ಪಾಕಿಸ್ತಾನದಲ್ಲಿನ ರಾಜಕೀಯ ಅಸ್ಥಿರತೆ ಪರಿಸ್ಥಿತಿಯ ಕುರಿತು ಕಳವಳ ವ್ಯಕ್ತಪಡಿಸಿರುವ ಭಾರತ, ಇದು ತನ್ನ ಭದ್ರತೆ ಮೇಲೆ ಪರಿಣಾಮ ಬೀರಬಹುದು ಎಂಬ ಭೀತಿ ವ್ಯಕ್ತಪಡಿಸಿದೆ.
ಪಾಕಿಸ್ತಾನದಲ್ಲಿನ ರಾಜಕೀಯ ಬಿಕ್ಕಟ್ಟಿನ ಕುರಿತು ಸಚಿವ ಸಂಪುಟ ಸಮಿತಿ ಸಭೆ ನಡೆಸಿದ ಬಳಿಕ ಅಲ್ಲಿನ ಪರಿಸ್ಥಿತಿಯು ಪ್ರಾಂತ್ಯದಲ್ಲಿನ ಭದ್ರತೆಯ ಮೇಲೆ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಿಸಲಾಗಿದೆ.
ನೆರೆಯ ರಾಷ್ಟ್ರದಲ್ಲಿ ಭಾರತವು ಶಾಂತಿಯನ್ನು ಬಯಸುತ್ತದೆ ಎಂದು ನುಡಿದ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ, ಪಾಕಿಸ್ತಾನದಲ್ಲಿನ ಅಸ್ಥಿರತೆಯು ಉಗ್ರವಾದದ ವಿರುದ್ಧದ ಹೊರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನದಲ್ಲಿನ ಇತ್ತೀಚಿನ ರಾಜಕೀಯ ಬಿಕ್ಕಟ್ಟಿನ ಕುರಿತು ಮಾತನಾಡಿದ ಅವರು, "ಪಾಕಿಸ್ತಾನದಲ್ಲಿ ಏನು ನಡೆಯುತ್ತಿದೆಯೋ ಅದು ಅವರ ಆಂತರಿಕ ವಿಚಾರ. ಅವರ ಆಂತರಿಕ ವಿಚಾರಕ್ಕೆ ಸಂಬಂಧಿಸಿದಂತೆ ನಾವು ಪ್ರತಿಕ್ರಿಯಿಸುವಂತಿಲ್ಲ. ನಾವು ಎಲ್ಲಾ ನೆರೆದೇಶಗಳಲ್ಲಿ ಶಾಂತಿಯನ್ನು ನಾವು ಬಯಸುತ್ತೇವೆ" ಎಂದು ಅವರು ನುಡಿದರು.
"ಪಾಕಿಸ್ತಾನದ ಆಂತರಿಕ ಸಮಸ್ಯೆಯನ್ನು ಹೇಗೆ ಬಗೆಹರಿಸಿಕೊಳ್ಳುತ್ತಾರೆ ಎಂಬುದು ಅಲ್ಲಿನ ಜನತೆ ಮತ್ತು ಅಧಿಕಾರಿಗಳು ನಿರ್ಧರಿಸಬೇಕಾದ ವಿಚಾರ" ಎಂದು ಮುಖರ್ಜಿ ನುಡಿದರು. |