ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸಿಪಿಐ(ಎಂ) ಚುನಾವಣಾ ಪ್ರಣಾಳಿಕೆ ಬಿಡುಗಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಪಿಐ(ಎಂ) ಚುನಾವಣಾ ಪ್ರಣಾಳಿಕೆ ಬಿಡುಗಡೆ
ರಾಷ್ಟ್ರಾದ್ಯಂತ ಚುನಾವಣಾ ರಂಗು ಹೆಚ್ಚುತ್ತಿರುವಂತೆ, ಸಿಪಿಎಂ ಸೋಮವಾರ ತನ್ನ ಚುನಾವಣಾ ಪ್ರಣಾಳಿಕೆಯನ್ನು ನವದೆಹಲಿಯಲ್ಲಿ ಬಿಡುಗಡೆ ಮಾಡಿದೆ.

"ನಮ್ಮ ಸರ್ಕಾರವು ಜನಪರ ಆರ್ಥಿಕ ನೀತಿಗಳನ್ನು ಹೊಂದಲಿದೆ ಮತ್ತು ಪ್ರಣಾಳಿಕೆಯು ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಸೋಲಿಸಲು ಕರೆ ನೀಡುತ್ತದೆ ಎಂದು ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಪಕ್ಷದ ನಾಯಕ ಪ್ರಕಾಶ್ ಕಾರಟ್ ಹೇಳಿದ್ದಾರೆ.

ಭಾರತ-ಅಮೆರಿಕ ಅಣುಒಪ್ಪಂದದಲ್ಲಿ ಯುಪಿಎ ಸರ್ಕಾರ ಮುಂದುವರಿದಾಗ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂತೆಗೆದುಕೊಂಡಿದ್ದ ಎಡಪಕ್ಷದ ನಾಯಕ, ಯುಪಿಎಯು ನಮ್ಮ ಸ್ವತಂತ್ರ ವಿದೇಶಾಂಗ ನೀತಿಗೆ ವಿರುದ್ಧವಾಗಿ ನಡೆದುಕೊಂಡಿದೆ ಎಂದು ದೂರಿದ್ದಾರೆ.

ಬಡವರು ಮತ್ತು ಶ್ರೀಮಂತರಲ್ಲಿ ಒಡಕುಂಟಾಗಲು ಯುಪಿಎ ಕಾರಣ ಎಂದು ಪ್ರತಿಪಾದಿಸಿದ ಅವರು, ಕಾಂಗ್ರೆಸ್ ಶ್ರೀಮಂತರ ಪರವಾದ ನೀತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಈಗಾಗಲೇ ಶ್ರೀಮಂತವಾಗಿರುವವರನ್ನು ಇನ್ನಷ್ಟು ಶ್ರೀಮಂತರಾಗಿಸುವಂತ ಕಾರ್ಯಗಳನ್ನು ಪ್ರಜ್ಞಾಪೂರ್ವಕವಾಗಿ ಕೈಗೊಂಡಿದೆ ಎಂದು ಹೇಳಿದ್ದಾರೆ.

ಅಗತ್ಯವಸ್ತುಗಳ ಬೆಲೆ ಹೆಚ್ಚಳ ಮತ್ತು ಹಣದುಬ್ಬರದ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು ಹಣದುಬ್ಬರವನ್ನು ನಿಯಂತ್ರಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಮತ್ತು ಬೆಲೆಗಳ ಏರಿಕೆ ಮುಂದುವರಿದಿದೆ ಎಂದು ದೂರಿದರು. ಅಲ್ಲದೆ, ವಿದೇಶಾಂಗ ನೀತಿಯ ವಿಚಾರದಲ್ಲಿ ಸರ್ಕಾರವು ಎಡಪಕ್ಷಗಳನ್ನು ವಂಚಿಸಿರುವುದಾಗಿ ಅವರು ಆಪಾದಿಸಿದರು.

ಯುಪಿಎಯ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳು ಕೃಷಿ ಬಿಕ್ಕಟ್ಟನ್ನು ನಿಭಾಯಿಸಲು ವಿಫಲವಾಗಿದ್ದು, ರೈತರು ಪರ್ಯಾಯ ಜಾತ್ಯತೀತ ಸರ್ಕಾರ ಒಂದನ್ನು ಬಯಸುತ್ತಾರೆ ಎಂದು ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರ‌್ಯಾಗಿಂಗ್: ಹಿಮಾಚಲ, ಆಂಧ್ರ ಸರ್ಕಾರಗಳಿಗೆ ಸು.ಕೋ. ನೋಟೀಸ್
ಯುಪಿಎ 50,000 ಕೋಟಿಯನ್ನು ಏನು ಮಾಡಿದೆ: ಮೋದಿ ಪ್ರಶ್ನೆ
ಜೇಟ್ಲಿ-ರಾಜನಾಥ್ ಕೋಪ ಶಮನಕ್ಕೆ ಆಡ್ವಾಣಿ ಯತ್ನ
ನಾವು ತೃತೀಯ ಪರ್ಯಾಯವನ್ನು ನೀಡಲಿದ್ದೇವೆ: ಮಾಯಾ
ಮಾಯಾ ಔತಣಕ್ಕೆ ಜಯಾ ಬರಲಿಲ್ಲವೇಕೆ?
ಕೇಂದ್ರಕ್ಕೆ ರಾಜ್ಯಪಾಲರ ವರದಿ