ಮುಂಬೈದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನವು ಎತ್ತಿರುವ 30 ಪ್ರಶ್ನೆಗಳಿಗೆ ಸಿದ್ಧಪಡಿಸಲಾಗಿರುವ ಉತ್ತರವನ್ನು ಗೃಹಸಚಿವ ಪಿ. ಚಿದಂಬರಂ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಅವರಿಗೆ ಶುಕ್ರವಾರ ಒಪ್ಪಿಸಿದ್ದಾರೆ.
ಪಾಕಿಸ್ತಾನದ 30 ಪ್ರಶ್ನೆಗಳಿಗೆ ತಯಾರಿಸಲಾಗಿರುವ ಉತ್ತರವು ಸಮಗ್ರವಾಗಿದೆ ಎಂಬುದಾಗಿ ಚಿದಂಬರಂ ಹೇಳಿದ್ದಾರೆ. ಈ ವಿವರಣೆಗಳ ಮೇಲೆ ಸೂಕ್ತ ಕಾರ್ಯಾಚರಿಸುವ ಮೂಲಕ ಪಾಕಿಸ್ತಾನವು ತನ್ನ ಬದ್ಧತೆಯನ್ನು ಸಾಬೀತು ಪಡಿಸಬೇಕಾಗಿದೆ ಎಂದು ಅವರು ನುಡಿದರು.
ಪ್ರತಿ ಉತ್ತರಕ್ಕೂ ವಿಸ್ತೃತ ಪುರಾವೆಯನ್ನೂ ಒದಗಿಸಲಾಗಿದೆ ಎಂದು ತಿಳಿಸಿದ ಚಿದು, ತನಿಖೆಯ ಕುರಿತು ಗಂಭೀರವಾಗಿರುವ ಯಾರೇ ಆದರೂ ಕಾರ್ಯಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಆದರೆ, ಈ ಉತ್ತರಗಳನ್ನು ಇಸ್ಲಾಮಾಬಾದಿಗೆ ಯಾವಾಗ ಹಸ್ತಾಂತರಿಸಲಾಗುವುದು ಎಂಬ ಕುರಿತು ಯಾವುದೇ ಸ್ಪಷ್ಟಮಾಹಿತಿಗಳಿಲ್ಲ. ಆದರೆ ವಿದೇಶಾಂಗ ಸಚಿವಾಲಯಗಳ ಮೂಲಗಳು ಸದ್ಯವೇ ಈ ಪ್ರಕ್ರಿಯೆ ನಡೆಸಲಿದೆ ಎಂದು ಹೇಳಿವೆ . ಮುಂಬೈ ದಾಳಿ ಪ್ರಕರಣದ ತನಿಖೆಯಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬರಿಂದಲೂ ಗೃಹಸಚಿವಾಲಯವು ಉತ್ತರಗಳನ್ನು ಸ್ವೀಕರಿಸಿದ್ದು, ಬಳಿಕವೇ ಈ ದಾಖಲೆಗಳನ್ನು ಸಿದ್ಧಪಡಿಸಲಾಗಿಗ್ದು, ಇದನ್ನು ಮುಖರ್ಜಿಯವರಿಗೆ ಒಪ್ಪಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ. |