ಮುಂಬೈ ದಾಳಿಯವೇಳೆ ಜೀವಂತ ಸೆರೆಸಿಕ್ಕಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ವಿರುದ್ಧದ ಆರೋಪಪಟ್ಟಿಯನ್ನು ಶನಿವಾರ ಕೇಂದ್ರ ಗೃಹಸಚಿವಾಲಯಕ್ಕೆ ಕಳುಹಿಸಿರುವ ಮುಂಬೈ ಪೊಲೀಸ್, ಇದರೊಂದಿಗೆ ಪಾಕಿಸ್ತಾನ ಪ್ರಾಧಿಕಾರವು ಕೇಳಿರುವ 30 ಪ್ರಶ್ನೆಗಳಿಗೆ ಉತ್ತರ ನೀಡಿದೆ.ಇದನ್ನು ಪಾಕಿಸ್ತಾನ ಸರ್ಕಾರಕ್ಕೆ ಒಪ್ಪಿಸುವುದು ಕೇಂದ್ರ ಸರ್ಕಾರದ ವಿಶೇಷಾಧಿಕಾರವಾಗಿದೆ. ಕಳೆದ ವಾರ ಗೃಹ ಸಚಿವ ಪಿ. ಚಿದಂಬರಂ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಇಬ್ಬರೂ ಪಾಕಿಸ್ತಾನದ 30 ಪ್ರಶ್ನೆಗಳಿಗೆ ಸದ್ಯವೇ ಉತ್ತರಿಸುವುದಾಗಿ ಹೇಳಿದ್ದರು.ಆದಾಗ್ಯೂ, ಉತ್ತರಗಳ ಕುರಿತು ತೃಪ್ತಿಹೊಂದಿದ ಬಳಿಕವೇ ಉತ್ತರಗಳನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗುವುದು ಎಂಬುದಾಗಿ ಚಿದಂಬರಂ ಹೇಳಿದ್ದಾಕೆ. ಇದಲ್ಲದೆ ಪಾಕಿಸ್ತಾನವು ಇನ್ನಷ್ಟು ಪ್ರಶ್ನೆಗಳನ್ನು ಕೇಳುವ ಸಾಧ್ಯತೆಯನ್ನು ಅವರು ತಳ್ಳಿಹಾಕಿಲ್ಲ.ಆರೋಪಪಟ್ಟಿಯಲ್ಲಿ ಕಸಬ್‌ನ ತಪ್ಪೊಪ್ಪಿಗೆ ಮತ್ತು ದಾಳಿಕೋರರ ಸಂಭಾಷಣೆಯ ಪ್ರತಿಗಳು ಮತ್ತು ಗುಜರಾತಿನಲ್ಲಿ ಬೋಟನ್ನು ಅಪಹರಿಸಿದ ಕುರಿತು ವಿವರಗಳು ಸೇರಿವೆ. |