ಆತ್ಮರಕ್ಷಣೆಗಾಗಿ ಕೊಲೆ ಮಾಡುವುದಕ್ಕೆ ಕಾನೂನು ಸಮ್ಮತ ಎಂಬ ಅಭಿಪ್ರಾಯದೊಂದಿಗೆ, ಒಬ್ಬ ವ್ಯಕ್ತಿಯನ್ನು ಕೊಲೆ ಮಾಡಿದ 30 ವರ್ಷಗಳ ಬಳಿಕ ನ್ಯಾಯಾಲಯವು ಇಬ್ಬರು ಆರೋಪಿಗಳನ್ನು ಖುಲಾಸೆಗೊಳಿಸಿ ಗುರುವಾರ ತೀರ್ಪು ನೀಡಿದೆ.
ತನ್ನ ಎದುರಾಳಿಯು ತನಗೆ ಗಂಭೀರ ಗಾಯ ಉಂಟುಮಾಡುತ್ತಾನೆ ಎಂದು ಭಾವಿಸಲು ಸಕಾರಣಗಳಿದ್ದರೆ, ವಾಸ್ತವಿಕವಾಗಿ ಆತ ಏನೂ ಮಾಡದಿದ್ದರೂ ಕೂಡ, ಒಬ್ಬ ವ್ಯಕ್ತಿಯು ಆತನನ್ನು ಕೊಲ್ಲಬಹುದು ಎಂದು ಸುಪ್ರೀಂಕೋರ್ಟು ಹೇಳಿದೆ.
1979ರ ಜನವರಿ 27ರಂದು ಮೀರತ್‌ನಲ್ಲಿ ಹಳೆ ದ್ವೇಷಕ್ಕೆ ಸಂಬಂಧಿಸಿದ ನಡೆದ ಕೊಲೆ ಪ್ರಕರಣದಲ್ಲಿ, ಗಜೇ ಸಿಂಗ್ ಮತ್ತು ರಾಜ್‌ಪಾಲ್ ಸಿಂಗ್ ಎಂಬಿಬ್ಬರ ದೋಷಮುಕ್ತಿ ಪ್ರಶ್ನಿಸಿ ಉತ್ತರ ಪ್ರದೇಶ ಸರಕಾರವು ಸಲ್ಲಿಸಿದ್ದ ಮೇಲ್ಮನವಿಯನ್ನು ತಳ್ಳಿಹಾಕುತ್ತಾ ದಲವೀರ್ ಭಂಡಾರಿ ಮತ್ತು ಎಚ್.ಎಸ್.ಬೇಡಿ ಅವರಿದ್ದ ಸುಪ್ರೀಂ ಕೋರ್ಟು ಪೀಠವು ಈ ತೀರ್ಪು ನೀಡಿದೆ.
ಈ ಪ್ರಕರಣದಲ್ಲಿ, ಲಾಖಿ ರಾಮ್ ಹಾಗೂ ಮತ್ತಿತರ ಕೆಲವರು ಗಜೇ ಸಿಂಗ್ ಮತ್ತು ರಾಜ್‌ಪಾಲ್ ಇದ್ದಲ್ಲಿಗೆ ಹೋಗಿದ್ದಾಗ, ಅವರ ಮಧ್ಯೆ ಜಗಳ ಆರಂಭವಾಗಿ, ಇಬ್ಬರಿಗೂ ಚೂಪಾದ ಆಯುಧದಿಂದ ತಿವಿಯಲಾಗಿತ್ತು. ಇದಕ್ಕೆ ಪ್ರತಿಯಾಗಿ ರಾಜ್‌ಪಾಲ್ ಮತ್ತು ಗಜೇ ಅವರು ಗುಂಡು ಹಾರಿಸಿದಾಗ ಲಾಖಿ ರಾಮ್ ಸಾವನ್ನಪ್ಪಿದ್ದರು. |