ಮಾಲೆಗಾಂವ್ ಸ್ಫೋಟ ಆರೋಪಿಯಾಗಿರುವ ನಿವೃತ್ತ ಮೇಜರ್ ರಮೇಶ್ ಉಪಾಧ್ಯಾಯ್ ಅವರು ಚುನಾವಣೆಯಲ್ಲಿ ಸ್ಫರ್ಧಿಸುವ ಆಕಾಂಕ್ಷೆ ಹೊಂದಿದ್ದು, ಈ ಕುರಿತು ಅನುಮತಿಗಾಗಿ ಶುಕ್ರವಾರ ವಿಶೇಷ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.ಮೋಕಾ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಚುನಾವಣೆಯಲ್ಲಿ ಸ್ಫರ್ಧಿಸುವ ತನ್ನ ಇಚ್ಚೆಯನ್ನು ವ್ಯಕ್ತಪಡಿಸಿದ್ದಾರೆ. ಉಪಾಧ್ಯಾಯ ಪ್ರಸ್ತುತ ಆರ್ಥರ್ ರಸ್ತೆಯಲ್ಲಿ ಬಂಧಿಯಾಗಿದ್ದಾರೆ." ಉಪಾಧ್ಯಾಯ ಅವರದ್ದು ಗೌರವಾನ್ವಿತ ಹಾಗೂ ಪರಿಶುದ್ಧವಾದ ಇತಿಹಾಸವಾಗಿದ್ದು ಅವರಿಗೆ ಚುನಾವಣೆಯಲ್ಲಿ ಸ್ಫರ್ಧಿಸುವ ಹಕ್ಕಿದೆ. ಅವರನ್ನು ಪ್ರಸ್ತುತ ಪ್ರಕರಣದಲ್ಲಿ ಎಟಿಸ್ ತಪ್ಪಾಗಿ ಸಿಲುಕಿಸಿದೆ, ಇದು ರಾಜಕೀಯ ಪ್ರೇರಿತವಾಗಿದೆ" ಎಂದು ಅವರ ವಕೀಲ ನವೀನ್ ಚೋಮಲ್ ಅವರು ಪಿಟಿಐಗೆ ತಿಳಿಸಿದ್ದಾರೆ.22 ವರ್ಷಗಳ ಕಾಲ ಭಾರತೀಯ ಸೇನೆಗೆ ಸೇವೆ ಸಲ್ಲಿಸಿರುವ ಉಪಾಧ್ಯಾಯ್ ಅವರು ಭ್ರಷ್ಟಾಚಾರ ಮತ್ತು ಭ್ರಷ್ಟ ರಾಜಕೀಯ ಪಕ್ಷಗಳ ವಿರುದ್ಧ ಹೋರಾಡುತ್ತಿದ್ದು ಅವರು ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಸಮರ್ಥರಾಗಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.ಚುನಾವಣಾ ಸ್ಫರ್ಧೆಗೆ ಅಗತ್ಯವಾಗಿರುವ ದಾಖಲೆ ಪತ್ರಗಳು ಮತ್ತು ಪ್ರಮಾಣ ಪತ್ರವನ್ನು ಸಲ್ಲಿಸಲು ಅರ್ಜಿಯಲ್ಲಿ ಅನುಮತಿ ಕೇಳಲಾಗಿದೆ. |