯನ್ನು ಅಭಿವೃದ್ಧಿ ಪಡಿಸಲಾಗಿದ್ದು, ಇದನ್ನು ನೇರ ಮಾದರಿ(ವರ್ಟಿಕಲ್ ಮಾಡೆಲ್)ಯಲ್ಲಿ ಉಡಾಯಿಸಲಾಯಿತು ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕ್ಷಿಪಣಿಯ ಪರಿಕ್ಷಾ ಉಡಾವಣೆಯನ್ನು ಜನವರಿ 20ರಂದು ನಡೆಸಲಾಗಿದ್ದು, ಅದು ನೆಲದಿಂದ ಯಶಸ್ವಿಹಾರಾಟ ನಡೆಸಿದ್ದರೂ ಮಧ್ಯದಲ್ಲಿ ದಾರಿತಪ್ಪಿದ್ದು ತನ್ನ ಗುರಿಯನ್ನು ತಲುಪುವಲ್ಲಿ ವಿಫಲವಾಗಿತ್ತು.

ರಶ್ಯಾದ ಸಹಯೋಗದಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಬ್ರಹ್ಮೋಸ್‌ಗೆ ಬ್ರಹ್ಮಪುತ್ರ ನದಿ ಮತ್ತು ಮಾಸ್ಕೋ ಹೆಸರನ್ನು ಇರಿಸಲಾಗಿದೆ.

ಕಳೆದ ವರ್ಷದಲ್ಲಿ ರಶ್ಯಾದ ರಕ್ಷಣಾ ಸಚಿವ ಅನತೊಲಿ ಸೆರ್ದಿಯುಕೋವ್ ಅವರು ಭಾರತಕ್ಕೆ ಆಗಮಿಸಿದ್ದ ವೇಳೆ ಹೈಪರ್ ಸೋನಿಕ್ ಬ್ರಹ್ಮೋಸ್ ಅಭಿವೃದ್ಧಿ ಪಡಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದೀಗಾಗಲೇ ಅಭಿವೃದ್ಧಿ ಪಡಿಸಲಾಗಿರುವ ಸೂಪರ್ ಸೋನಿಕ್‌ನ ಸುಧಾರಿತ ಆವೃತ್ತಿಯಾಗಿರುವ ಹೈಪರ್ ಸೋನಿಕ್ 'ಅತ್ಯಂತ ಸುಧಾರಿತ' ಕ್ಷಿಪಣಿಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್‌ ಕುತಂತ್ರದ ಹೇಳಿಕೆಗೆ ಭಾರತ ತಿರುಗೇಟು
'ಕೆಲಸಕ್ಕೆ ಹಾಜರಾದ' ಪ್ರಧಾನಿ ಮನಮೋಹನ್ ಸಿಂಗ್
ಬಾಂಗ್ಲಾ ದಂಗೆ: ಪ.ಬಂಗಾಳಕ್ಕೆ ಹೆಚ್ಚಿನ ಪಡೆ
'ಜೈ ಹೋ'ದ ಕಾಫಿರೈಟ್ ಪಡೆದ ಕಾಂಗ್ರೆಸ್
ಕಸಬ್ ಕಾವಲಿಗೆ ಐಟಿಬಿಪಿ ಸಿಬ್ಬಂದಿಗಳು
ರಾಜಕೀಯ ಮಹತ್ವಾಕಾಂಕ್ಷೆ ತನಗಿಲ್ಲ: ಪ್ರಿಯಾಂಕ