ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಏಕಾಂತಕ್ಕೆ 'ಅಡ್ಡಿ'ಯಾದ ಹಸುಳೆಯನ್ನು ಬಾವಿಗೆಸೆದ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಏಕಾಂತಕ್ಕೆ 'ಅಡ್ಡಿ'ಯಾದ ಹಸುಳೆಯನ್ನು ಬಾವಿಗೆಸೆದ!
ಪತ್ನಿ ಜೊತೆಗಿನ ಏಕಾಂತಕ್ಕೆ ಅಡ್ಡಿಯಾಗುತ್ತದೆಂಬ ಕಾರಣಕ್ಕೆ ನಾಲ್ಕು ದಿನಗಳ ನವಜಾತ ಶಿಶುವನ್ನು ಎಂಜೀನಿಯರ್ ಒಬ್ಬ ಬಾವಿಗೆಸೆದ ಪಾಶವೀ ಕೃತ್ಯವೊಂದು ಚೆನ್ನೈನಲ್ಲಿ ಸಂಭವಿಸಿದೆ.

ಬೆಂಗಳೂರಿನ ಸಿಸ್ಕೋ ಕಂಪನಿಯೊಂದರಲ್ಲಿ ಇಂಜಿನಿಯರಾಗಿರುವ 28 ವರ್ಷದ ನಿರಂಜನ ಕುಮಾರ್ ಎಂಬಾತನೇ ಈ ಕೃತ್ಯ ಎಸೆದಿದ್ದು ಈಗ ಜೈಲಿನಲ್ಲಿ ಏಕಾಂತವಾಗಿರುವಂತಾಗಿದೆ. ಚೆನ್ನೈ ಮೂಲದ ನಿರಂಜನ್ ತಮ್ಮ ಮನೆಯ ಬಾವಿಗೇ ಹಸುಳೆಯನ್ನು ಎಸೆದಿದ್ದಾನೆ.

ಎರಡು ವರ್ಷಗಳ ಹಿಂದೆಯಷ್ಟೇ ಅವರು 22 ವರ್ಷದ ಸಂಗೀತಾ ಎಂಬಾಕೆಯನ್ನು ಮದುವೆಯಾಗಿದ್ದ. ಮಗು ವಿಷಯದಲ್ಲಿ ಅವರಿಬ್ಬರಲ್ಲಿ ಭಿನ್ನಾಭಿಪ್ರಾಯವಿತ್ತು. ಹೆಂಡತಿ ಗರ್ಭಿಣಿಯಾದಾಗ ಗರ್ಭಪಾತ ಮಾಡಿಸಿಕೊಳ್ಳುವಂತೆಯೂ ಪತ್ನಿಯನ್ನು ಒತ್ತಾಯಿಸಿದ್ದರೂ, ಆಕೆ ಒಪ್ಪಿರಲಿಲ್ಲ ಎನ್ನಲಾಗಿದೆ.

ಮಗು ಹುಟ್ಟಿದ ಮೇಲೆ ಮಗುವನ್ನು ನೋಡುವ ನೆಪದಲ್ಲಿ ಚೆನ್ನೈಗೆ ಧಾವಿಸಿದ ನಿರಂಜನ್ ಮಗುವನ್ನು ಬಾವಿಗೆಸೆದಿದ್ದಾನೆ. ಪತ್ನಿಯ ಮನೆಯಲ್ಲಿದ್ದ ಆಕೆಯನ್ನು ತನ್ನ ಮನೆಗೆ ಕರೆದೊಯ್ದಿರುವ ನಿರಂಜನ್ ಈ ಕೃತ್ಯ ಎಸಗಿರುವುದಾಗಿ ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹೊಸ ಪತ್ನಿಗೆ ತಲಾಖ್ ನೀಡಿದ್ರಾ ಚಂದ್ರಮೋಹನ್?
ಹಣಹಂಚಿದ್ದು ಹೋಳಿ ವಾಡಿಕೆ: ಮುಲಾಯಂ
ಐಐಎ ವಿದ್ಯಾರ್ಥಿಗಳಿಂದ ಭಯೋತ್ಪಾದನಾ ಜಾಗೃತಿ
ಆಡ್ವಾಣಿಯವರನ್ನು ಭೇಟಿಯಾದ ಮುಖೇಶ್
ಕಾಂಗ್ರೆಸ್, ಬಿಜೆಪಿ ಮಿತ್ರಕೂಟಕ್ಕೆ ಬೆಂಬಲವಿಲ್ಲ: ನವೀನ್
ಸಂಸತ್ತಿನಲ್ಲಿ ಒಂದೂ ಪ್ರಶ್ನೆ ಕೇಳದ ಗೌಡ, ಸೋನಿಯಾ