ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಆಂಧ್ರದಲ್ಲೂ ರ‌್ಯಾಗಿಂಗ್: ಆತ್ಮಹತ್ಯೆಗೆ ವಿದ್ಯಾರ್ಥಿನಿ ಯತ್ನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಂಧ್ರದಲ್ಲೂ ರ‌್ಯಾಗಿಂಗ್: ಆತ್ಮಹತ್ಯೆಗೆ ವಿದ್ಯಾರ್ಥಿನಿ ಯತ್ನ
ಆಂಧ್ರಪ್ರದೇಶದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಹಿರಿಯ ವಿದ್ಯಾರ್ಥಿನಿಗಳ ಕಿರುಕುಳ ತಾಳಲಾರದೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ಗುರುವಾರ ಸಂಜೆ ಗುಂಟೂರು ಇಂಜಿನಿಯರಿಂಗ್ ಕಾಲೇಜಿನ ವಸತಿ ನಿಲಯದಲ್ಲಿ ನಡೆದಿದೆ. ಹಿಮಾಚಲ ಪ್ರದೇಶದಲ್ಲಿ ರ‌್ಯಾಗಿಂಗ್‌ನಿಂದಾಗಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ವಿಚಾರ ಹಸಿಹಸಿಯಾಗಿರುವಾಗಲೇ ಇಂತಹ ಇನ್ನೊಂದು ಪ್ರಕರಣ ವರದಿಯಾಗಿದೆ.

ಗುಂಟೂರಿನ ಬಾಪತ್ಲಾ ಪಟ್ಟಣದಲ್ಲಿರುವ ಸರ್ಕಾರಿ ಕೃಷಿ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ವ್ಯಾಸಂಗ ನಡೆಸುತ್ತಿರುವ ಪ್ರಥಮ ವರ್ಷದ 20ರ ವಿದ್ಯಾರ್ಥಿನಿಗೆ ಹಿರಿಯ ವಿದ್ಯಾರ್ಥಿನಿಯರು ಕಿರುಕುಳ ನೀಡಿದ್ದು, ಇದರಿಂದ ತೀವ್ರವಾಗಿ ಮನನೊಂದ ಆಕೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಹೇಳಲಾಗಿದೆ. ವಿಷಯ ತಿಳಿದ ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು. ಸೂಕ್ತ ಚಿಕಿತ್ಸೆ ನೀಡಲಾಗಿದೆ. ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಹಿಮಾಚಲ ಪ್ರದೇಶದ ರಾಜೇಂದ್ರ ಪ್ರಸಾದ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅಮನ್ ಕಚ್ರು ಎಂಬ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿ ರ‌್ಯಾಗಿಂಗ್ ಪೀಡೆಗೆ ಬಲಿಯಾಗಿದ್ದು, ಇದಕ್ಕೆ ಕಾರಣ ಕರ್ತರಾಗಿರುವ ನಾಲ್ವುರು ವಿದ್ಯಾರ್ಥಿಗಳ ವಿರುದ್ಧ ಕೊಲೆ ಪ್ರಕರಣದಾಖಲಾಗಿದೆ ಅಲ್ಲದೆ, ಆಪಾದಿತ ವಿದ್ಯಾರ್ಥಿಗಳನ್ನು ಎರಡು ವರ್ಷಗಳ ಕಾಲ ಕಾಲೇಜಿನಿಂದ ಉಚ್ಚಾಟಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕೇರಳ ಎಡರಂಗ: ಸಿಪಿಐ-ಸಿಪಿಎಂ ಡೈವೋರ್ಸ್
ಪ್ರಧಾನಿ ಅಂತಾದ್ರೆ ಮಾತ್ರ ನಾನು ಲೆಕ್ಕಕ್ಕೆ: ತೃ.ರಂಗಕ್ಕೆ ಮಾಯಾ
ಒರಿಸ್ಸಾದಲ್ಲಿ ಇನ್ನೊಮ್ಮೆ ವಿಶ್ವಾಸ ಮತಯಾಚನೆ?
ರ‌್ಯಾಗಿಂಗ್ ಸಾವು: ನಾಲ್ವರು ವಿದ್ಯಾರ್ಥಿಗಳ ಉಚ್ಚಾಟನೆ
ಓಟಿಗಾಗಿ ನೋಟು: ಮುಂಚೂಣಿಯಲ್ಲಿ ಕರ್ನಾಟಕ!
ಮುಲಾಯಂಗೆ ಚುನಾವಣಾ ಆಯೋಗ ನೋಟಿಸ್