ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರ‌್ಯಾಗಿಂಗ್ ಸಾವು: ನಾಲ್ವರು ವಿದ್ಯಾರ್ಥಿಗಳ ಉಚ್ಚಾಟನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರ‌್ಯಾಗಿಂಗ್ ಸಾವು: ನಾಲ್ವರು ವಿದ್ಯಾರ್ಥಿಗಳ ಉಚ್ಚಾಟನೆ
PTI
ವಿದ್ಯಾರ್ಥಿಯೊಬ್ಬನ ಸಾವಿಗೆ ಕಾರಣವಾದ ರ‌್ಯಾಗಿಂಗ್ ಆಪಾದಿತ ನಾಲ್ವರು ವಿದ್ಯಾರ್ಥಿಗಳನ್ನು ಇಲ್ಲಿನ ವೈದ್ಯಕೀಯ ಕಾಲೇಜು ಉಚ್ಚಾಟನೆಗೊಳಿಸಿದೆ. ಕೊಲೆ ಆರೋಪದಲ್ಲಿ ಬಂಧನಕ್ಕೀಡಾಗಿರುವ ನಾಲ್ವರೂ ವಿದ್ಯಾರ್ಥಿಗಳನ್ನು ಎರುಡು ವರ್ಷಗಳ ಕಾಲ ಕಾಲೇಜಿನಿಂದಲೇ ಉಚ್ಚಾಟಿಸಿರುವುದಾಗಿ ರಾಜೇಂದ್ರ ಪ್ರಸಾದ್ ಮೆಡಿಕಲ್ ಕಾಲೇಜಿನ ನೂತನ ಪ್ರಾಂಶುಪಾಲರಾದ ಅನಿಲ್ ಚೌವಾಣ್ ಹೇಳಿದ್ದಾರೆ.

ಅಭಿನವ್ ವರ್ಮಾ, ಮುಕುಲ್ ಶರ್ಮಾ, ಅಜಯ್ ವರ್ಮಾ ಮತ್ತು ನವೀನ್ ವರ್ಮಾ ಎಂಬ ನಾಲ್ವರು ವಿದ್ಯಾರ್ಥಿಗಳ ಕಿರುಕುಳ ಹಾಗೂ ಹಲ್ಲೆಯಿಂದಾಗಿ ಅಮನ್ ಕಚ್ರು ಎಂಬ ಪ್ರಥಮ ವರ್ಷದ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಲಾಗಿದೆ.

ಈ ದುರ್ಘಟನೆ ಕಳೆದ ಭಾನುವಾರ ಸಂಭವಿಸಿದೆ. ಶನಿವಾರ ರಾತ್ರಿ ನಾಲ್ವರು ಅಂತಿಮ ವರ್ಷದ ವಿದ್ಯಾರ್ಥಿಗಳು ರ‌್ಯಾಗ್ ಮಾಡಿದ ಪರಿಣಾಮ ಭಾನುವಾರ ಅಮನ್ ಅಸುನೀಗಿದ್ದ. ಮರಣೋತ್ತರ ಪರೀಕ್ಷೆಯ ಬಳಿಕ ಪೊಲೀಸರು ಈ ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ತಲೆಗೆ ಏಟು ಬಿದ್ದಿರುವುದು ಸಾವಿಗೆ ಕಾರಣ ಎಂದು ಹೇಳಲಾಗಿದೆ.

ಈ ಪ್ರಕರಣದ ತನಿಖೆಗಾಗಿ ಹಿಮಾಚಲ ಪ್ರದೇಶ ಸರ್ಕಾರ ಮ್ಯಾಜಿಸ್ಟ್ರೇಟ್ ಮಟ್ಟದ ತನಿಖೆ ನಡೆಸಲು ಆದೇಶ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಓಟಿಗಾಗಿ ನೋಟು: ಮುಂಚೂಣಿಯಲ್ಲಿ ಕರ್ನಾಟಕ!
ಮುಲಾಯಂಗೆ ಚುನಾವಣಾ ಆಯೋಗ ನೋಟಿಸ್
ಮೇಘಾಲಯ: ರಾಜಕೀಯ ಬಿಕ್ಕಟ್ಟು; ವಿಶ್ವಾಸಮತ
ಪಾಕ್ ಅಸ್ಥಿರತೆ: ಭಾರತದ ಭದ್ರತೆಗೆ ಹಾನಿ
ಹತ್ತನೆ ಕ್ಲಾಸು ಪರೀಕ್ಷೆ ಬರೆದ ತಾತ!
ಆತ್ಮರಕ್ಷಣೆಗಾಗಿ ಕೊಲೆ ತಪ್ಪಲ್ಲ: ಸುಪ್ರೀಂ ಕೋರ್ಟು