ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಒರಿಸ್ಸಾ ವಿಧಾನಸಭೆಯಲ್ಲಿ ಮಾರಾಮಾರಿ, ಮುಂದೂಡಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒರಿಸ್ಸಾ ವಿಧಾನಸಭೆಯಲ್ಲಿ ಮಾರಾಮಾರಿ, ಮುಂದೂಡಿಕೆ
ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾದಳವು ತನ್ನ ಬಹುಮತ ಸಾಬೀತಿಗಾಗಿ ಕರೆದಿದ್ದ ವಿಧಾನಸಭಾ ಅಧಿವೇಶನವು ಬುಧವಾರ ಅತ್ಯಂತ ಕೊಳಕು ದೃಶ್ಯಗಳಿಗೆ ಸಾಕ್ಷಿಯಾಯಿತು. ಶಾಸಕನೊಬ್ಬ ಕುರ್ಚಿ ಎತ್ತಿ ಸ್ಪೀಕರ್ ‌ಕಡೆ ಎಸೆದ ಬಳಿಕ ಉಂಟಾದ ಕೋಲಾಹಲದಿಂದಾಗಿ ಸಭೆಯನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ.

ನವೀನ್ ಪಟ್ನಾಯಕ್ ಅವರು ತನಗೆ 74 ಶಾಸಕರ ಬೆಂಬಲವಿದೆ ಎಂಬುದಾಗಿ ಶಾಸಕರ ಪೆರೇಡ್ ನಡೆಸಿದ್ದರೂ, ಇಂದು ಕಾಂಗ್ರೆಸ್ ತಾನು ಸರ್ಕಾರದ ವಿರುದ್ಧವಾಗಿ ಮತಚಲಾಯಿಸುವುದಾಗಿ ಹೇಳಿದೆ.

ಕಾಂಗ್ರೆಸ್ ಮುಖಂಡ ಜಿ.ಬಿ. ಪಟ್ನಾಯಕ್ ಅವರು, "ಕಾಂಗ್ರೆಸ್ ಸರ್ಕಾರದ ವಿರುದ್ಧ ಮತಚಲಾಯಿಸಲಿದೆ" ಎಂದು ಹೇಳಿದ್ದಾರೆ. ಆದರೆ ಬಿಜೆಡಿಯನ್ನು ತನ್ನ ತೆಕ್ಕೆಗೆ ಎಳೆದುಕೊಳ್ಳಲು ಬಯಸುತ್ತಿರುವ ತೃತೀಯ ರಂಗವು ನವೀನ್ ಪಟ್ನಾಯಕ್ ಸರ್ಕಾರಕ್ಕೆ ಬೆಂಬಲ ಘೋಷಿಸಿದೆ.

ಬಿಜೆಪಿ ಮತ್ತು ಬಿಜೆಡಿ ನಡುವೆ ಸೀಟು ಹೊಂದಾಣಿಕೆ ವಿಚಾರದಲ್ಲಿ ಉಂಟಾಗಿರುವ ವೈಮನಸ್ಸಿನ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲ ಹಿಂತೆಗೆದುಕೊಂಡ ಕಾರಣ ಸರ್ಕಾರವು ಅಲ್ಪಸಂಖ್ಯಾತವಾಗಿದೆ. 147 ಸದಸ್ಯ ಬಲದ ಶಾಸನ ಸಭೆಯಲ್ಲಿ ಬಿಜೆಡಿಯು 61 ಸ್ಥಾನಗಳನ್ನು ಹೊಂದಿದ್ದು, ಬಹುಮತ ಸಾಬೀತಿಗೆ 13 ಸದಸ್ಯರ ಬೆಂಬಲದ ಅವಶ್ಯಕತೆ ಇದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಹುಮತ ಕಳೆದುಕೊಂಡ ಎನ್‌ಸಿಪಿ ನೇತೃತ್ವದ ಮೇಘಾಲಯ ಸರ್ಕಾರ
ಗೌಡರ ಹೇಳಿಕೆಯನ್ನು ಅಲ್ಲಗಳೆದ ಬಿಜೆಡಿ
ತೃತೀಯ ರಂಗ: ಸಿಪಿಎಂ
ಪಾಕ್‌ ಪ್ರಶ್ನೆಗೆ ಈ ವಾರ ಉತ್ತರ
ಜಾರ್ಖಂಡ್: ಎಲ್‌ಜೆಪಿ ಪಾಲಿಗೆ ಆರು ಸ್ಥಾನಗಳು
ಧಾರ್ಮಿಕ ಸ್ವಾತಂತ್ರ್ಯ ದುರ್ಬಳಕೆ ವಿರುದ್ಧ ಪಿಎಂ ಎಚ್ಚರಿಕೆ