ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಹಣಹಂಚಿದ್ದು ಹೋಳಿ ವಾಡಿಕೆ: ಮುಲಾಯಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣಹಂಚಿದ್ದು ಹೋಳಿ ವಾಡಿಕೆ: ಮುಲಾಯಂ
ಹೋಳಿ ಹಬ್ಬಾಚರಣೆ ವೇಳೆ ಹಣವಿತರಣೆ ಮಾಡಿ ಚುನಾವಣಾ ಆಯೋಗದ ಕೆಂಗಣ್ಣಿಗೆ ಬಿದ್ದಿರುವ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರು, ಆಯೋಗದ ನೋಟೀಸಿಗೆ ಉತ್ತರಿಸಿದ್ದು, ಇದು ಹೋಳಿ ವಿಧಿವಿಧಾನವಾಗಿದೆ ಎಂದು ಹೇಳಿದ್ದಾರೆ.

ಕುಟುಂಬದ ಸಮಾರಂಭದಲ್ಲಿ ಈ ಹಣವನ್ನು ಹಂಚಲಾಗಿದೆ ಎಂದು ಹೇಳಿರುವ ಮುಲಾಯಂ ಇದೊಂದು ಹಳೆಯ ಸಂಪ್ರದಾಯ ಎಂದಿದ್ದಾರೆ. ಅಲ್ಲದೆ, ಆಯೋಗವು ತನ್ನ ಉತ್ತರದಿಂದ ತೃಪ್ತಿಹೊಂದಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

"ಆದರೆ ಉತ್ತರದಲ್ಲಿ ಸೇರಿರುವ ವಿಷಯವನ್ನು ಅವರು ವಿವರಿಸಲಿಲ್ಲ. ಈ ವಿಚಾರ ನಿಮಗೆ ಆಯೋಗದಿಂದ ತಿಳಿಯಲಿದೆ. ಈ ಸಂದರ್ಭದಲ್ಲಿ ಅದನ್ನು ಬಹಿರಂಗ ಪಡಿಸಲು ಒತ್ತಾಯಿಸಬೇಡಿ" ಎಂದು ಅವರು ನುಡಿದರು.

ಆದರೆ, ಈ ವಿವಾದದಿಂದಾಗಿ ಸಮಾಜವಾದಿ ಪಕ್ಷವು ಚರ್ಚೆಯ ಕೇಂದ್ರಬಿಂದು ಆಗಿರುವ ಕುರಿತು ಅವರು ಸಂತೋಷ ವ್ಯಕ್ತಪಡಿಸಿ ವಂದನೆಗಳನ್ನು ಸಲ್ಲಿಸಿದ್ದಾರೆ.

ರಾಜಕೀಯ ಪಕ್ಷ ಒಂದಕ್ಕೆ ಚರ್ಚಾ(ಚರ್ಚೆ), ಖರ್ಚಾ(ವೆಚ್ಚ) ಮತ್ತು ಪರ್ಚಾ(ಪತ್ರಿಕೆಗಳು) ಬಹಳ ಪ್ರಮುಖವಾದುದು. ಇವೆಲ್ಲವುಗಳನ್ನು ಹೊರತುಪಡಿಸಿದರೆ ನಾಯಕನೊಬ್ಬ ರಾಜಕೀಯದಲ್ಲಿ ಬದುಕಲಾರ. ಈ ಎಲ್ಲಾ ವಿವಾದಿಂದಾಗಿ ನಮ್ಮ ಪಕ್ಷವು ಚರ್ಚೆಯ ವಿಷಯವಾಗಿರುವುದಕ್ಕೆ ತನಗೆ ಅತೀವ ಸಂತೋಷವಾಗಿದೆ ಎಂದು ಮುಲಾಯಂ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಐಐಎ ವಿದ್ಯಾರ್ಥಿಗಳಿಂದ ಭಯೋತ್ಪಾದನಾ ಜಾಗೃತಿ
ಆಡ್ವಾಣಿಯವರನ್ನು ಭೇಟಿಯಾದ ಮುಖೇಶ್
ಕಾಂಗ್ರೆಸ್, ಬಿಜೆಪಿ ಮಿತ್ರಕೂಟಕ್ಕೆ ಬೆಂಬಲವಿಲ್ಲ: ನವೀನ್
ಸಂಸತ್ತಿನಲ್ಲಿ ಒಂದೂ ಪ್ರಶ್ನೆ ಕೇಳದ ಗೌಡ, ಸೋನಿಯಾ
ಮನಮೋಹನರನ್ನು ಬೆಂಬಲಿಸಲಿರುವ ಬುಕ್ಕಿಗಳು
ಯಾರದು ನಗ್ಮಾ? ಪ್ರಶ್ನಿಸಿದರು ಖರ್ಗೆ ಸಾಹೇಬ್ರು!