ಸಂವಿಧಾನವು ನೀಡಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ಇತರ ಧರ್ಮಗಳನ್ನು ಹಳಿಯಲು ಬಳಸಬಾರದು ಎಂಬುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಗುರುವಾರ ಎಚ್ಚರಿಸಿದ್ದಾರೆ.ಬೈಪಾಸ್ ಸರ್ಜರಿಗೊಳಗಾದ ಬಳಿಕ ಪ್ರಥಮ ಬಾರಿಗೆ ಜನತೆಯೊಂದಿಗೆ ಅವರು ಸಂವಾದ ನಡೆಸಿದರು. ಜನವರಿಯಲ್ಲಿ ಶಸ್ತ್ರಕ್ರಿಯೆಗೊಳಗಾದ ಬಳಿಕ ಪ್ರಧಾನಿ ಸಿಂಗ್ ವಿಶ್ರಾಂತಿಯಲ್ಲಿದ್ದರು." ನಮ್ಮ ಸಂವಿಧಾನವು ಪ್ರಜೆಗಳಿಗೆ ತಮ್ಮ ಆಯ್ಕೆಯ ಯಾವುದೇ ಧರ್ಮವನ್ನು ಅನುಸರಿಸಲು ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದೆ. ಆದರೆ, ಇದು ಇತರ ಧರ್ಮದ ವಿರುದ್ಧ ಟೀಕಿಸಲು ಅಥವಾ ಹಳಿಯಲು ಪರವಾನಗಿ ನೀಡಿಲ್ಲ" ಎಂಬುದಾಗಿ ಅವರು ಹೇಳಿದ್ದಾರೆ. |