ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪ್ರಧಾನಿ ಪಟ್ಟ ಆಕಾಂಕ್ಷಿಗಳಲ್ಲಿ ನಾನೂ ಇದ್ದೇನೆ: ಪವಾರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಧಾನಿ ಪಟ್ಟ ಆಕಾಂಕ್ಷಿಗಳಲ್ಲಿ ನಾನೂ ಇದ್ದೇನೆ: ಪವಾರ್
PIB
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಯುಪಿಎ ಬಹುಮತ ಪಡೆಯುವಲ್ಲಿ ವಿಫಲವಾದಲ್ಲಿ ತೃತೀಯ ರಂಗದೊಂದಿಗೆ ಕೈಜೋಡಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂಬುದಾಗಿ ಎನ್‌ಸಿಪಿ ವರಿಷ್ಠ ಶರದ್ ಪವಾರ್ ಹೇಳಿದ್ದಾರೆ.

"ನಮಗೆ ಬಹುಮತ ದೊರೆಯದಿದ್ದರೆ ನಾವು ತೃತೀಯ ರಂಗದೊಡನೆ ಮಾತನಾಡಬೇಕಾಗುತ್ತದೆ" ಎಂಬುದಾಗಿ ಪ್ರಧಾನ ಮಂತ್ರಿ ಪದಾಕಾಂಕ್ಷಿಯೂ ಆಗಿರುವ ಪವಾರ್ ಹೇಳಿದ್ದಾರೆ. ಎನ್‌ಸಿಪಿಯು ಪ್ರಸ್ತುತ ಅಧಿಕಾರದಲ್ಲಿರುವ ಯುಪಿಎಯ ಪ್ರಮುಖ ಅಂಗಪಕ್ಷವಾಗಿದ್ದು ಕಾಂಗ್ರೆಸ್‌ಗೆ ಮುಜುಗರವಾಗುವಂತಹ ಹೇಳಿಕೆ ನೀಡಿದ್ದಾರೆ.

ಲೋಕಸಭೆಯಲ್ಲಿ 40ಕ್ಕಿಂತ 50ರಷ್ಟು ಸದಸ್ಯರನ್ನು ಹೊಂದಿರುವ ಎಡಪಕ್ಷಗಳು ತೃತೀಯ ರಂಗದ ಪ್ರಮುಖ ಭಾಗವಾಗಿವೆ ಎಂದು ಖಾಸಗಿ ವಾಹಿನಿಯೊಂದರೊಂದಿಗೆ ಮಾತನಾಡುತ್ತಿದ್ದ ಪವಾರ್ ಹೇಳಿದ್ದಾರೆ.

ಆಂಧ್ರ ಪ್ರದೇಶ, ಗುಜರಾತ್ ಮತ್ತು ಕರ್ನಾಟಕದ ನಾಯಕರು ಪ್ರಧಾನ ಮಂತ್ರಿ ಸ್ಥಾನವನ್ನು ಅಲಂಕರಿಸಲು ಅವಕಾಶ ಪಡೆಯುತ್ತಿರುವಾಗ, ಮಹಾರಾಷ್ಟ್ರದವರಿಗೂ ಒಂದು ಅವಕಾಶ ನೀಡಬೇಕು ಎಂದು ಪವಾರ್ ಹೇಳಿದ್ದಾರೆ.

"ಆಂಧ್ರ, ಗುಜರಾತ್, ಕರ್ನಾಟಕದಂತಹ ರಾಜ್ಯಗಳಿಗೆ ಪ್ರಧಾನಿ ಕುರ್ಚಿಯನ್ನು ಅಲಂಕರಿಸುವ ಅವಕಾಶ ಲಭಿಸಿರುವಾಗ ಮಹಾರಾಷ್ಟ್ರಕ್ಕೂ ಒಂದು ಅವಕಾಶ ಲಭಿಸಬೇಕು ಎಂಬ ಭಾವನೆಯೊಂದು ಮಹಾರಾಷ್ಟ್ರಿಗರಲ್ಲಿದೆ" ಎಂದು ಪ್ರಧಾನಿ ಪಟ್ಟದ ಪ್ರಬಲ ಆಕಾಂಕ್ಷಿ ಪವಾರ್ ಹೇಳಿದ್ದಾರೆ.

ಆದರೆ, ನೀವು ಸೀಮಿತ ಸ್ಥಾನಗಳಿಗೆ ಸ್ಫರ್ಧಿಸುತ್ತಿರುವ ವೇಳೆಗೆ ಪ್ರಧಾನಿಯಾಗುವ ಕುರಿತು ಯೊಚಿಸುವಂತಿಲ್ಲ ಎಂಬುದಾಗಿಯೂ ಅವರು ಹೇಳಿದ್ದಾರೆ. ನನ್ನ ಪಕ್ಷವು ಇಡಿಯ ರಾಷ್ಟ್ರದಲ್ಲಿ ಒಟ್ಟಾರೆಯಾಗಿ 30ರಿಂದ 35 ಸ್ಥಾನಗಳನ್ನು ಮಾತ್ರ ಗಳಿಸುತ್ತದೆ ಎಂದಾದರೆ, ಅಷ್ಟು ಸಣ್ಣ ಸಂಖ್ಯೆಯೊಂದಿಗೆ, ಅಂತಹ ಪಕ್ಷದ ನಾಯಕ ರಾಷ್ಟ್ರದ ಪ್ರಧಾನಿ ಹುದ್ದೆಯ ಜವಾಬ್ದಾರಿಯನ್ನು ಹೇಗೆ ಪಡೆಯಬಹುದು ಎಂದೂ ಅವರು ಪ್ರಶ್ನಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಜೆಪಿ ಜೇಟ್ಲಿಯವರನ್ನು ಸಮಾಧಾನಿಸಿತಾ?
ಆಂಧ್ರದಲ್ಲೂ ರ‌್ಯಾಗಿಂಗ್: ಆತ್ಮಹತ್ಯೆಗೆ ವಿದ್ಯಾರ್ಥಿನಿ ಯತ್ನ
ಕೇರಳ ಎಡರಂಗ: ಸಿಪಿಐ-ಸಿಪಿಎಂ ಡೈವೋರ್ಸ್
ಪ್ರಧಾನಿ ಅಂತಾದ್ರೆ ಮಾತ್ರ ನಾನು ಲೆಕ್ಕಕ್ಕೆ: ತೃ.ರಂಗಕ್ಕೆ ಮಾಯಾ
ಒರಿಸ್ಸಾದಲ್ಲಿ ಇನ್ನೊಮ್ಮೆ ವಿಶ್ವಾಸ ಮತಯಾಚನೆ?
ರ‌್ಯಾಗಿಂಗ್ ಸಾವು: ನಾಲ್ವರು ವಿದ್ಯಾರ್ಥಿಗಳ ಉಚ್ಚಾಟನೆ