ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > 30 ಪ್ರಶ್ನೆಗಳಿಗೆ ಉತ್ತರ: 'ಸೂಕ್ತ ಕ್ರಮ' ನಿರೀಕ್ಷೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
30 ಪ್ರಶ್ನೆಗಳಿಗೆ ಉತ್ತರ: 'ಸೂಕ್ತ ಕ್ರಮ' ನಿರೀಕ್ಷೆ
ಮುಂಬೈ ದಾಳಿಗಳ ಬಗ್ಗೆ ಹೆಚ್ಚಿನ ಮಾಹಿತಿ ಕೋರಿ 30 ಪ್ರಶ್ನೆಗಳನ್ನು ಕೇಳಿದ ಪಾಕ್‌‌ಗೆ ಪ್ರತ್ಯುತ್ತರವಾಗಿ ಭಾರತ ನೀಡಿದ ಉತ್ತರವನ್ನು ಒಳಾಡಳಿತ ಸಚಿವಾಲಯಕ್ಕೆ ಸೂಕ್ತ ಕ್ರಮಕ್ಕಾಗಿ ಪಾಕಿಸ್ತಾನ ಸರ್ಕಾರ ಕಳಿಸಲಿದೆ. ಈ ಮಾಹಿತಿಯ ಆಧಾರದ ಮೇಲೆ ಲಷ್ಕರೆ ತೊಯ್ಬಾದ ನಾಲ್ವರು ಶಂಕಿತರ ಜಾಕಿರ್ ರೆಹ್ಮಾನ್ ಲಖ್ವಿ, ಜರಾರ್ ಶಾ, ಅಬು ಅಲ್ ಖಾಮಾ ಮತ್ತು ಹಮದ್ ಅಮಿನ್ ಸಾದಿಖ್ ವಿರುದ್ಧ ಆರೋಪಪಟ್ಟಿಯನ್ನು ಪಾಕ್ ಅಧಿಕಾರಿಗಳು ರೂಪಿಸಲಿದ್ದಾರೆ.

ಗೃಹಸಚಿವಾಲಯವು ಪಾಕಿಸ್ತಾನದ 30 ಪ್ರಶ್ನೆಗಳಿಗೆ ಉತ್ತರಗಳನ್ನು ಹಸ್ತಾಂತರಿಸಿದ ಬಳಿಕ ಗೃಹಸಚಿವ ಚಿದಂಬರಂ ಮಾತನಾಡುತ್ತಾ, 'ಉತ್ತರಗಳು ಸಮಗ್ರವಾಗಿದ್ದು, ದಾಖಲೆಯ ಸಾಕ್ಷ್ಯಗಳು, ಸಿಡಿಗಳು ಮತ್ತು ವಿಧಿವಿಜ್ಞಾನ ಪುರಾವೆಗಳನ್ನು ಹೊಂದಿದ್ದು, ದಾಳಿಯ ಬಗ್ಗೆ ತನಿಖೆಗೆ ಸಾಕಷ್ಟು ಸಾಕ್ಷ್ಯಗಳು ಸಿಕ್ಕಿವೆ' ಎಂದು ಹೇಳಿದ್ದಾರೆ. ಪ್ರತಿಯೊಂದು ಪ್ರಶ್ನೆಗೂ ನಿಖರವಾಗಿ ಉತ್ತರಿಸಲಾಗಿದೆ ಎಂದು ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಜತೆ ಮಾತನಾಡುತ್ತಾ ಅವರು ಹೇಳಿದ್ದಾರೆ.

ದಾಖಲೆಗಳಲ್ಲಿ 10 ದಾಳಿಕೋರರು ಮತ್ತು ಅವರನ್ನು ನಿಭಾಯಿಸಿದ ಸೂತ್ರಧಾರರ ಸಂಭಾಷಣೆಗಳು, ಬೆರಳಚ್ಚುಗಳು ಮತ್ತು ಭಯೋತ್ಪಾದಕರ ಬಗ್ಗೆ ವಿವರಗಳನ್ನು ಹೊಂದಿದೆ. ಭಯೋತ್ಪಾದಕರು ಬಳಸಿದ ಜಿಪಿಎಸ್‌ನ ವಿಧಿವಿಜ್ಞಾನ ವಿಶ್ಲೇಷಣೆ ಮತ್ತು ಮದ್ದುಗುಂಡುಗಳು ಇವುಗಳಲ್ಲಿ ಸೇರಿದೆ. ಪಾಕಿಸ್ತಾನದ ಹೈಕಮೀಷನರ್ ಶಾಹಿದ್ ಮಲಿಕ್ ನವದೆಹಲಿಯ ವಿದೇಶಾಂಗ ಸಚಿವಾಲಯದಲ್ಲಿ ಉತ್ತರಗಳನ್ನು ಸ್ವೀಕರಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಏಕಾಂತಕ್ಕೆ 'ಅಡ್ಡಿ'ಯಾದ ಹಸುಳೆಯನ್ನು ಬಾವಿಗೆಸೆದ!
ಹೊಸ ಪತ್ನಿಗೆ ತಲಾಖ್ ನೀಡಿದ್ರಾ ಚಂದ್ರಮೋಹನ್?
ಹಣಹಂಚಿದ್ದು ಹೋಳಿ ವಾಡಿಕೆ: ಮುಲಾಯಂ
ಐಐಎ ವಿದ್ಯಾರ್ಥಿಗಳಿಂದ ಭಯೋತ್ಪಾದನಾ ಜಾಗೃತಿ
ಆಡ್ವಾಣಿಯವರನ್ನು ಭೇಟಿಯಾದ ಮುಖೇಶ್
ಕಾಂಗ್ರೆಸ್, ಬಿಜೆಪಿ ಮಿತ್ರಕೂಟಕ್ಕೆ ಬೆಂಬಲವಿಲ್ಲ: ನವೀನ್