ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ವಿಷಕಾರಿ ಹೋಳಿ ಬಣ್ಣ: 16 ಮಕ್ಕಳು ಐಸಿಯುನಲ್ಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಷಕಾರಿ ಹೋಳಿ ಬಣ್ಣ: 16 ಮಕ್ಕಳು ಐಸಿಯುನಲ್ಲಿ
ಹೋಳಿ ಆಡುತ್ತಿದ್ದ ವೇಳೆ ಬಣ್ಣದಲ್ಲಿನ ರಾಸಾಯಿನಿಕ ಸಂಬಂಧಿತ ವಿಷವಸ್ತುವಿನ ಪರಿಣಾಮ ಸುಮಾರು 50 ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದು, ಇವರಲ್ಲಿ ಗಂಭೀರ ಸ್ಥಿತಿಯಲ್ಲಿರುವ 16 ಮಕ್ಕಳು ಐಸಿಯುಗೆ ದಾಖಲಾಗಿರುವ ಆಘಾತಕಾರಿ ಘಟನೆಯು ಅಂಬರ್‌ನಾಥ್ ಹೊರವಲಯದಲ್ಲಿ ಸಂಭವಿಸಿದೆ.

"ಹೊಟ್ಟೆ ಹಿಡಿದುಕೊಂಡಂತಾಗುತ್ತಿದೆ ಎಂದು ಆರಂಭದಲ್ಲಿ ಹೇಳಿದ ಮಕ್ಕಳು ಬಳಿಕ ವಾಂತಿ ಮಾಡಲಾರಂಭಿಸಿದರು. ಅರೆಪ್ರಜ್ಞಾವಸ್ಥೆಯಲ್ಲಿದ್ದ ಇವರನ್ನು ತಕ್ಷಣವೇ ಉಲ್ಲಾಸನಗರ ಕೇಂದ್ರೀಯ ಆಸ್ಪತ್ರೆಗೆ ದಾಖಲಿಸಲಾಯಿತು.
ಮಕ್ಕಳು ಆಟವಾಡಲು ಬಳಸಿದ್ದ ಹಳದಿ ಬಣ್ಣದಲ್ಲಿ ಇದ್ದ ರಾಸಾಯನಿಕಗಳು ಚರ್ಮದ ಮೇಲಿನ ಸೂಕ್ಷ್ಮ ರಂಧ್ರಗಳ ಮೂಲಕ ದೇಹದೊಳಗೆ ಸೇರಿರಬಹುದು ಇಲ್ಲವೇ, ಗೊತ್ತಿಲ್ಲದಂತೆಯೇ ನುಂಗಿಹೋಗಿರಬಹುದು" ಎಂಬುದಾಗಿ ವೈದ್ಯರು ಹೇಳಿದ್ದಾರೆ.

ಅಂಬರ್‌ನಾಥ್ ಪಶ್ಚಿಮದ ಬಾಲಾಜಿನಗರ, ಭಾಸ್ಕರ್ ನಗರ ಮತ್ತು ಹೊಸಬೆಂಡಿಪಾಡ ಎಂಬಲ್ಲಿ ಕಾರ್ಮಿಕರೇ ಹೆಚ್ಚಾಗಿ ವಾಸಿಸುತ್ತಿದ್ದು, ಏಳರಿಂದ ಹದಿಮೂರರ ಹರೆಯದೊಳಗಿನ ಮಕ್ಕಳು ಅನಾರೋಗ್ಯ ಪೀಡಿತರಾಗಿದ್ದಾರೆ.

ಹದಿನಾರು ಮಕ್ಕಳ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಸಿವಿಲ್ ಹಾಸ್ಪಿಟಲ್ ಮತ್ತು ಜುಪಿಟರ್ ಹಾಸ್ಪಿಟಲ್‌ಗೆ ವರ್ಗಾಯಿಸಲಾಗಿದೆ ಎಂದು ವರದಿ ತಿಳಿಸಿದೆ. ಥಾಣೆ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದ ಮೂವರು ಮಕ್ಕಳನ್ನು ಖಾಸಗೀ ಆಸ್ಪತ್ರಗೆ ದಾಖಲಿಸಲಾಗಿದೆ. ಇವರ ಮೈ ಬಣ್ಣ ನೀಲಿಯಾಗಿದ್ದು, ಅವರಿಗೆ ಆಕ್ಸಿಜನ್ ನೀಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

ಹೋಳಿ ಆಡುತ್ತಿದ್ದ ಮಕ್ಕಳು ಮನೆಗೆ ತೆರಳಿ ಚೆನ್ನಾಗಿ ಕೈತೊಳೆಯದೆ ಊಟಮಾಡಿದರೆಂದು ಹೇಳಲಾಗಿದೆ. ಊಟ ಮಾಡಿದ ಬಳಿಕ ಸ್ವಲ್ಪವೇ ಹೊತ್ತಿನಲ್ಲಿ ಅಸ್ವಸ್ಥರಾದ ಮಕ್ಕಳು ವಾಂತಿ ಮಾಡಲಾರಂಭಿಸಿದ್ದರು. ಕೆಲವು ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದು ಹೆತ್ತವರು ತೀರಾ ಕಂಗೆಟ್ಟಿದ್ದಾರೆ.

ಆಸ್ಪತ್ರೆಗೆ ಹೆಚ್ಚುಹೆಚ್ಚು ಮಂದಿ ಧಾವಿಸುತ್ತಲೇ ಆಸ್ಪತ್ರೆಯಲ್ಲೂ ಗೊಂದಲ ಉಂಟಾಗಿ ಭಯಭೀತ ಪರಿಸ್ಥಿತಿ ನಿರ್ಮಾಣವಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಂಗ್ರೆಸ್ ಟಿಸಿ ಸೀಟುಹಂಚಿಕೆ ಒಪ್ಪಂದ ಅಂತಿಮ
ಚೆನ್ನೈಗೆ ಎನ್‌ಎಸ್‌ಜಿ ಕಮಾಂಡೋ ಪಡೆ
ದೇಶದೆಲ್ಲಡೆ ಸಂಭ್ರಮದ ಹೋಳಿ ಆಚರಣೆ
ತೃತೀಯ ರಂಗ ಸಮಾವೇಶಕ್ಕೆ ಕ್ಷಣಗಣನೆ
ಕೊಲ್ಲೂರಿನಲ್ಲಿ ಪೂಜೆ ಸಲ್ಲಿಸಿದ ಬಿ.ವೈ. ರಾಘವೇಂದ್ರ
ಮೋದಿ ಇಮೇಜ್ ಗೋವಾದಲ್ಲಿ ಸಹಕಾರಿಯಾಗಲಿದೆ