ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಜೇಟ್ಲಿ-ರಾಜನಾಥ್ ಕೋಪ ಶಮನಕ್ಕೆ ಆಡ್ವಾಣಿ ಯತ್ನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೇಟ್ಲಿ-ರಾಜನಾಥ್ ಕೋಪ ಶಮನಕ್ಕೆ ಆಡ್ವಾಣಿ ಯತ್ನ
ಈಶಾನ್ಯರಾಜ್ಯಗಳಲ್ಲಿನ ಚುನಾವಣಾ ಮೇಲ್ವಿಚಾರಣಾ ಸಮಿತಿಗೆ ಸುಧಾಂಶು ಮಿತ್ತಲ್ ಅವರನ್ನು ನೇಮಿಸಿರುವ ಹಿನ್ನೆಲೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಜೇಟ್ಲಿ ಹಾಗೂ ಪಕ್ಷಾಧ್ಯಕ್ಷ ರಾಜ್‌ನಾಥ್ ಸಿಂಗ್ ನಡುವಿನ ಅಸಮಾಧಾನವನ್ನು ಪರಿಹರಿಸಲು ಮುಂದಾಗಿರುವ ಪಕ್ಷದ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಪರಿಹಾರ ಪ್ರಕ್ರಿಯೆ ಉಪಕ್ರಮವನ್ನು ಆರಂಭಿಸಿದ್ದಾರೆ.

ಇವರ ಪ್ರಯತ್ನಕ್ಕೆ ಪಕ್ಷದ ಕೇಂದ್ರೀಯ ಸಂಘಟನೆಯ ಕಾರ್ಯದರ್ಶಿ ಹಾಗೂ ಆರ್ಎಸ್ಎಸ್‌ ಪ್ರಮುಖರಾದ ರಾಮಲಾಲ್ ಅವರೂ ಆಡ್ವಾಣಿಯವರಿಗೆ ಸಹಾಯ ಹಸ್ತ ಚಾಚಿದ್ದಾರೆ. ಕಳೆದ ಎರಡು ದಿನಗಳ ಸಭೆಗೆ ಮಿತ್ತಲ್ ಅವರೂ ಭಾಗವಹಿಸಿಲ್ಲ.

ಜೇಟ್ಲಿ ಅವರಲ್ಲದೆ, ಪಕ್ಷದೊಳಗಿನ ಹಲವರು ವಿವಾದಾಸ್ಪದ ಉದ್ಯಮಿಯ ನೇಮಕವನ್ನು ವಿರೋಧಿಸಿದ್ದಾರೆ. ರಾಜ್ಯಾಧ್ಯಕ್ಷ ರಾಜನಾಥ್ ಸಿಂಗ್ ಅವರು ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕಾಣುತ್ತಿಲ್ಲ. ಈ ಮಧ್ಯೆ, ಮಿತ್ತಲ್ ನೇಮಕವನ್ನು ಪ್ರತಿಭಟಿಸಿ ಜೇಟ್ಲಿ ಅವರು ಚುನಾವಣಾ ಸಮಿತಿಯ ಪ್ರಮುಖ ಸಭೆಗಳನ್ನು ಬಹಿಷ್ಕರಿಸುತ್ತಿದ್ದಾರೆ.

ಸುಧಾಂಶು ಮಿತ್ತಲ್ ಅವರು ತನ್ನ ಸ್ಥಾನ ತ್ಯಜಿಸಬೇಕು ಎಂದು ಪಕ್ಷದ ಕೆಲವು ನಾಯಕರು ಅಭಿಪ್ರಾಯಿಸುತ್ತಿದ್ದಾರೆ. ಮಿತ್ತಲ್ ಅವರ ವಿವಾದಾಸ್ಪದ ಹಿನ್ನಲೆ ಹೊಂದಿರುವ ಕಾರಣ ತನ್ನ ಪ್ರತಿಭಟನೆ ನೈತಿಕವಾದುದ ಎಂದು ಜೇಟ್ಲಿ ಭಾವಿಸಿದ್ದಾರೆ. ಆದರೆ, ಮಿತ್ತಲ್ ಅವರಿಗೆ ಸ್ಥಾನ ತ್ಯಜಿಸಿ ಎಂಬುದು ಇತರರಿಗೆ ಕಷ್ಟಕಾರಿ ವಿಚಾರ.

ಈ ಮಧ್ಯೆ, ಈಶಾನ್ಯರಾಜ್ಯಗಳ ಕುರಿತು ಕರೆದಿದ್ದ ಕಳೆದೆರಡು ಸಭೆಗಳಲ್ಲಿ ಮಿತ್ತಲ್‌ಗೆ ಕರೆ ಇರಲಿಲ್ಲ. ಪಕ್ಷದ ಮುಖ್ಯಕಚೇರಿಯಲ್ಲಿ ನಡೆದಿದ್ದ, ಸಭೆಯಲ್ಲಿ ಜೇಟ್ಲಿ ಅವರನ್ನು ಹೊರತುಪಡಿಸಿದರೆ ಕೇಂದ್ರೀಯ ಸಮಿತಿಯ ಎಲ್ಲಾ ನಾಯಕರು ಭಾಗವಹಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನಾವು ತೃತೀಯ ಪರ್ಯಾಯವನ್ನು ನೀಡಲಿದ್ದೇವೆ: ಮಾಯಾ
ಮಾಯಾ ಔತಣಕ್ಕೆ ಜಯಾ ಬರಲಿಲ್ಲವೇಕೆ?
ಕೇಂದ್ರಕ್ಕೆ ರಾಜ್ಯಪಾಲರ ವರದಿ
ಮಾಯಾ ಪ್ರಧಾನಿ ಅಭ್ಯರ್ಥಿ ಅಲ್ಲ: ನಾಯ್ಡು
3,423 ಅಭ್ಯರ್ಥಿಗಳು ಅನರ್ಹರು: ಚುನಾವಣಾ ಆಯೋಗ
ಯಾವುದೇ ಪಕ್ಷದೊಂದಿಗೆ ಮೈತ್ರಿ ಇಲ್ಲ: ಮಾಯಾ