ದೇಶಿ ನಿರ್ಮಿತ ಪ್ರತಿಬಂಧಕ ಕ್ಷಿಪಣಿಯ ಯಶಸ್ವೀ ಪರೀಕ್ಷೆಯನ್ನು ಶುಕ್ರವಾರ ಭಾರತ ನಡೆಸಿದೆ. ನಿರೋಧಕ ಕ್ಷಿಪಣಿಯು ಒಳಬರುವ 'ವೈರಿ' ಕ್ಷಿಪಣಿಯನ್ನು ಸಮುದ್ರ ಮಟ್ಟದಿಂದ 80 ಕಿಲೋ ಮೀಟರ್ ಎತ್ತರದಲ್ಲಿ ಧ್ವಂಸಮಾಡಿತು ಎಂಬುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒರಿಸ್ಸಾ ಕರಾವಳಿಯ ವೀಲರ್ ದ್ವೀಪವನ್ನು ಒಳಬರುವ ಕ್ಷಿಪಣಿಯು ತಲುಪುತ್ತಿರುವಂತೆ, ಇದನ್ನು ಪ್ರತಿಬಂಧಿಸಲು ವಾಯುರಕ್ಷಣಾ ಪೃಥ್ವಿ ಕ್ಷಿಪಣಿಯನ್ನು 80 ಕಿಲೋಮೀಟರ್ ಎತ್ತರದಲ್ಲಿ ಧ್ವಂಸ ಮಾಡಲು ಹಾರಿಸಲಾಗಿದ್ದು, ಅದು ವೈರಿ ಕ್ಷಿಪಣಿಯನ್ನು ಧ್ವಂಸಗೊಳಿಸಿತು ಎಂಬುದಾಗಿ ಅವರು ಹೇಳಿದ್ದಾರೆ.
ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯು ಪರಿಶ್ರಮದ ಫಲವಾಗಿ ಈ ಪ್ರತಿಬಂಧಕ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಲಾಗಿದೆ. |