ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಹತ್ತನೆ ಕ್ಲಾಸು ಪರೀಕ್ಷೆ ಬರೆದ ತಾತ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹತ್ತನೆ ಕ್ಲಾಸು ಪರೀಕ್ಷೆ ಬರೆದ ತಾತ!
ಅವರು ಪರಿಕ್ಷಾ ಕೊಠಡಿಯ ಗೇಟ್‌ ತನಕ ಬಂದಿದ್ದರು. ಯಾವುದೋ ವಿದ್ಯಾರ್ಥಿಯ ತಾತನಿರಬೇಕೆಂದು ಭಾವಿಸಿದ ಪ್ರಾಂಶುಪಾಲರು ಗೇಟಿನ ಬಳಿಯೇ ಅವರನ್ನು ತಡೆಯಲು ಯತ್ನಿಸಿದರು. ಆದರೆ, ಆ 'ಅಜ್ಜ' ತನ್ನ ಹಾಲ್‌ಟಿಕೇಟ್ ತೋರಿಸಿದಾಗ ಬೆಸ್ತು ಬಿದ್ದ ಪ್ರಾಂಶುಪಾಲರು ಸುಸ್ತು. ಹತ್ತನೇ ಕ್ಲಾಸಿನ ಪರೀಕ್ಷೆ ಬರೆಯುತ್ತಿರುವ 3000 ವಿದ್ಯಾರ್ಥಿಗಳಲ್ಲಿ ಅವರೂ ಒಬ್ಬರಾಗಿದ್ದಾರೆ.

ಉತ್ತರ ಪ್ರದೇಶದ ಅಮಿನಾಬಾದ್‌ನ ಇಂಟರ್ ಕಾಲೇಜಿನಲ್ಲಿ ನಡೆಯುತ್ತಿರುವ ಉತ್ತರ ಪ್ರದೇಶ ಹೈಸ್ಕೂಲು ಪರೀಕ್ಷಾ ಮಂಡಳಿ ನಡೆಸಿರುವ ಪರೀಕ್ಷೆಯಲ್ಲಿ 60ರ ಹರೆಯದ ನೂರ್ ಮೊಹಮ್ಮದ್ ಎಂಬವರು ಹಾಜರಾಗಿ ಅಚ್ಚರಿ ಮೂಡಿಸಿದ್ದಾರೆ. ಅವರು ಶಿಕ್ಷಕರು, ಪರೀಕ್ಷಾ ಮೇಲ್ವಿಚಾರಕರು, ಮತ್ತು ವಿದ್ಯಾರ್ಥಿಗಳ ಕೇಂದ್ರ ಬಿಂದುವಾಗಿದ್ದರು ಎಂದು ಮೇಲ್ವಿಚಾರಕರಲ್ಲೊಬ್ಬರಾಗಿದ್ದ ಆರ್.ಕೆ. ಸರಿನ್ ಹೇಳಿದ್ದಾರೆ.

ವಯೋವೃದ್ಧರರೊಬ್ಬರು ನಮ್ಮೊಂದಿಗೆ ಪರೀಕ್ಷೆ ಬರೆಯುವುದು ನಮಗೆ ಅಚ್ಚರಿಯ ವಿಚಾರವಾಗಿತ್ತು. ಆದರೆ ಈಗ ನಮಗೆ ಅಭ್ಯಾಸವಾಗಿದೆ. ನಾವು ತಮಾಷೆ ಮಾಡಿದರೂ ಅವರು ಬೇಸರಿಸಿಕೊಳ್ಳುವುದಿಲ್ಲ ಎಂದು ಇಲ್ಲಿನ ಇತರ ಮಕ್ಕಳು ಹೇಳುತ್ತಾರೆ. ಮಕ್ಕಳು ಇವರನ್ನು ಬಡ್ಡೇ ಅಬ್ಬ ಅಥವಾ ದಾದ ಎಂದು ಕರೆಯುತ್ತಾರಂತೆ.

ಈ ಮುದುಕ ಪರೀಕ್ಷೆ ಬರೆಯುತ್ತಿರುವುದು ಮಕ್ಕಳಿಗೆ ಅಚ್ಚರಿಯ ವಿಚಾರವಾಗಿರಬೇಕು. ಆದರೆ ಆ ಮಕ್ಕಳು ತುಂಬ ಸಹಕಾರ ನೀಡುತ್ತಾರೆ ಎಂಬುದು ಅಭ್ಯರ್ಥಿ ತಾತನ ಅಭಿಪ್ರಾಯ.

ಮೂರು ಮಕ್ಕಳ ತಂದೆ ಹಾಗೂ ಎಂಟು ಮೊಮ್ಮಕ್ಕಳ ತಾತನಾಗಿರುವ ನೂರ್ ಅವರು ಇದೇ ಪ್ರಥಮ ಬಾರಿಗೆ ಖಾಸಗಿಯಾಗಿ ಹೈಸ್ಕೂಲ್ ಪರೀಕ್ಷೆ ಬರೆಯುತ್ತಿದ್ದಾರೆ.

ಪರೀಕ್ಷೆ ಬರೆಯಬೇಕೆಂದು ಅವರು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದಾಗ ಅವರ ಮೊಮ್ಮಗಳು ಶಮ ಮತ್ತು ಪುತ್ರ ಶಫೀಕ್ ಅವರಿಗೆ ಉತ್ತೇಜನ ನೀಡಿದ್ದು ಪರೀಕ್ಷಾ ಸಿದ್ಧತೆಗೆ ಸಹಾಯಹಸ್ತ ನೀಡಿದರು.

ನೂರ್ ಅವರು 1964ರಲ್ಲಿ ಎಂಟನೆ ತರಗತಿ ಪರೀಕ್ಷೆ ಬರೆದಿದ್ದರು. ಆ ಬಳಿಕ 14ರ ಹರೆಯದಲ್ಲಿ ಅವರಿಗೆ ವಿವಾಹವಾಗಿದ್ದು ಕುಟುಂಬದ ಜವಾಬ್ದಾರಿ ಅವರ ತಲೆ ಮೇಲೆ ಬಿದ್ದಿತ್ತು. ಅಲ್ಲದೆ ಅವರ ತಂದೆ ಅವರಿಗೆ ವಿದ್ಯಾಭ್ಯಾಸ ಮುಂದುವರಿಸಲು ಅವಕಾಶ ನೀಡಿರಲಿಲ್ಲ. ಮತ್ತು ಹಣದ ಅಡಚಣೆಯೂ ಉಂಟಾಗಿತ್ತಂತೆ.

ಆದರೆ ಇದೀಗ ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದು ಅವರ ಕಲಿಕಾ ಆಸೆ ನೆರವೇರುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆತ್ಮರಕ್ಷಣೆಗಾಗಿ ಕೊಲೆ ತಪ್ಪಲ್ಲ: ಸುಪ್ರೀಂ ಕೋರ್ಟು
ಹಣ ಹಂಚಿದ ಮುಲಾಯಂಗೆ ಆಯೋಗದ ನೋಟೀಸು
ಹೋಳಿ ಹಬ್ಬದ ವೇಳೆ ಹಣ ಹಂಚಿದ ಮುಲಾಯಂ?
ಭಾರತದ ಗೂಗಲ್ ಅರ್ಥ್ ಭುವನ್ ಉಗ್ರರಿಗೆ ಸುಲಭ ಮಾರ್ಗ‌?
ವಿಷಕಾರಿ ಹೋಳಿ ಬಣ್ಣ: 16 ಮಕ್ಕಳು ಐಸಿಯುನಲ್ಲಿ
ಕಾಂಗ್ರೆಸ್ ಟಿಸಿ ಸೀಟುಹಂಚಿಕೆ ಒಪ್ಪಂದ ಅಂತಿಮ