ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಪ್ಪಅಮ್ಮ ಜಗಳ - ಕೂಸು ಆತ್ಮಹತ್ಯೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಪ್ಪಅಮ್ಮ ಜಗಳ - ಕೂಸು ಆತ್ಮಹತ್ಯೆ
ತನ್ನ ಹೆತ್ತವರ ನಡುವಿನ ಮನಸ್ತಾಪದಿಂದ ನೊಂದ ಹನ್ನೊಂದರ ಹರೆಯದ ಬಾಲಕನೊಬ್ಬ ಓಧವ್‌ನಲ್ಲಿನ ತನ್ನ ನಿವಾಸದಲ್ಲಿ ನೇಣಿಗೆ ಕೊರಳೊಡ್ಡಿರುವ ದಾರುಣ ಘಟನೆ ಸಂಭವಿಸಿದೆ. ಇಂತಹ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಕನೊಬ್ಬ ಆತ್ಮಹತ್ಯೆಯಂತ ನಿರ್ಧಾರಕ್ಕೆ ಮುಂದಾಗಿರುವ ಘಟನೆಗಳು ಅಹಮದಾಬಾದಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿರುವ ಉದಾಹಣೆಗಳಿಲ್ಲ ಎಂದುದಾಗಿ ಆಘಾತಗೊಂಡಿರುವ ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ.

ಅರ್ಪಣ್ ಪಾಂಚಾಲ್ ಎಂಬ ಐದನೆ ತರಗತಿಯ ಹುಡುಗ ಇಂತಹ ವಿಕೋಪಕಾರಿ ನಿರ್ಧಾರ ಕೈಗೊಂಡಿದ್ದು, ತನ್ನ ಹೆತ್ತಮ್ಮನ ಸಿಲ್ಕ್ ದುಪ್ಪಟ್ಟವನ್ನೇ ನೇಣಾಗಿಸಿ ಇಹಲೋಕ ತ್ಯಜಿಸಿದ್ದಾನೆ. ಈತ ತನ್ನ ಹೆತ್ತವರ ಏಕೈಕ ಪುತ್ರನಾಗಿದ್ದ. ಶೈಲೇಶ್ ಪಾಂಚಾಲ್ ಮತ್ತು ಭಾವನಾ ದಂಪತಿಗಳು ಅಂಗವೈಕಲ್ಯ ಹೊಂದಿದ್ದಾರೆ. ಇವರೊಳಗೆ ಕಲಹವಿದ್ದು, ಭಾವನಾ ಮನೆಬಿಟ್ಟು ಹೋಗಿರುವ ಕಾರಣಕ್ಕೆ ಮಗು ಆತ್ಮಹತ್ಯೆಯಂತಹ ಕೃತ್ಯಕ್ಕೆ ಮುಂದಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

"ಅರ್ಪಣ್‌ನ ಹೆತ್ತವರು ಮನಸ್ತಾಪ ಹೊಂದಿದ್ದು ಕಳೆದ ಎರಡು ತಿಂಗಳಿಂದ ಪರಸ್ಪರ ಮಾತನಾಡುತ್ತಿರಲಿಲ್ಲ. ತಾಯಿಯು ಮನೆಬಿಟ್ಟಿ ಹೋಗುವ ಬೆದರಿಕೆ ಹಾಕಿದ್ದರೆ, ಈಕೆ ಮನೆಬಿಟ್ಟು ಹೋದರೆ, ತಾನು ಮತ್ತು ತನ್ನ ಪುತ್ರ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಂದೆ ಆತ್ಯಹತ್ಯಾ ಪತ್ರ ಬರೆದಿಟ್ಟಿದ್ದರು. ಇವರಿಬ್ಬರ ನಡುವೆ ರಾಜೀಪಂಚಾಯಿತಿ ನಡೆಯುತ್ತಿರುವಾಗ ಶನಿವಾರ ಮುಂಜಾನೆ ಒಂಬತ್ತು ಗಂಟೆಯ ಹೊತ್ತಿಗೆ ಭಾವನಾ ಮನೆಬಿಟ್ಟು ತೆರಳಿದ್ದರು" ಎಂಬುದಾಗಿ ಓಧವ್ ಪೊಲೀಸ್ ಠಾಣೆಯ ಜೆ.ಬಿ. ರಾಣಾ ಹೇಳಿದ್ದಾರೆ.

ತನ್ನ ತಾಯಿ ಮನೆಬಿಟ್ಟು ತೆರಳಿದ ಕಾರಣ ಅರ್ಪಣ್ ತೀವ್ರ ಬೇಗುದಿಗೊಳಗಾಗಿದ್ದ. ಆಕೆಯನ್ನು ತಡೆಯುವಂತೆ ಆತ ತಂದೆಯನ್ನು ಪದೇಪದೇ ವಿನಂತಿಸಿಕೊಂಡಿದ್ದ. ವೃತ್ತಿಯಲ್ಲಿ ಟೈಲರ್ ಆಗಿದ್ದ ಶೈಲೇಶ್ ಬಳಿಕ ಪತ್ನಿಯನ್ನು ಹುಡುಕಿ ಹೊರಟಿದ್ದ. ಆಕಸ್ಮತ್ತಾಗಿ ತಂದೆ ಬರೆದಿಟ್ಟ ಪತ್ರ ಈತನ ಕಣ್ಣಿಗೆ ಬಿದ್ದಿದ್ದು, ಜೀವಕಳೆದುಕೊಳ್ಳುವ ಮುನ್ನ, ತನ್ನ ತಂದೆಯ ನಿಲುವಿಗೆ ತನ್ನ ಸಹಮತವಿದೆ ಎಂಬುದಾಗಿ ಅದೇ ಪತ್ರಕ್ಕೆ ಸೇರಿಸಿದ್ದ.

ತನ್ನ ಪುತ್ರ ಮನೆಯಲ್ಲಿ ಹೆಚ್ಚಿನ ಸಮಯ ಕಳೆದ ಕಾರಣ ಪತಿಯೇ ಮಗುವನ್ನು ಕೊಂದು ಹಾಕಿರುವುದಾಗಿ ಭಾವನಾ ಆಪಾದಿಸಿದ್ದಾರೆ. ಆದರೆ ಸಾಂದರ್ಭಿಕ ಸಾಕ್ಷ್ಯಾಧಾರಗಳು ಆತ್ಮಹತ್ಯೆ ಎಂಬುದನ್ನು ತೋರುತ್ತವೆ ಎಂಬುದಾಗಿ ರಾಣಾ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರೇಣುಕಾ ಕಾಲ್ಬುಡದಲ್ಲೇ ಅತಿಹೆಚ್ಚು ಮಾನವಹಕ್ಕು ಉಲ್ಲಂಘನೆ!
ಸಿಪಿಐ(ಎಂ) ಚುನಾವಣಾ ಪ್ರಣಾಳಿಕೆ ಬಿಡುಗಡೆ
ರ‌್ಯಾಗಿಂಗ್: ಹಿಮಾಚಲ, ಆಂಧ್ರ ಸರ್ಕಾರಗಳಿಗೆ ಸು.ಕೋ. ನೋಟೀಸ್
ಯುಪಿಎ 50,000 ಕೋಟಿಯನ್ನು ಏನು ಮಾಡಿದೆ: ಮೋದಿ ಪ್ರಶ್ನೆ
ಜೇಟ್ಲಿ-ರಾಜನಾಥ್ ಕೋಪ ಶಮನಕ್ಕೆ ಆಡ್ವಾಣಿ ಯತ್ನ
ನಾವು ತೃತೀಯ ಪರ್ಯಾಯವನ್ನು ನೀಡಲಿದ್ದೇವೆ: ಮಾಯಾ