ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಬಿಜೆಡಿಗೆ ಗಾಳ: ಗೌಡರ ವಿರುದ್ಧ ಎಸ್ಪಿ ಆಕ್ರೋಶ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಡಿಗೆ ಗಾಳ: ಗೌಡರ ವಿರುದ್ಧ ಎಸ್ಪಿ ಆಕ್ರೋಶ
ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳ (ಬಿಜೆಡಿ)ಯನ್ನು ತೃತೀಯ ರಂಗಕ್ಕೆ ಆಹ್ವಾನಿಸಿದ ಮಾಜಿ ಪ್ರಧಾನಿ, ಜೆಡಿಎಸ್ ಮುಖ್ಯಸ್ಥ ಎಚ್.ಡಿ.ದೇವೇಗೌಡ ಕ್ರಮವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಸಮಾಜವಾದಿ ಪಕ್ಷ ನಾಯಕ ಮುಲಾಯಂ ಸಿಂಗ್ ಯಾದವ್, 'ಗೌಡರು ಬಿಜೆಪಿಯೊಂದಿಗೆ ಒಳಒಪ್ಪಂದ ಮಾಡಿಕೊಂಡು ಕೋಮುವಾದದ ಬಗ್ಗೆ ಮಾತನಾಡುತ್ತಿದ್ದಾರೆ' ಎಂದು ಟೀಕಿಸಿದ್ದಾರೆ.

ದೇವೇಗೌಡರು ನನ್ನ ಒಳ್ಳೆಯ ಮಿತ್ರ. ಆದರೆ ಅವರು ಮತ್ತು ಅವರ ಪುತ್ರ ಇಬ್ಬರೂ ಕರ್ನಾಟಕದಲ್ಲಿ ಬಿಜೆಪಿ ಜೊತೆ ಸೇರಿಕೊಂಡು ಸಮ್ಮಿಶ್ರ ಸರಕಾರ ನಡೆಸಿದ್ದರು. ಬಿಜೆಡಿಯು 11 ವರ್ಷಗಳ ಕಾಲ ಬಿಜೆಪಿಯೊಂದಿಗೆ ಮೈತ್ರಿಯಲ್ಲಿದ್ದ ಪಕ್ಷ. ಇದೀಗ ದಿಢೀರ್ ಆಗಿ, ಈ ಪಕ್ಷವು ಗೌಡರಿಗೆ ಸ್ವೀಕಾರಾರ್ಹವಾಗಿಬಿಟ್ಟಿದೆ. ಜಾತ್ಯತೀತತೆ ಮತ್ತು ಕೋಮುವಾದ ಕುರಿತ ವಿಚಾರಧಾರೆ ಯಾವತ್ತಿಗೂ ಸ್ಥಿರವಾಗಿರಬೇಕು ಎಂದು ಎಸ್ಪಿ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ನವದೆಹಲಿಯಲ್ಲಿ ಹೇಳಿದ್ದಾರೆ.

ಜಾತ್ಯತೀತತೆ ಬಗ್ಗೆ ಮುಲಾಯಂ ಸಿಂಗ್ ಅಥವಾ ಎಡಪಕ್ಷಗಳು ಮಾತನಾಡುವುದನ್ನು ನಾನು ಕೇಳಬಲ್ಲೆ. ಯಾಕೆಂದರೆ ಅವರೆಂದಿಗೂ ಕೇಸರೀಕರಣಕ್ಕೆ ತಮ್ಮನ್ನು ಒಡ್ಡಿಕೊಂಡಿಲ್ಲ. ಆದರೆ ಗೌಡ ಮತ್ತು ಬಿಜೆಡಿ, ಬಿಜೆಪಿಯೊಂದಿಗೆ ಅಧಿಕಾರದ ಸವಿಯುಂಡ ಬಳಿಕ ಕೋಮುವಾದದ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಒಮ್ಮೆ ಮಾಯಾವತಿಯವರ ಬಿಎಸ್ಪಿ ಪಕ್ಷ ಸೇರಿದರೆ ಎಲ್ಲ ಗ್ಯಾಂಗ್‌ಸ್ಟರ್‌ಗಳು ಮತ್ತು ಗೂಂಡಾಗಳು ಪವಿತ್ರರಾಗಿಬಿಡುತ್ತಾರಲ್ಲ, ಹಾಗಾಯಿತು ಎಂದು ಲೇವಡಿ ಮಾಡಿದರು.

ಗೌಡರು ಬಿಜೆಡಿಗೆ ಪತ್ರ ಬರೆದು, 'ಕೋಮುವಾದಿ ಮತ್ತು ಫ್ಯಾಸಿಸ್ಟ್' ಬಿಜೆಡಿಯೊಂದಿಗಿನ ಮೈತ್ರಿಯಿಂದ ಹೊರಬಂದಿರುವ 'ಬೋಲ್ಡ್' ನಿರ್ಧಾರ ಕೈಗೊಂಡಿದ್ದಕ್ಕಾಗಿ ನವೀನ್ ಪಟ್ನಾಯಕ್ ಅವರನ್ನು ಅಭಿನಂದಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲಾಲು ವಿರುದ್ಧ ಕೇಸು ದಾಖಲಿಗೆ ಕೋರ್ಟ್ ಆದೇಶ
ಏಮ್ಸ್ ನಿರ್ದೇಶಕರಾಗಿ ಡಾ.ಡೇಕಾ ನೇಮಕ
ವೈದ್ಯ ವಿದ್ಯಾರ್ಥಿ ಅಮನ್ ರ‌್ಯಾಗಿಂಗ್‌ಗೆ ಬಲಿ
ದಾಳಿಕೋರರ ಡಿಎನ್ಎ ಮಾದರಿ ಇಂಟರ್‌ಪೋಲ್‌ಗೆ
ವಿದ್ಯುತ್ ಶಾರ್ಟ್ ಸರ್ಕಿಟ್: ನಾಲ್ವರ ದಹನ
ಹಿಂದೂ ವಿರೋಧಿ ಪಟ್ನಾಯಿಕ್: ಸಿಂಘಾಲ್