ಸುಮಾರು 180ಕ್ಕೂ ಮಂದಿಯನ್ನು ಆಹುತಿ ಪಡೆದಿರುವ ಮುಂಬೈಭಯೋತ್ಪಾದನಾ ದಾಳಿಗೆ ಸಂಬಂಧಿಸಿದಂತೆ ಏಳು ರಾಷ್ಟ್ರಗಳ ಸಂಪರ್ಕ ಪತ್ತೆಯಾಗಿರುವುದಾಗಿ ಇಂಟರ್‌ಪೋಲ್‌ನ ಮಹಾಕಾರ್ಯದರ್ಶಿ ರೋನಾಲ್ಡ್ ಕೆ ನೋಬ್ಲ್ ಹೇಳಿದ್ದಾರೆ." ಮುಂಬೈದಾಳಿ ತನಿಖೆಗಾಗಿ ಇಂಟರ್‌ಪೋಲ್ ಮತ್ತು ಪಾಕಿಸ್ತಾನವು ಪರಸ್ಪರ ಸಹಕರಿಸುತ್ತಿವೆ, ವಿವಿಧ ಏಳು ರಾಷ್ಟ್ರಗಳ ಸಂಪರ್ಕಗಳು ತನಿಖೆಯ ವೇಳೆ ಪತ್ತೆಯಾಗಿವೆ. ಉಗ್ರರು ಎಲ್ಲೇ ಅಡಗಿರಲಿ ಅವರ ಪತ್ತೆಗಾಗಿ ನಾವು ಪ್ರಯತ್ನಿಸುತ್ತೇವೆ" ಎಂಬುದಾಗಿ ನೋಬ್ಲ್ ಹೇಳಿರುವುದಾಗಿ ದಿ ನೇಶನ್ ಪತ್ರಿಕೆ ಉಲ್ಲೇಖಿಸಿದೆ.ಮುಂಬೈ ದಾಳಿಗೆ ಸಂಬಂಧಿಸಿದಂತೆ ಏಳು ರಾಷ್ಟ್ರಗಳಲ್ಲಿ ಇರುವ ಮಾಹಿತಿಗಳನ್ನು ಪಡೆಯಲು ಪಾಕಿಸ್ತಾನ ಇಂಟರ್‌ಪೋಲ್ ಸಹಾಯ ಯಾಚಿಸಿದೆ ಎಂದು ಅವರು ಹೇಳಿದ್ದಾರೆ.ಮೂರುದಿನಗಳ ಕಾಲ ಪಾಕಿಸ್ತಾನದಲ್ಲಿ ತಂಗಿದ್ದ ಅವರು ಪ್ರಧಾನಿ ಯೂಸುಫ್ ರಾಜಾ ಗಿಲಾನಿ, ಆಂತರಿಕ ಸಲಹಾಗಾರ ರೆಹ್ಮಾನ್ ಮಲ್ಲಿಕ್ ಮತ್ತು ಫೆಡರಲ್ ಇನ್ವೆಸ್ಟಿಗೇಶನ್ ಏಜೆನ್ಸಿಯ ಡಿಜಿ ತಾರಿಕ್ ಕೋಸಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. |