ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಯುಪಿಎ 50,000 ಕೋಟಿಯನ್ನು ಏನು ಮಾಡಿದೆ: ಮೋದಿ ಪ್ರಶ್ನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯುಪಿಎ 50,000 ಕೋಟಿಯನ್ನು ಏನು ಮಾಡಿದೆ: ಮೋದಿ ಪ್ರಶ್ನೆ
ಯುಪಿಎ ಸರ್ಕಾರ 50 ಸಾವಿರ ಕೋಟಿ ರೂಪಾಯಿ ದುರ್ಬಳಕೆ ಮಾಡಿರುವುದಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಆಪಾದಿಸಿದ್ದಾರೆ. ಕೇಂದ್ರ ಸರ್ಕಾರದ ಖಜಾನೆಯಿಂದ ನಾಪತ್ತೆಯಾಗಿರುವ 50 ಸಾವಿರ ಕೋಟಿ ರೂಪಯಿ ಮೊತ್ತಕ್ಕೆ ಲೆಕ್ಕವಿಲ್ಲ ಎಂದು ಮಹಾ ಲೇಖಪಾಲರ ವರದಿ ತಿಳಿಸುತ್ತದೆ ಎಂದು ಮೋದಿ ಹೇಳಿದ್ದಾರೆ.

"ಇದ್ದಕ್ಕಿದ್ದಂತೆ ಮಾಯವಾಗಿರುವ ಇಷ್ಟು ದೊಡ್ಡ ಮೊತ್ತವು ಎಲ್ಲಿ ಹೋಗಿದೆ ಎಂಬುದನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರಿಂದ ತಿಳಿಯಲು ರಾಷ್ಟ್ರದ ಜನತೆ ಬಯಸುತ್ತಾರೆ ಎಂದು ಮೋದಿ ಹೇಳಿದ್ದಾರೆ. ಅವರು ಮಹಾರಾಷ್ಟ್ರದ ಬಿಜೆಪಿ-ಶಿವಸೇನಾ ಮೈತ್ರಿಯ ಚುನಾವಣಾ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಿದ ಬಳಿಕ ಮಾತನಾಡುತ್ತಿದ್ದರು.

ಸಿಎಜಿ ವರದಿಯ ಪ್ರಕಾರ ಮಾಯವಾಗಿರುವ ಈ ಮೊತ್ತವು ಎಲ್ಲಿ ಹೋಗಿದೆ ಎಂದು ಪ್ರಶ್ನಿಸಿದ ಮೋದಿ, ಇದನ್ನು ಚುನಾವಣಾ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆಯೇ ಅಥವಾ ಯಾವುದಾದರೂ ಆಯ್ದ ಎನ್‌ಜಿಒಗೆ ನೀಡಲಾಗಿದೆಯೇ ಎಂಬುದು ರಾಷ್ಟ್ರಕ್ಕೆ ಗೊತ್ತಾಗಬೇಕಾಗಿದೆ ಎಂದು ಅವರು ಒತ್ತಾಯಿಸಿದ್ದಾರೆ. 'ದಾಲ್ ಮೇ ಕುಚ್ ಕಾಲಾ ಹೈ' (ಈ ವಿಚಾರದಲ್ಲಿ ಏನೋ ಇದೆ) ಎಂದು ಅವರು ಸಂಶಯ ವ್ಯಕ್ತಪಡಿಸಿದರು.

ಒಬ್ಬ ಗೌರವಾನ್ವಿತ ಆರ್ಥಶಾಸ್ತ್ರಜ್ಞ ಎಂಬುದಾಗಿ ಮನನೋಹನ್ ಸಿಂಗ್ ಅವರನ್ನು ಬಣ್ಣಿಸಿದ ಮೋದಿ, ಸಿಂಗ್ ಅವರು ಪಿ.ವಿ. ನರಸಿಂಹ ರಾವ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ವೇಳೆ ಹರ್ಷದ್ ಮೆಹ್ತಾ ಶೇರುಹಗರಣ ನಡೆದಿತ್ತು. ಇಂದು ಅವರು ಪ್ರಧಾನಿಯಾಗಿರುವ ವೇಳೆಗ 'ಸತ್ಯಂ' ಹಗರಣ ಬೆಳಕಿಗೆ ಬಂದಿದೆ. ಅವರು ಅಧಿಕಾರದ ಚುಕ್ಕಾಣಿ ಹಿಡಿದಿದ್ದ ವೇಳೆ ಯಾಕೆ ಇಂತಹವುಗಳು ನಡೆಯುತ್ತಿವೆ? ಇದು ಅವರ ಆರ್ಥಿಕ ನೀತಿಯ ಪ್ರತಿಫಲವೇ ಅಥನಾ ಇನ್ನೇನಾದರೂ ಇದೆಯೇ? ಎಂದು ಅವರು ಅಪಾರ ಸಂಖ್ಯೆಯ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡುತ್ತಾ ನುಡಿದರು.

ಅಲ್ಲದೆ ಎನ್‌ಡಿಎ ಆಡಳಿತದಲ್ಲಿ ಪ್ರಧಾನಿ ವಾಜಪೇಯಿ ಅವರು ಆರಂಭಿಸಿದ್ದ ರಾಷ್ಟ್ರೀಯ ರಸ್ತೆ ಜಾಲ ಮೂಲಸೌಕರ್ಯ ಯೋಜನೆಯನ್ನು ಸಿಂಗ್ ಅವರು ಹಿಂಸರಿಸಿದ್ದಾರೆ ಎಂದು ಮೋದಿ ಈ ಸಂದರ್ಭದಲ್ಲಿ ದೂರಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜೇಟ್ಲಿ-ರಾಜನಾಥ್ ಕೋಪ ಶಮನಕ್ಕೆ ಆಡ್ವಾಣಿ ಯತ್ನ
ನಾವು ತೃತೀಯ ಪರ್ಯಾಯವನ್ನು ನೀಡಲಿದ್ದೇವೆ: ಮಾಯಾ
ಮಾಯಾ ಔತಣಕ್ಕೆ ಜಯಾ ಬರಲಿಲ್ಲವೇಕೆ?
ಕೇಂದ್ರಕ್ಕೆ ರಾಜ್ಯಪಾಲರ ವರದಿ
ಮಾಯಾ ಪ್ರಧಾನಿ ಅಭ್ಯರ್ಥಿ ಅಲ್ಲ: ನಾಯ್ಡು
3,423 ಅಭ್ಯರ್ಥಿಗಳು ಅನರ್ಹರು: ಚುನಾವಣಾ ಆಯೋಗ