ದೋಂಕುಪರ್ ರಾಯ್ ನೇತೃತ್ವದ ಮೇಘಾಲಯ ಪ್ರಗತಿಪರ ಮೈತ್ರಿ ಕೂಟ ಸರ್ಕಾರವು ಮಂಗಳವಾರ ಸದದಲ್ಲಿ ಮಂಡಿಸಿದ ವಿಶ್ವಾಸಮತ ಯಾಚನೆಯಲ್ಲಿ ಗೆದ್ದಿದೆ.
60 ಸದಸ್ಯತ್ವದ ಸದನದಲ್ಲಿ ಮಂಡಿಸಿದ್ದ ಗೊತ್ತುವಳಿಯನ್ನು ಮತಕ್ಕೆ ಹಾಕಿದಾಗ ಪರ ಹಾಗೂ ವಿರುದ್ಧ ಬಿದ್ದ ಮತಗಳು 27:27ರಲ್ಲಿ ಸಮಸಮವಾಗಿದ್ದು, ಸ್ಪೀಕರ್ ತಮ್ಮ ಮತ ಚಲಾಯಿಸಿ ಸರ್ಕಾರವನ್ನು ಉಳಿಸಿದ್ದಾರೆ.
ಸ್ಪೀಕರ್ ಅವರಿಂದ ಅಮಾನತ್ತುಕೊಂಡು ಅಧಿವೇಶನಕ್ಕೆ ಹಾಜರಾಗದಂತೆ ತಡೆಹಿಡಿಯಲ್ಪಟ್ಟಿರುವ ಐವರು ಶಾಸಕರಲ್ಲಿ ನಾಲ್ವರು ಹಾಜರಾಗಿ ತಮ್ಮ ಮತಚಲಾಯಿಸಿದ್ದರು. ಆದರೆ ಅವರನ್ನು ಅಮಾನತ್ತುಗೊಳಿಸಿರುವ ಕಾರಣ ಆವರ ಮತಗಳು ಅಸಿಂಧು ಎಂಬುದಾಗಿ ಸ್ಪೀಕರ್ ಘೋಷಿಸಿದರು.
ಸ್ಪೀಕರ್ ಅವರು ವಿಶ್ವಾಸ ಮತದ ಫಲಿತಾಂಶವನ್ನು ಘೋಷಿಸಿದಾಗ, ವಿರೋಧ ಪಕ್ಷಗಳು ಸದನದಲ್ಲಿ ತೀವ್ರ ಕೋಲಾಹಲ ಉಂಟುಮಾಡಿದ್ದು, ಸ್ಪೀಕರ್ ಪಕ್ಷಪಾತಿತನ ತೋರಿದ್ದು ಇದು ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ದೂರಿದ್ದಾರೆ. |