ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮಹಾರಾಷ್ಟ್ರದಲ್ಲಿ ಕಾಂಗ್ರೆಸ್-ಎನ್‌ಸಿಪಿ ಹೊಂದಾಣಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್-ಎನ್‌ಸಿಪಿ ಹೊಂದಾಣಿಕೆ
ಮಹಾರಾಷ್ಟ್ರದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಸ್ಫರ್ಧಿಸಲು ಕಾಂಗ್ರೆಸ್ ಮತ್ತು ಎನ್‌ಸಿಪಿ ನಿರ್ಧರಿಸಿದ್ದು, ಉಭಯ ಪಕ್ಷಗಳ ನಡುವಿನ ಸೀಟು ಹಂಚಿಕೆ ಮಾತುಕತೆ ಯಶಸ್ವಿಯಾಗಿದೆ.

ಕಾಂಗ್ರೆಸ್ 25 ಸ್ಥಾನಗಳಲ್ಲಿ ಸ್ಫರ್ಧಿಸಿದರೆ, ಶರದ್ ಪವಾರ್ ನೇತೃತ್ವದ ಎನ್‌ಸಿಪಿ 23 ಸ್ಥಾನಗಳಲ್ಲಿ ಸ್ಫರ್ಧಿಸುವ ಕುರಿತು ಒಮ್ಮತಾಭಿಪ್ರಾಯಕ್ಕೆ ಬಂದಿರುವುದಾಗಿ ಮೂಲಗಳು ತಿಳಿಸಿವೆ.

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಛಗನ್ ಭುಜ್ಬಲ್ ಅವರ ನಿವಾಸದಲ್ಲಿ ಮಂಗಳವಾರ ತಡರಾತ್ರಿಯ ತನಕ ನಡೆದ ಸಭೆಯಲ್ಲಿ ನಡೆದ ಮಾತುಕತೆ ಯಶಸ್ವಿಯಾಗಿದ್ದು, ಈ ಒಪ್ಪಂದಕ್ಕೆ ಬರಲಾಗಿದೆ ಎನ್ನಲಾಗಿದೆ.

ಆದರೆ, ಮಂಗಳವಾರ ರಾಹುಲ್ ಗಾಂಧಿ ಮತ್ತು ಶರದ್ ಪವಾರ್ ನಡುವೆ ಪುಣೆಯಲ್ಲಿ ನಡೆದ ಮಾತುಕತೆಯು ಈ ಒಪ್ಪಂದಕ್ಕೆ ಹೆಚ್ಚಿನ ಬಲ ನೀಡಿದೆ. ಕಬ್ಬುಬೆಳೆ ಕುರಿತು ಉಭಯ ನಾಯಕರು ಹೆಚ್ಚೂ ಕಮ್ಮಿ ಮೂರು ಗಂಟೆಗಳ ಕಾಲ ಮಾತುಕತೆ ನಡೆಸಿದರು. ಸಭೆಯಲ್ಲಿ ಸಚಿನ್ ಪೈಲಟ್ ಹಾಗೂ ಪವಾರ್ ಪುತ್ರಿ ಸುಪ್ರಿಯಾ ಸುಲೆ ಭಾಗವಹಿಸಿದ್ದರು.

ಭುಜ್ಬಲ್ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಅಶೋಕ್ ಚವ್ಹಾಣ್, ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್, ವಿಲಾಸ್‌ರಾವ್ ದೇಶ್‌ಮುಖ್, ನಾರಾಯಣ್ ರಾಣೆ, ಗುರುದಾಸ್ ಕಾಮತ್, ಅಜಿತ್ ಪವಾರ್, ಆರ್.ಆರ್. ಪಾಟಿಲ್, ವಿಜಯಸಿನ್ಹಾ ಮೋಹಿತೆ ಹಾಗೂ ಇತರ ನಾಯಕರು ಭಾಗವಹಿಸಿದ್ದರು.

ಎನ್‌ಸಿಪಿಯು ಶಿವಸೇನಾ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಿದೆ ಎಂಬ ಊಹಾಪೋಹಕ್ಕೆ ತೆರೆಬಿದ್ದಂತಾಗಿದೆ. ಕಳೆದ 2004ರ ಚುನಾವಣೆಯಲ್ಲಿ ಎನ್‌ಸಿಪಿ 23 ಸ್ಥಾನಗಳಲ್ಲಿ ಸ್ಫರ್ಧಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಂದಿನ ಸಿಇಸಿಯಾಗಿ ಚಾವ್ಲಾ: ರಾಷ್ಟ್ರಪತಿ ಅಂಗೀಕಾರ
ಬ್ರಹ್ಮೋಸ್ ಕ್ಷಿಪಣಿ ಯಶಸ್ವಿ ಉಡಾವಣೆ
ಪಾಕ್‌ ಕುತಂತ್ರದ ಹೇಳಿಕೆಗೆ ಭಾರತ ತಿರುಗೇಟು
'ಕೆಲಸಕ್ಕೆ ಹಾಜರಾದ' ಪ್ರಧಾನಿ ಮನಮೋಹನ್ ಸಿಂಗ್
ಬಾಂಗ್ಲಾ ದಂಗೆ: ಪ.ಬಂಗಾಳಕ್ಕೆ ಹೆಚ್ಚಿನ ಪಡೆ
'ಜೈ ಹೋ'ದ ಕಾಫಿರೈಟ್ ಪಡೆದ ಕಾಂಗ್ರೆಸ್