ರಾಜಕೀಯ ಪಕ್ಷಗಳು ಚುನಾವಣೆಗೆ ಸಿದ್ಧತೆ ನಡೆಸುತ್ತಿರುವಂತೆ ಬುಕ್ಕಿಗಳೂ ಸಹಸಿದ್ಧತೆ ನಡೆಸುತ್ತಿದ್ದಾರೆ. ಸದ್ಯದ ಮಟ್ಟಿಗೆ ಪ್ರಧಾನಿ ಮನಮೋಹನ್ ಸಿಂಗ್ ಅವರೇ ಬೆಟ್ಟಿಗರ ಫೇವರಿಟ್ ಅಭ್ಯರ್ಥಿ. ಇಲ್ಲವರು ಬಿಜೆಪಿಯ ಎಲ್.ಕೆ. ಆಡ್ವಾಣಿ ಅವರನ್ನು ಹಿಂದಿಕ್ಕಿದ್ದಾರೆ." ಬುಕ್ಕಿಗಳು ರಾಜಕೀಯ ಬೆಳವಣಿಗೆಗಳನ್ನು ಅತಿ ನಿಕಟವಾಗಿ ಗಮನಿಸುತ್ತಾರೆ. ಅಲ್ಲದೆ, ಅವರಿಗೆ ಎಲ್ಲಾ ಪ್ರಮುಖ ಪಕ್ಷಗಳಲ್ಲೂ ಅವರದ್ದೇ ಆದ ಮಾಹಿತಿದಾರರಿರುತ್ತಾರೆ. ಚುನಾವಣಾ ಬೆಟ್ಟಿಂಗ್‌ನಲ್ಲಿ ನೂರಾರು ಕೋಟಿ ರೂಪಾಯಿ ಹರಿದಾಡುತ್ತದೆ" ಎಂಬುದಾಗಿ ಬಲ್ಲ ಮೂಲಗಳು ಹೇಳುತ್ತವೆ.ಒಂದು ಲೆಕ್ಕಾಚಾರದ ಪ್ರಕಾರ, ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗುತ್ತಾರೆ ಎಂದು ಬಾಜಿ ಕಟ್ಟಿದರೆ ಇದು ಎರಡೂವರೆ ಪಟ್ಟು ಲಾಭ ನೀಡಲಿದೆ. ಅದೇ ಬಿಜೆಪಿ ಅಭ್ಯರ್ಥಿ ಆಡ್ವಾಣಿಯವರ ಹೆಸರಾದರೆ ಲಾಭ ಒಂದೂವರೆ ರೂಪಾಯಿ. ಪ್ರಧಾನಿ ಪಟ್ಟದ ಪ್ರಬಲ ಆಕಾಂಕ್ಷಿಯಾಗಿರುವ ಮಾಯಾವತಿ ಪ್ರಧಾನಿಯಾಗುವ ಸಾಧ್ಯತೆಗಳು ತೀರಾ ಅಲ್ಪ ಎಂಬುದು ಬೆಟ್ಟಿಂಗ್ ವಲಯದ ಅಂಬೋಣ. ಶೋಭಾನ್ ಮೆಹ್ತಾ, ಲಕ್ಷ್ಮೀಚಂದ್ ಥಾನಾ, ರಮೇಶ್ ಗೋಯಲ್, ಕೆ.ಸಿ. ಇಂದೋರ್, ವೀರೇಶ್ ಬೊರಿವಿಲಿ, ಸುಭಾಸ್ ಮೊಹೌ ಮತ್ತು ಸೋನು ಚೆಂಬೂರು ಅವರುಗಳು ಪ್ರಮುಖ ಬುಕ್ಕಿಗಳಾಗಿದ್ದು, ಇವರೆಲ್ಲ ಚುನಾವಣಾ ಸಿದ್ಧತೆಗಾಗಿ ದೇಶ ವಿದೇಶಗಳಲ್ಲಿ ತಮ್ಮದೇ ಜಾಲಗಳನ್ನು ಹೊಂದಿದ್ದಾರೆ. |