ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ವರುಣ್ ಹೇಳಕೆ: ಬಿಜೆಪಿಯೊಳಗೆ ಎರಡು ಧ್ವನಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವರುಣ್ ಹೇಳಕೆ: ಬಿಜೆಪಿಯೊಳಗೆ ಎರಡು ಧ್ವನಿ
ದೇಶಾದ್ಯಂತ ಚರ್ಚೆಗೆ ಆಸ್ಪದವಾಗಿರುವ ವರುಣ್ ಗಾಂಧಿ ಅವರು ವಿವಾದಾಸ್ಪದ ಚುನಾವಣಾ ಭಾಷಣದ ಕುರಿತು ಬಿಜೆಪಿಯೊಳಗಿನಿಂದ ಭಿನ್ನಭಿನ್ನ ಅಭಿಪ್ರಾಯ ವ್ಯಕ್ತವಾಗಿದೆ.

ಬೆಂಗಳೂರಿನಲ್ಲಿ ಪಕ್ಷದ ಹಿರಿಯ ನಾಯಕ ವೆಂಕಯ್ಯ ನಾಯ್ಡು ಅವರು ವರುಣ್ ಗಾಂಧಿಯನ್ನು ಸಮರ್ಥಿಸಿಕೊಂಡಿದ್ದು, ಕಾಂಗ್ರೆಸ್‌ ನಾಯಕ ಎ.ಆರ್. ಅಂತುಳೆ ಹೇಮಂತ್ ಕರ್ಕರೆ ಸಾವಿನ ಕುರಿತು ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದಂತೆ ಈ ಘಟನೆಯೂ ಸಹ ಎಂದು ಎರಡು ಘಟನೆಗಳನ್ನು ಸಮೀಕರಿಸಿದ್ದಾರೆ.

ಆದರೆ, ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ಅವರು ವರುಣ್ ಹೇಳಿಕೆಗೂ ಪಕ್ಷಕ್ಕೂ ಅಂತರ ಕಾಯ್ದುಕೊಳ್ಳುವುದಾಗಿ ಹೇಳಿದ್ದಾರೆ. ವರುಣ್ ನೀಡಿರುವ ಹೇಳಿಕೆಗೆ ಅವರೇ ಜವಾಬ್ದಾರರು ಎಂದಿದ್ದಾರೆ. ಈ ಮಧ್ಯೆ, ವರುಣ್ ಹೇಳಿಕೆಯನ್ನು ಬೇಜವಾಬ್ದಾರಿಯ ಹೇಳಿಕೆ ಎಂಬುದಾಗಿ ವಿರೋಧ ಪಕ್ಷಗಳು ಟೀಕಿಸಿವೆ.

ಆದರೆ ಶಿವಸೇನೆಯು ವರುಣ್‌ ಗಾಂಧಿಯನ್ನು ಬೆಂಬಲಿಸಿದೆ. ಪಕ್ಷದ ಮುಖವಾಣಿ ಸಾಮ್ನಾದಲ್ಲಿ ವರುಣ್‌ಗೆ ಬೆಂಬಲ ವ್ಯಕ್ತಪಡಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆರ್‌ಜೆಡಿಗೆ ಕಾಂಗ್ರೆಸ್ ತಿರುಗೇಟು: ಹೊಂದಾಣಿಕೆ ಸಾಧ್ಯವಿಲ್ಲ
ಕೋರ್ಟ್ ದಯೆಯಿಂದ ಅರ್ಜಿ ಹಾಕಿದ 16 ವರ್ಷದ ಬಳಿಕ ಉದ್ಯೋಗ
ಪ್ರತಿಭಟನಾ ಕರೆನೀಡಿದವರು ನಷ್ಟಭರ್ತಿಮಾಡಲಿ: ಸು.ಕೋ
ತೃತೀಯರಂಗ ಚುನಾವಣೆಯ ತನಕವೂ ಬಾಳದು: ಗುಜ್ರಾಲ್
ಪ್ರಧಾನಿಯಾಗಲು ಆಡ್ವಾಣಿಗೆ ಉಮಾ ಬೆಂಬಲ
ಯಾವುದೇ ಧರ್ಮವನ್ನು ದೂಷಿಸಿಲ್ಲ, ಕ್ಷಮೆಯಾಚಿಸಬೇಕಿಲ್ಲ: ವರುಣ್