ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕೇರಳ ಎಡರಂಗ: ಸಿಪಿಐ-ಸಿಪಿಎಂ ಡೈವೋರ್ಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೇರಳ ಎಡರಂಗ: ಸಿಪಿಐ-ಸಿಪಿಎಂ ಡೈವೋರ್ಸ್
ಸೀಟು ಹಂಚಿಕೆಯಲ್ಲಿನ ಅಸಮ್ಮತಿ ವಿಚಾರವು ರಾಷ್ಟ್ರದ ಇನ್ನೊಂದು ಮೈತ್ರಿಯನ್ನು ಒಡೆದು ಹಾಕಿದೆ. ಈ ಸರ್ತಿ ಕೇರಳದ ಸರದಿ. ಸೀಟು ಹಂಚಿಕೆಯು ಕೇರಳದ ಎಡರಂಗದಲ್ಲಿ ಬಿರುಕು ಮೂಡಿಸಿದ್ದು, ಎಡರಂಗದ ಅಂಗ ಪಕ್ಷಗಳಾಗಿರುವ ಸಿಪಿಐ ಮತ್ತು ಸಿಪಿಎಂ ಪರಸ್ಪರ ಮುಖತಿರುಗಿಸಿಕೊಂಡಿವೆ.

ಪೊನ್ನಾನಿ ಕ್ಷೇತ್ರದಲ್ಲಿ ಸ್ಫರ್ಧಿಸುವ ಹಕ್ಕಿನ ವಿಚಾರಕ್ಕೆ ಸಂಬಂಧಿಸಿದಂತೆ ಎಡರಂಗವು ಒಡೆದು ಉಭಯ ಪಕ್ಷಗಳು ಇದೀಗ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿವೆ.

ಎರಡೂ ಪಕ್ಷಗಳೂ ಈ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಗಳೇ ಗೆಲ್ಲುವ ಕುದುರೆಗಳೆಂದು ಭಾವಿಸಿರುವ ಕಾರಣ, ಬಿಗಿ ಪಟ್ಟು ಸಡಿಲಿಸಲು ಸಿದ್ಧವಿಲ್ಲದ ಪರಿಣಾಮ ಬಿಕ್ಕಟ್ಟು ತಲೆದೋರಿದೆ. ಎಲ್‌ಡಿಎಫ್‌ನಿಂದ ತಾನು ದೂರಸರಿಯುವುದಾಗಿ ಹೇಳಿರುವ ಸಿಪಿಐ, ಬಿರುಕಿಗೆ ಕಾರಣ ಸಿಪಿಎಂ ಎಂದು ದೂರಿದೆ.

ಇದೀಗ ಸಿಪಿಎಂನೊಂದಿಗೆ ಸೀಟು ಹಂಚಿಕೊಳ್ಳದಿರಲು ನಿರ್ಧರಿಸಿದ್ದು ಕೇರಳ ರಾಜ್ಯದ ಎಲ್ಲಾ 20 ಸ್ಥಾನಗಳಲ್ಲಿ ಸ್ಫರ್ಧಿಸುವುದಾಗಿ ಘೋಷಿಸಿದೆ.ಇದೀಗ ಈ ಆಘಾತಕಾರಿ ವಿಭಜನೆಯ ಹಿನ್ನೆಲೆಯಲ್ಲಿ ಸಿಪಿಎಂ ದೆಹಲಿಯಲ್ಲಿ ತುರ್ತು ಸಭೆಯನ್ನು ಕರೆದಿದೆ.

ಗುರುವಾರ ಕರೆದಿದ್ದ ಎಲ್‌ಡಿಎಫ್ ಸಂಪರ್ಕ ಸಮಿತಿಯು ಪರಿಹಾರ ಒಂದನ್ನು ಕಂಡುಕೊಳ್ಳಲು ಪರದಾಡಿತು. ಪೊನ್ನಾನಿ ಮತ್ತು ಕೋಯಿಕೋಡ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾವುದೇ ರಾಜಿಗೆ ಸಿದ್ಧವಿಲ್ಲ ಎಂಬುದಾಗಿ ಸಿಪಿಐ ಮತ್ತು ಜೆಡಿಎಸ್ ಬಿಗಿಪಟ್ಟು ಹಿಡಿದ ಕಾರಣ ಬಿಕ್ಕಟ್ಟು ತಲೆದೋರಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪ್ರಧಾನಿ ಅಂತಾದ್ರೆ ಮಾತ್ರ ನಾನು ಲೆಕ್ಕಕ್ಕೆ: ತೃ.ರಂಗಕ್ಕೆ ಮಾಯಾ
ಒರಿಸ್ಸಾದಲ್ಲಿ ಇನ್ನೊಮ್ಮೆ ವಿಶ್ವಾಸ ಮತಯಾಚನೆ?
ರ‌್ಯಾಗಿಂಗ್ ಸಾವು: ನಾಲ್ವರು ವಿದ್ಯಾರ್ಥಿಗಳ ಉಚ್ಚಾಟನೆ
ಓಟಿಗಾಗಿ ನೋಟು: ಮುಂಚೂಣಿಯಲ್ಲಿ ಕರ್ನಾಟಕ!
ಮುಲಾಯಂಗೆ ಚುನಾವಣಾ ಆಯೋಗ ನೋಟಿಸ್
ಮೇಘಾಲಯ: ರಾಜಕೀಯ ಬಿಕ್ಕಟ್ಟು; ವಿಶ್ವಾಸಮತ