ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಏಮ್ಸ್ ನಿರ್ದೇಶಕರಾಗಿ ಡಾ.ಡೇಕಾ ನೇಮಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಏಮ್ಸ್ ನಿರ್ದೇಶಕರಾಗಿ ಡಾ.ಡೇಕಾ ನೇಮಕ
ಏಮ್ಸ್(ಎಐಐಎಂಎಸ್)ನ ಹೊಸ ನಿರ್ದೇಶಕರನ್ನಾಗಿ ನೇಮಿಸಲಾಗಿದ್ದು, ಮುಂದಿನ ಐದು ವರ್ಷಗಳ ಕಾಲ ಅವರು ರಾಷ್ಟ್ರದ ಈ ಮುಂಚೂಣಿ ವೈದ್ಯಕೀಯ ಸಂಸ್ಥೆಯ ಉನ್ನತ ಸ್ಥಾನವನ್ನು ಹೊಂದಲಿದ್ದಾರೆ. ಪ್ರಸ್ತುತ ಡೀನ್ ಆಗಿರುವ ವೈದ್ಯ ಡೇಕಾ ಅವರು ಇಎನ್‌ಟಿ ವಿಭಾಗದ ಮುಖ್ಯಸ್ಥರೂ ಆಗಿದ್ದಾರೆ.

ಸುಮಾರು ಒಂಬತ್ತು ತಿಂಗಳ ವಿವಾದದ ಬಳಿಕ ಸಂಪುಟದ ನೇಮಕ ಸಮಿತಿ(ಎಸಿಸಿ)ಯು ಮಂಗಳವಾರ ಡೇಕಾ ಅವರ ಹೆಸರನ್ನು ಅಂತಿಮಗೊಳಿಸಿದೆ.

"ಡೇಕಾ ನೇಮಕಾತಿಯ ಆದೇಶವನ್ನು ಮಂಗಳವಾರ ನೀಡಲಾಗಿದೆ. ಅವರು ತಕ್ಷಣಕ್ಕೆ ಜಾರಿಗೆ ಬರುವಂತೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮುಂದಿನ ಐದು ವರ್ಷಗಳಕಾಲ ಅಥವಾ ಮುಂದಿನ ಅದೇಶದ ತನಕ ಅವರು ಅಧಿಕಾರವಧಿ ಹೊಂದಿರುತ್ತಾರೆ" ಎಂದು ಆರೋಗ್ಯ ಕಾರ್ಯದರ್ಶಿ ನರೇಶ್ ದಯಾಳ್ ಅವರು ಪಿಟಿಐಗೆ ತಿಳಿಸಿದ್ದಾರೆ.

ಈ ಕುರಿತ ಅಧಿಕೃತ ಹೇಳಿಕೆಯನ್ನು ಮಂಗಳವಾರ ಸಾಂಯಕಾಲ ನಾಲ್ಕುಗಂಟೆಯೊಳಗಾಗಿ ತಲುಪಿಸಲಾಗುವುದು ಎನ್ನಲಾಗಿದೆ. ಮಾಜಿ ನಿರ್ದೇಶಕ ಪಿ. ವೇಣುಗೋಪಾಲ್ ಅವರು ಕಳೆದ ಜುಲೈಯಲ್ಲಿ ನಿವೃತ್ತಿಗೊಂಡ ಬಳಿಕ ಡಾ. ಟಿ.ಡಿ. ಡೋಗ್ರಾ ಅವರು ಉಸ್ತುವಾರಿ ನಿರ್ದೇಶಕಾರಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಏಮ್ಸ್, ಆರ್ಸಿ ಡೇಕಾ
ಮತ್ತಷ್ಟು
ವೈದ್ಯ ವಿದ್ಯಾರ್ಥಿ ಅಮನ್ ರ‌್ಯಾಗಿಂಗ್‌ಗೆ ಬಲಿ
ದಾಳಿಕೋರರ ಡಿಎನ್ಎ ಮಾದರಿ ಇಂಟರ್‌ಪೋಲ್‌ಗೆ
ವಿದ್ಯುತ್ ಶಾರ್ಟ್ ಸರ್ಕಿಟ್: ನಾಲ್ವರ ದಹನ
ಹಿಂದೂ ವಿರೋಧಿ ಪಟ್ನಾಯಿಕ್: ಸಿಂಘಾಲ್
ವೀಡಿಯೋ ಕಾನ್ಫರೆನ್ಸ್ ಮ‌ೂಲಕ ಕಸಬ್ ವಿಚಾರಣೆ
ಎಚ್ಚರಿಕೆಯ ಹೆಜ್ಜೆ ಇರಿಸುತ್ತಿರುವ ಪಟ್ನಾಯಿಕ್