ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮುಂಬೈದಾಳಿ ಕುರಿತು ಪಾಕ್ ಸಹಕರಿಸಬೇಕು: ಮುಷರಫ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಂಬೈದಾಳಿ ಕುರಿತು ಪಾಕ್ ಸಹಕರಿಸಬೇಕು: ಮುಷರಫ್
ಮುಂಬೈ ದಾಳಿ ಪ್ರಕರಣದ ತನಿಖೆಗೆ ಪಾಕಿಸ್ತಾನ ಸರ್ಕಾರವು ಸಹಕರಿಸಬೇಕು ಮತ್ತು ದಾಳಿಯ ಹಿಂದಿರುವ ವ್ಯಕ್ತಿಗಳಿಗೆ ಶಿಕ್ಷೆಯಾಗಬೇಕು ಎಂಬುದಾಗಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಹೇಳಿದ್ದಾರೆ.

"ಇದು ದುರದೃಷ್ಟಕರ. ಇದೊಂದು ಭಯೋತ್ಪಾದನಾ ಕತ್ಯ. ಭಯೋತ್ಪಾದಕರು ರಾಷ್ಟ್ರರಹಿತರು" ಎಂಬುದಾಗಿ ಅವರು ಅಭಿಪ್ರಾಯಿಸಿದ್ದಾರೆ. ಅವರು ಇಲ್ಲಿ ನಡೆದ ವಿಚಾರ ಸಂಕಿರಣ ಒಂದರಲ್ಲಿ ಭಾಗವಹಿಸಿದ್ದ ವೇಳೆ ಮುಂಬೈ ದಾಳಿ ಕುರಿತು ಅವರ ಪ್ರತಿಕ್ರಿಯೆ ಕೇಳಿದ ವೇಳೆಗೆ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲದೆ ಯೋದ್ಧೋನ್ಮಾದ ಸೃಷ್ಟಿಸುತ್ತದೆ ಎಂದು ಭಾರತವನ್ನು ದೂರಿದರು.

ಉಗ್ರವಾದಿ ಕೃತ್ಯ ನಡೆದಿರುವ ಕಾರಣ ಪಾಕಿಸ್ತಾನ ಸಹಕರಿಸಬೇಕು. ಮತ್ತು ಇದನ್ನು ನಡೆಸಿದ ಎಲ್ಲರಿಗೂ ಶಿಕ್ಷೆಯಾಗಬೇಕು ಎಂದರಾದರೂ, ಈ ದಾಳಿಯ ಮೂಲ ಪಾಕಿಸ್ತಾನವೇ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು. ತಾನು ಉನ್ನತ ಹುದ್ದೆಯಲ್ಲಿ ಇಲ್ಲದ ಕಾರಣ ಭಾರತ ಸಲ್ಲಿಸಿದ ವಿವರಗಳು ತನಗೆ ತಿಳಿದಿಲ್ಲ ಎಂದು ನುಡಿದರು.

ದಾಳಿಯ ಮರುದಿನವೇ ಭಾರತವು ಈ ದಾಳಿಯ ಮೂಲ ಪಾಕಿಸ್ತಾನ ಎಂದು ಹೇಳಿರುವುದನ್ನು ಟೀಕಿಸಿದರು. ಇದನ್ನೇ ನಾವು ಲಾಹೋರ್ ದಾಳಿಗೂ ಹೇಳಬಹುದೇ? ಎಂದು ಪ್ರಶ್ನಿಸಿದ ಅವರು ವಿವೇಚನೆಯ ಹೇಳಿಕೆಗಳನ್ನು ನೀಡಬೇಕು ಎಂದು ನುಡಿದರು.

ಅಲ್ಲದೆ, ಭಾರತವು ಯುದ್ಧೋನ್ಮಾದವನ್ನು ಸೃಷ್ಟಿಸುತ್ತದೆ ಎಂದು ಆಪಾದಿಸಿದ ಮುಷರಫ್, ಮುಂಬೈ ದಾಳಿಯ ಬಳಿಕದ ಯುದ್ಧದ ಸಲಹೆಗಳನ್ನು ಪ್ರಸ್ತಾಪಿಸುತ್ತಾ, ಇವುಗಳು ಗಂಭೀರ ಪರಿಸ್ಥಿತಿಗಳು. ಪಾಕಿಸ್ತಾನದ ಬಳಿಯೂ ಶಸ್ತ್ರಾಸ್ತ್ರ ಪಡೆಗಳಿವೆ ಎಂದು ಎಚ್ಚರಿಕೆ ಧ್ವನಿಯಲ್ಲಿ ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಡ್ವಾಣಿ ಭರವಸೆ
ಆಂಟನಿ ಪುತ್ರನಿಗೆ ಜೀವ ಬೆದರಿಕೆ ಕರೆ
ಎಡಪಕ್ಷಗಳಿಗೆ ಸವಾಲು ಹಾಕಿದ ವೆಂಕಯ್ಯ ನಾಯ್ಡು
ಬಿಜೆಪಿ, ಟಿಎಂಸಿ ನಡುವೆ ರಹಸ್ಯ ಒಪ್ಪಂದ: ಸಿಪಿಐ
ಜಾಹೀರಾತು ದುಡ್ಡು ಕಕ್ಕಲು ಚು.ಆಯೋಗದ ತಾಕೀತು
ತಮಿಳ್ನಾಡಿನಲ್ಲಿ ದಲಿತರಿಬ್ಬರ ಕೊಚ್ಚಿ ಕೊಲೆ