ಹೋಳಿ ಆಚರಣೆ ವೇಳೆಗೆ ಹಣಹಂಚಿರುವ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್‌ಗೆ ಚುನಾವಣಾ ಆಯೋಗವು ನೋಟೀಸ್ ಹೊರಡಿಸಿದೆ.ಚುನಾವಣಾ ಘೋಷಣೆಯ ಬಳಿಕ ಪಕ್ಷವು ಹಣವಿತರಿಸಿದ ಕ್ರಮದಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು ಆಯೋಗವು ಈ ಕ್ರಮಕ್ಕೆ ಮುಂದಾಗಿದೆ.ಹಣಹಂಚುವಿಕೆ ದೃಶ್ಯದ ವೀಡಿಯೋ ತುಣುಕುಗಳನ್ನು ವೀಕ್ಷಿಸಿರುವ ಆಯೋಗವು ನೋಟೀಸು ಜಾರಿ ಮಾಡಿದ್ದು, ಮಾರ್ಚ್ 14ರೊಳಗೆ ಉತ್ತರಿಸಬೇಕೆಂದು ತಾಕೀತು ನೀಡಿದೆ. ಏತನ್ಮಧ್ಯೆ, ಜಿಲ್ಲಾ ದಂಡಾಧಿಕಾರಿಯಿಂದಲೂ ಆಯೋಗವು ವರದಿ ಕೇಳಿದೆ.ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರ ಕ್ಷೇತ್ರ ಎಟ್ಟಾವದಲ್ಲಿ ಆಯೋಜಿಸಿದ್ದ ಹೋಳಿ ಹಬ್ಬಾಚರಣೆಯಲ್ಲಿ ಸಮಾಜವಾದಿ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದವರಿಗೆ ತಲಾ 100 ರೂಪಾಯಿ ವಿತರಿಸಿದ್ದರು.ಹೋಳಿ ಹಬ್ಬದ ವೇಳೆ ಹಣ ಹಂಚಿದ ಮುಲಾಯಂ |