ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಆಡ್ವಾಣಿಯವರನ್ನು ಭೇಟಿಯಾದ ಮುಖೇಶ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಡ್ವಾಣಿಯವರನ್ನು ಭೇಟಿಯಾದ ಮುಖೇಶ್
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಶನಿವಾರ ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಆಡ್ವಾಣಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಮುಖೇಶ್ ಅವರು ಆಡ್ವಾಣಿಯವರೊಂದಿಗೆ ಸುಮಾರು ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿದರು ಎಂದು ಪಕ್ಷದ ಮ‌ೂಲಗಳು ತಿಳಿಸಿವೆ.

ಈ ಭೇಟಿಯ ಕುರಿತು ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ಆದರೆ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇದೊಂದು ಮಾಮ‌ೂಲಿ ಭೇಟಿ ಎಂಬುದಾಗಿ ಆಡ್ವಾಣಿ ಅವರ ನಿಕಟ ಮೂಲಗಳು ಹೇಳಿವೆ.

ಕಳೆದ ನವೆಂಬರ್ 20ರಂದು ಆಡ್ವಾಣಿ, ರಾಷ್ಟ್ರದ ಪ್ರಮುಖ ಉದ್ಯಮಿಗಳಾದ ಮುಖೇಶ್ ಅಂಬಾನಿ, ಅನಿಲ್ ಅಂಬಾನಿ, ಕುಮಾರಮಂಗಲಂ ಬಿರ್ಲಾ, ರಾಹುಲ್ ಬಜಾಜ್, ನುಸ್ಲಿ ವಾಡಿಯಾ ಹಾಗೂ ಇತರರೊಂದಿಗೆ ಮಾತುಕತೆ ನಡೆಸಿ ಆರ್ಥಿಕ ಹಿಂಸರಿತವು ದೇಶಿಯ ಆರ್ಥಿಕತೆಯ ಮೇಲೆ ಯಾವ ಪರಿಣಾಮ ಬೀರಬಹುದು ಎಂಬುದಾಗಿ ಚರ್ಚಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಂಗ್ರೆಸ್, ಬಿಜೆಪಿ ಮಿತ್ರಕೂಟಕ್ಕೆ ಬೆಂಬಲವಿಲ್ಲ: ನವೀನ್
ಸಂಸತ್ತಿನಲ್ಲಿ ಒಂದೂ ಪ್ರಶ್ನೆ ಕೇಳದ ಗೌಡ, ಸೋನಿಯಾ
ಮನಮೋಹನರನ್ನು ಬೆಂಬಲಿಸಲಿರುವ ಬುಕ್ಕಿಗಳು
ಯಾರದು ನಗ್ಮಾ? ಪ್ರಶ್ನಿಸಿದರು ಖರ್ಗೆ ಸಾಹೇಬ್ರು!
ಪಾಕ್ ಪ್ರಶ್ನೆಗೆ ಭಾರತ ಉತ್ತರ
ಎನ್‌ಕೌಂಟರ್‌: ಭದ್ರತಾ ಸಿಬ್ಬಂದಿ ಬಲಿ