ಕಳೆದ ಲೋಕಸಭಾ ಚುನಾವಣೆ ಅಥವಾ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಖರ್ಚು ವೆಚ್ಚ ನಮೂದಿಸದೆ ಇದ್ದ ಸುಮಾರು 3,423 ಅಭ್ಯರ್ಥಿಗಳ ನಾಮಪತ್ರವನ್ನು ಚುನಾವಣಾ ಆಯೋಗ ಅನರ್ಹಗೊಳಿಸಿದೆ. ಅಲ್ಲದೇ ಇನ್ನು ಮೂರು ವರ್ಷ ಚುನಾವಣಾ ಅಖಾಡಕ್ಕೆ ಇಳಿಯದಂತೆ ನಿರ್ಬಂಧ ಹೇರಿದೆ.
ಇತ್ತೀಚಿನ ವಿಧಾನಸಭಾ ಚುನಾವಣೆಯ ಸ್ಪರ್ಧೆಯ ಸಂದರ್ಭದಲ್ಲಿ ಮಾಡಿದ ವೆಚ್ಚವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲು ವಿಫಲರಾದ ಉತ್ತರಪ್ರದೇಶದ ಸುಮಾರು 1075 ಹಾಗೂ ಬಿಹಾರದ 616 ಅಭ್ಯರ್ಥಿಗಳನ್ನು ಆಯೋಗ ಅನರ್ಹಗೊಳಿಸಿದೆ. ಆದರೆ ಅನರ್ಹಗೊಳಿಸಿದವರಲ್ಲಿ ಶೇ.99ರಷ್ಟು ಅಭ್ಯರ್ಥಿಗಳು ಪಕ್ಷೇತರರು ಎಂದು ತಿಳಿಸಿದೆ.
ಚುನಾವಣೆಯ ಬಳಿಕ ಪ್ರತಿ ಅಭ್ಯರ್ಥಿಯೂ ಚುನಾವಣೆಯ ಖರ್ಚು-ವೆಚ್ಚಗಳ ಕುರಿತು ಆಯೋಗಕ್ಕೆ ಮಾಹಿತಿ ನೀಡಬೇಕು ಎಂದಿರುವ ಆಯೋಗ, ಅಂತಹ ಅಭ್ಯರ್ಥಿಗಳ ವಿರುದ್ಧ ಷೋಕಾಸ್ ನೋಟಿಸ್ ಜಾರಿಗೊಳಿಸಲಾಗುವುದು ಅಲ್ಲದೇ ಸಾರ್ವಜನಿಕ ಪ್ರತಿನಿಧಿ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.
|