ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ತೃತೀಯರಂಗ ಚುನಾವಣೆಯ ತನಕವೂ ಬಾಳದು: ಗುಜ್ರಾಲ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೃತೀಯರಂಗ ಚುನಾವಣೆಯ ತನಕವೂ ಬಾಳದು: ಗುಜ್ರಾಲ್
ಅತ್ತ ತೃತೀಯರಂಗದ ನಾಯಕೆಲ್ಲರೂ ಒಳಗೊಳಗೆ ಪ್ರಧಾನಿ ಪಟ್ಟ ಏರುವ ಕನಸು ಕಾಣುತ್ತಾ ಮನದೊಳಗೆ ಮಂಡಿಗೆ ಮೆಲ್ಲುತ್ತಿರುವಾಗ, ಇತ್ತ ತೃತೀಯರಂಗದ ಅನಾವರಣವನ್ನು ಲೇವಡಿಮಾಡಿರುವ ಮಾಜಿ ಪ್ರಧಾನಿ ಇಂದ್ರಕುಮಾರ್ ಗುಜ್ರಾಲ್ ಅವರು, ತೃತೀಯರಂಗ ಎಂದರೇನು ಎಂದು ಪ್ರಶ್ನಿಸಿದ್ದು, ಅದು ಚುನಾವಣೆಯ ತನಕವೂ ಬಾಳದು ಎಂಬ ಭವಿಷ್ಯ ನುಡಿದಿದ್ದಾರೆ.

ತೃತೀಯ ರಂಗವು 'ಮಹಾತ್ವಾಕಾಂಕ್ಷೆಯ ಬದ್ಧತೆ'ಯನ್ನು ಹೊಂದಿದೆಯೇ ವಿನಹ ಯಾವುದೇ ಸಿದ್ಧಾಂತವನ್ನು ಹೊಂದಿಲ್ಲ ಎಂದು 1997ರಲ್ಲಿ ಸಂಯುಕ್ತ ರಂಗ ಸರ್ಕಾರದ ಚುಕ್ಕಾಣಿನ್ನು ಅಚ್ಚರಿಯ ರೀತಿಯಲ್ಲಿ ಪಡೆದಿದ್ದ ಗುಜ್ರಾಲ್ ಹೇಳಿದ್ದಾರೆ.
"ಕಾಂಗ್ರೆಸೇತರ ಮತ್ತು ಬಿಜೆಪಿಯೇತರ ಪಕ್ಷಗಳ ಒಗ್ಗೂಡುವಿಕೆಯಿಂದ ಅಸ್ತಿತ್ವಕ್ಕೆ ಬಂದಿರುವ ಈ ತೃತೀಯ ರಂಗವು, ಸಿದ್ಧಾಂತಕ್ಕಿಂತ ಮಹತ್ವಾಕಾಂಕ್ಷೆಗೆ ಬದ್ಧವಾಗಿದೆ. ಅಲ್ಲದೆ ಪ್ರಧಾನಿ ಯಾರಾಗಬೇಕು ಎಂಬದನ್ನು ನಿರ್ಧರಿಸುವುದೂ ಸಹ ಬಹುದೊಡ್ಡ ಸವಾಲಾಗಲಿದೆ" ಎಂದು ಅವರು ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿಗಳನ್ನು ಯಾವ ಅಂಶಕ್ಕಾಗಿ ಹೊರಗಿಡಬೇಕು ಎಂಬುದೂ ನಿರ್ಧರಿತವಾಗಿಲ್ಲ. ಚುನಾವಣಾ ನಂತರ ಬಿಡಿ, ಚುನಾವಣೆಯ ತನಕವೂ ಇದು ಇರಲಾರದು ಎಂದು ಅವರು ಅಭಿಪ್ರಾಯಿಸಿದ್ದಾರೆ. ಸಂಯುಕ್ತ ರಂಗದಲ್ಲಿ ಯಾರು ಪರಮೋಚ್ಚ ಸ್ಥಾನವನ್ನು ಹೊಂದುತ್ತಾರೆ ಎಂಬ ಅನುಭವ ಹೊಂದಿರುವ ಮಾಜಿ ಪ್ರಧಾನಿ, ಇದು ಸಂಸ್ಕರಣದ ಪ್ರಕ್ರಿಯೆಯಾಗಿದ್ದು ಕೊನೆಯ ಹಂತದಲ್ಲಿ ಅತ್ಯುನ್ನತ ಸಮಾನ ಅಂಶವು ಗೆಲ್ಲುತ್ತದೆ ಎಂದು ಹೇಳಿದ್ದಾರೆ.

ದೇವೇ ಗೌಡರ ಬಳಿಕ ಪ್ರಧಾನಿ ಸ್ಥಾನಕ್ಕೆ ಆಯ್ಕೆಯಾಗಿದ್ದ, ಅವರು ತಮ್ಮ ಅನುಭವವನ್ನು ನೆನಪಿಸುತ್ತಾ, "ನಾನು ಯಾವತ್ತೂ ಲಾಬಿ ಮಾಡಿರಲಿಲ್ಲ. ಇದು ಆಶ್ಚರ್ಯಕರವಾಗಿ ತನಗೆ ಒಲಿದುಬಂದಿತ್ತು" ಎಂದು ನುಡಿದರು. ಗೌಡರು ಸ್ಥಾನ ತೊರೆಯುವಂತೆ ಒತ್ತಡ ಉಂಟಾದಾಗ, ಮುಂದಿನ ಪ್ರಧಾನಿ ಅಭ್ಯರ್ಥಿ ಆಯ್ಕೆಗಾಗಿ ಆಂಧ್ರಪ್ರದೇಶ ಭವನದಲ್ಲಿ ಸಂಯುಕ್ತ ಪಕ್ಷಗಳ ಸಭೆ ನಡೆದಿದ್ದಾಗ ಅವರು ತಮ್ಮ ನಿವಾಸದಲ್ಲಿದ್ದರು. ತನಗಲ್ಲಿ ಯಾವ ಪಾತ್ರವೂ ಇಲ್ಲ ಎಂಬ ಕಾರಣಕ್ಕೆ ಅವರು ದೂರ ಉಳಿದಿದ್ದರು.

"ಆದರೆ ಸುಮಾರು ರಾತ್ರಿ 9 ಗಂಟೆಯ ವೇಳೆಗೆ, ಸಂಯುಕ್ತ ರಂಗದ ಸಂಚಾಲಕ ಚಂದ್ರಬಾಬು ನಾಯ್ಡು ತನಗೆ ಕರೆನೀಡಿದ್ದು, ಸಭೆಯಲ್ಲಿ ಭಾಗವಹಿಸುವಂತೆ ತಿಳಿಸಿದರು. ಮುಲಾಯಂ ಸಿಂಗ್ ಯಾದವ್ ಮತ್ತು ಲಾಲೂ ಪ್ರಸಾದ್ ಯಾದವ್ ಅವರುಗಳ ಇಷ್ಟಾನಿಷ್ಟಗಳು ಮತ್ತು ಇತರರು ಈ ವೈರುಧ್ಯಗಳನ್ನು ನಿವಾರಿಸಲು ಹೆಣಗಾಡುವುದನ್ನು ಕಂಡು ನಾನು ಸುಸ್ತಾಗಿ ವಿಶ್ರಾಂತಿಗಾಗಿ ಕೊಠಡಿಯೊಂದನ್ನು ವಿನಂತಿಸಿದ್ದೆ. ಐದ ಗಂಟೆಗಳ ಬಳಿಕ ನಾಯ್ಡು ಅವರು ಬಾಗಿಲು ಬಡಿದು, ಪ್ರತಿಯೊಬ್ಬರು ನೀವೇ ಪ್ರಧಾನಿಯಾಗಲು ಬಯಸಿದ್ದಾರೆ ಎಂಬ ವಿಚಾರವನ್ನು ತಿಳಿಸಿದರು" ಎಂದು ತಮ್ಮ ಸಂದರ್ಶನದಲ್ಲಿ ಹೇಳಿದ್ದಾರೆ.

ಗುಜ್ರಾಲ್ ಅವರು 1997ರ ಏಪ್ರಿಲ್ 21ರಿಂದ 1998ರ ಮಾರ್ಚ್ 19ರ ತನಕ ಪ್ರಧಾನಿ ಪಟ್ಟ ಅಲಂಕರಿಸಿದ್ದರು. 1976ರಲ್ಲಿ ಮಾಸ್ಕೋ ರಾಯಭಾರಿಯಾಗಿದ್ದ ಗುಜ್ರಾಲ್ ಅವರು ತಮ್ಮ ಜೀವನದ ಆಗುಹೋಗುಗಳ ಕುರಿತು ಪುಸ್ತಕ ಬರೆಯುತ್ತಿದ್ದಾರೆ. 'ಐ ಲೀವ್ ಟು ಸಿ ಇಟ್ ಆಲ್' ಎಂಬ ಹೆಸರಿನ ಪುಸ್ತಕವು ಈ ವರ್ಷದ ಅಂತ್ಯದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

2009ರ ಚುನಾವಣೆಯ ಬಳಿಕ ಗುಜ್ರಾಲ್ ಅವರು ಮರಳಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರ "ಈಗಲೇ ಏನನ್ನೂ ಹೇಳಲು ಕಾಲಪಕ್ವವಾಗಿಲ್ಲ. ಇನ್ನೂ ಎಲ್ಲವೂ ಅಸ್ಪಷ್ಟ. ಮೊದಲು ಗರ್ಭಕಟ್ಟಬೇಕು. ಬಳಿಕ ಜನನವಾಗಬೇಕು. ಬಳಿಕವಷ್ಟೆ ವರ ಯಾರು ಎಂಬುದನ್ನು ನಿರ್ಧರಿಸಬಹುದು ಎಂಬುದಾಗಿ ತನ್ನದೆ ವಾಕ್‌ಶೈಲಿಯಲ್ಲಿ ಉತ್ತರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪ್ರಧಾನಿಯಾಗಲು ಆಡ್ವಾಣಿಗೆ ಉಮಾ ಬೆಂಬಲ
ಯಾವುದೇ ಧರ್ಮವನ್ನು ದೂಷಿಸಿಲ್ಲ, ಕ್ಷಮೆಯಾಚಿಸಬೇಕಿಲ್ಲ: ವರುಣ್
ಭಾಷಣಕ್ಕೆ ಕ್ಷಮೆ ಯಾಚಿಸಿದ ವರುಣ್ ಗಾಂಧಿ
ಪ್ರತಿಹುಡುಗಿಯನ್ನು ಲಕ್ಷಾಧಿಪತಿಯಾಗಿಸುವ ಆಡ್ವಾಣಿ ಕನಸು
ತಂಬಾಕು ಕಂಪೆನಿಗಳಿಗೆ ನಿರ್ಬಂಧ
ಛತ್ತೀಸ್‌ಗಡ್: ಸ್ಪೋಟಕ ವಸ್ತುಗಳ ವಶ