ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನಾವು ತೃತೀಯ ಪರ್ಯಾಯವನ್ನು ನೀಡಲಿದ್ದೇವೆ: ಮಾಯಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಾವು ತೃತೀಯ ಪರ್ಯಾಯವನ್ನು ನೀಡಲಿದ್ದೇವೆ: ಮಾಯಾ
PTI
ಕಾಂಗ್ರೆಸ್ ಹಾಗೂ ಬಿಜೆಪಿಗೆ ಹೊರತಾದ 'ಜಾತ್ಯತೀತ' ಪರ್ಯಾಯ ಒಂದನ್ನು ಒದಗಿಸಲು ತೃತೀಯ ರಂಗದ ಎಲ್ಲಾ ಪಕ್ಷಗಳು ನಿರ್ಧರಿಸಿದ್ದು, ಇದು ಮುಂದಿನ ಸರ್ಕಾರವನ್ನು ರೂಪಿಸಲಿದೆ ಎಂದು ಈ ಪಕ್ಷಗಳ ನಾಯಕರಿಗೆ ಔತಣಕೂಟ ಏರ್ಪಡಿಸಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿರುವ ಬಿಎಸ್ಪಿ ವರಿಷ್ಠೆ ಮಾಯವತಿ ಹೇಳಿದ್ದಾರೆ.

"ತೃತೀಯ ರಂಗದ ಹಿರಿಯ ನಾಯಕರಾದ ನಾವು, ಒಟ್ಟಾಗಿ ಕಾಂಗ್ರೇಸತರ, ಬಿಜೆಪಿಯೇತರ ಜಾತ್ಯತೀತ ಪರ್ಯಾಯ ಒಂದನ್ನು ರಾಷ್ಟ್ರದ ಮುಂದಿಡಲು ನಿರ್ದರಿಸಿದ್ದೇವೆ ಎಂದು ಅವರು ಮಾಧ್ಯಮಗಳೆದುರು ಓದಿದ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದರು.

ಈ ಪರ್ಯಾಯವು ಮುಂದಿನ ಸರ್ಕಾರವನ್ನು ರೂಪಿಸಲಿದೆ. ಈ ಸರ್ಕಾರವು ರೂಪಿಸಲಿರುವ ನೀತಿಗಳು ಸಂಪೂರ್ಣವಾಗಿ ರಾಷ್ಟ್ರದ ಹಿತಾಸಕ್ತಿಯನ್ನು ಅವಲಂಭಿಸಲಿದೆ ಎಂದು ಅವರು ತಿಳಿಸಿದರು.

ಔತಣಕೂಟದಲ್ಲಿ ನಾಯಕರು ಪ್ರಸಕ್ತ ರಾಜಕೀಯ ಪರಿಸ್ಥಿತಿಗಳನ್ನು ಮತ್ತು ಮುಂಬರು ಲೋಕಸಭಾ ಚುನಾವಣೆಗಳ ಕುರಿತು ಚರ್ಚಿಸಿರುವುದಾಗಿ ತಿಳಿಸಿದರು. ಆದರೆ ಅವರು ಯಾವುದೇ ಪ್ರಶ್ನೆಗಳಿಗೆ ಉತ್ತರಿಸಿಲ್ಲ.

ಔತಣಕೂಟದಲ್ಲಿ ಸಿಪಿಐ-ಎಂ ನಾಯಕರಾದ ಪ್ರಕಾಶ್ ಕಾರಟ್ ಮತ್ತು ಸೀತರಾಮ್ ಯೆಚೂರಿ, ಸಿಪಿಐನ ಎ.ಬಿ.ಬರ್ಧನ್ ಮತ್ತು ಡಿ. ರಾಜ, ಆರ್‌ಎಸ್ಪಿ ನಾಯಕರಾದ ಟಿ.ಜೆ. ಚಂದ್ರಚೂಡನ್ ಮತ್ತು ಅಬನಿ ರಾಯ್, ಫಾರ್ವರ್ಡ್ ಬ್ಲಾಕ್‌ನ ಡಿ. ಬಿಸ್ವಾಸ್, ಜೆ.ಡಿ(ಎಸ್) ನಾಯಕ ಎಚ್.ಡಿ. ದೇವೇ ಗೌಡ, ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು, ಟಿಆರ್ಎಸ್ ನಾಯಕ ಕೆ. ಚಂದ್ರಶೇಖರ್ ರಾವ್ ಅವರುಗಳು ಪಾಲ್ಗೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಾಯಾವತಿ, ತೃತೀಯರಂಗ, ಔತಣಕೂಟ
ಮತ್ತಷ್ಟು
ಮಾಯಾ ಔತಣಕ್ಕೆ ಜಯಾ ಬರಲಿಲ್ಲವೇಕೆ?
ಕೇಂದ್ರಕ್ಕೆ ರಾಜ್ಯಪಾಲರ ವರದಿ
ಮಾಯಾ ಪ್ರಧಾನಿ ಅಭ್ಯರ್ಥಿ ಅಲ್ಲ: ನಾಯ್ಡು
3,423 ಅಭ್ಯರ್ಥಿಗಳು ಅನರ್ಹರು: ಚುನಾವಣಾ ಆಯೋಗ
ಯಾವುದೇ ಪಕ್ಷದೊಂದಿಗೆ ಮೈತ್ರಿ ಇಲ್ಲ: ಮಾಯಾ
ಜಮ್ಮು ಕಾಶ್ಮೀರಕ್ಕೆ ನುಸುಳಿದ ಉಗ್ರಗಾಮಿಗಳು