ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರೇಣುಕಾ ಕಾಲ್ಬುಡದಲ್ಲೇ ಅತಿಹೆಚ್ಚು ಮಾನವಹಕ್ಕು ಉಲ್ಲಂಘನೆ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೇಣುಕಾ ಕಾಲ್ಬುಡದಲ್ಲೇ ಅತಿಹೆಚ್ಚು ಮಾನವಹಕ್ಕು ಉಲ್ಲಂಘನೆ!
PIB
ಮಾನವಹಕ್ಕುಗಳ ಉಲ್ಲಂಘನೆಯಲ್ಲಿ ಉತ್ತರ ಪ್ರದೇಶ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ನಂತರದ ಸ್ಥಾನ ಪಕ್ಕದ ನವದೆಹಲಿಗೆ ಸಲ್ಲುತ್ತದೆ ಎಂಬುದಾಗಿ ಎನ್ಎಚ್ಆರ್‌ಸಿ ಅಂಕೆಸಂಖ್ಯೆಗಳು ಹೇಳಿವೆ.

ಕಳೆದ ವರ್ಷ ದಾಖಲಾಗಿರುವ ಒಟ್ಟು 94,559 ಮಾನವಹಕ್ಕು ಉಲ್ಲಂಘನೆ ಪ್ರಕರಣಗಳಲ್ಲಿ 55,216 ಪ್ರಕರಣಗಳು ಉತ್ತರಪ್ರದೇಶ ಒಂದರಿಂದಲೇ ದಾಖಲಾಗಿವೆ ಎಂದು ಅಂಕಿಅಂಶಗಳು ಹೇಳಿವೆ. ಇದು ಒಟ್ಟು ಪ್ರಕರಣಗಳಲ್ಲಿ ಶೇ.58.39. ದೆಹಲಿಯಲ್ಲಿ 2008ರಲ್ಲಿ 5,616 ಪ್ರಕರಣಗಳು ದಾಖಲಾಗಿವೆ.

ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ ತೃತೀಯ ಸ್ಥಾನ ಗುಜರಾತ್ ಪಡೆದಿದ್ದು, ಇಲ್ಲಿಂದ ಒಟ್ಟು 3,813 ಪ್ರಕರಣಗಳು ದಾಖಲಾಗಿವೆ. ಇದರ ನಂತರ ಸ್ಥಾನ ಬಿಹಾರದ್ದಾಗಿದ್ದು, ಈ ರಾಜ್ಯದಿಂದ ದಾಖಲಾಗಿರುವ ಪ್ರಕರಣಗಳ ಸಂಖ್ಯೆ 3,672.
ಹರ್ಯಾಣದಿಂದ 3,493 ಪ್ರಕರಣಗಳು, ಮಹಾರಾಷ್ಟ್ರದಿಂದ 3,483, ರಾಜಸ್ಥಾನದಿಂದ 2,640, ಮಧ್ಯಪ್ರದೇಶದಿಂದ 2,246 ಹಾಗೂ ಪಂಜಾಬಿನಿಂದ 1,082 ಪ್ರಕರಣಗಳು ದಾಖಲಾಗಿವೆ.

ದಕ್ಷಿಣಭಾರತದಲ್ಲಿ ತಮಿಳ್ನಾಡು ಮೊದಲ ಸ್ಥಾನ ಪಡೆದಿದ್ದು, ಕಳೆದ ವರ್ಷ ಇಲ್ಲಿಂದ ದಾಖಲಾಗಿರುವ ಪ್ರಕರಣಗಳ ಸಂಖ್ಯೆ 3,165. ಪಕ್ಕದ ಆಂಧ್ರಪ್ರದೇಶದಿಂದ 1,222 ಪ್ರಕರಣಗಳಾದರೆ, ಕರ್ನಾಟಕದಿಂದ ದಾಖಲಾಗಿರುವ ಪ್ರಕರಣಗಳ ಸಂಖ್ಯೆ822 ಮತ್ತು ಕೇರಳದಿಂದ 355 ಪ್ರಕರಣಗಳು ದಾಖಲಾಗಿವೆ. ಉತ್ತರಖಂಡ್ ಹಾಗೂ ಜಾರ್ಖಂಡ್‌ನಿಂದ ಅನುಕ್ರಮವಾಗಿ 1,589 ಹಾಗೂ 1,008 ಪ್ರಕರಣಗಳು ದಾಖಲಾಗಿವೆ.

ಈಶಾನ್ಯರಾಜ್ಯಗಳಿಂದ ದಾಖಲಾಗಿರುವ ಪ್ರಕರಣಗಳ ಸಂಖ್ಯೆ ತುಲನಾತ್ಮಕವಾಗಿ ಕಡಿಮೆ. ಅಸ್ಸಾಮಿನಿಂದ 210 ಪ್ರಕರಣಗಳು ದಾಖಲಾಗಿವೆ. ನಾಗಾಲ್ಯಾಂಡಿನಿಂದ 11, ಮೇಘಾಲಯದಿಂದ 23, ಅರುಣಾಚಲ ಪ್ರದೇಶದಿಂದ 24, ಮಿಜೋರಾಂ ನಿಂದ 29, ಮಣಿಪುರದಿಂದ 40 ಮತ್ತು ತ್ರಿಪುರದಿಂದ 47 ಪ್ರಕರಣಗಳು ದಾಖಲಾಗಿವೆ ಎಂದು ಆಯೋಗ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಿಪಿಐ(ಎಂ) ಚುನಾವಣಾ ಪ್ರಣಾಳಿಕೆ ಬಿಡುಗಡೆ
ರ‌್ಯಾಗಿಂಗ್: ಹಿಮಾಚಲ, ಆಂಧ್ರ ಸರ್ಕಾರಗಳಿಗೆ ಸು.ಕೋ. ನೋಟೀಸ್
ಯುಪಿಎ 50,000 ಕೋಟಿಯನ್ನು ಏನು ಮಾಡಿದೆ: ಮೋದಿ ಪ್ರಶ್ನೆ
ಜೇಟ್ಲಿ-ರಾಜನಾಥ್ ಕೋಪ ಶಮನಕ್ಕೆ ಆಡ್ವಾಣಿ ಯತ್ನ
ನಾವು ತೃತೀಯ ಪರ್ಯಾಯವನ್ನು ನೀಡಲಿದ್ದೇವೆ: ಮಾಯಾ
ಮಾಯಾ ಔತಣಕ್ಕೆ ಜಯಾ ಬರಲಿಲ್ಲವೇಕೆ?