ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರಾಜನಾಥ್-ಜೇಟ್ಲಿ ಶೀತಲ ಸಮರ ಅಂತ್ಯ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜನಾಥ್-ಜೇಟ್ಲಿ ಶೀತಲ ಸಮರ ಅಂತ್ಯ?
ಈಶಾನ್ಯ ರಾಜ್ಯಗಳ ಸಂಘಟಕರಾಗಿ ಸುಧಾಂಶು ಮಿತ್ತಲ್ ನೇಮಕದಿಂದ ಬೇಸರಗೊಂಡು ಪಕ್ಷದ ವಿರುದ್ಧ ಮುನಿಸಿಕೊಂಡಿದ್ದ ಅರುಣ್ ಜೇಟ್ಲಿ ಗುರುವಾರ ದಿಢೀರ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿರುವ ಮೂಲಕ ಶೀತಲ ಸಮರಕ್ಕೆ ತೆರೆ ಎಳೆಯಲು ಮುಂದಾಗಿದ್ದಾರೆ.

ಸುಮಾರು ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿದ ಬಳಿಕ ಸಿಂಗ್ ಮನೆಯಿಂದ ಹೊರಬಂದ ಜೇಟ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತ್ರ ಯಾವುದೇ ವಿಷಯ ಹಂಚಿಕೊಂಡಿಲ್ಲ.

ಆದರೆ ಅರುಣ್ ಜೇಟ್ಲಿ ಅವರು ರಾಜನಾಥ್ ಸಿಂಗ್ ಅವರ ನಿವಾಸಕ್ಕೆ ಭೇಟಿ ನೀಡಿ ದೆಹಲಿ ಮತ್ತು ಬಿಹಾರ ರಾಜ್ಯಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಸಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.

ಸುಧಾಂಶು ಮಿತ್ತಲ್ ಈಶಾನ್ಯ ರಾಜ್ಯಗಳ ಸಂಘಟಕರಾಗಿ ನೇಮಕಗೊಳಿಸಿರುವುದು ಅರುಣ್ ಜೇಟ್ಲಿ ಅವರ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿತ್ತು. ವೈಮನಸ್ಸಿನ ಕಂದಕವನ್ನು ಮುಚ್ಚುವ ನಿಟ್ಟಿನಲ್ಲಿ ಜೇಟ್ಲಿ ಇಂದು ಸಿಂಗ್ ಅವರ ಮನೆಗೆ ಭೇಟಿ ನೀಡಿ ಪಕ್ಷದಲ್ಲಿನ ಬಂಡಾಯ ಶಮನ ಮಾಡುವ ಪ್ರಯತ್ನ ನಡೆಸಿರುವುದಾಗಿಯೇ ರಾಜಕೀಯ ಪರಿಣತರು ವಿಶ್ಲೇಷಿಸುತ್ತಿದ್ದಾರೆ.

ಪಕ್ಷದ ಈ ನಿರ್ಧಾರದಿಂದ ಅವರು ಚುನಾವಣಾ ಸಮಿತಿ ಸಭೆಗೂ ಗೈರು ಹಾಜರಾಗಿದ್ದರು. ಆದರೆ, ಜೇಟ್ಲಿ ಅವರಿಗೆ ಸಭೆಯಲ್ಲಿ ಪಾಲ್ಗೊಳ್ಳುವಂತೆ ಸೂಚನೆ ನೀಡಲಾಗಿತ್ತು. ಆದರೂ ಅವರು ಗೈರು ಹಾಜರಾಗಿದ್ದರು. ಇದರಿಂದ ಶಿಸ್ತಿನ ಪಕ್ಷ ಬಿಜೆಪಿಯಲ್ಲಿ ಬಿರುಕು ಉಂಟಾಗಿತ್ತು.

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಈ ದಿನಗಳಲ್ಲಿ ಮುನಿಸು ಸರಿಯಲ್ಲ. ಇದರಿಂದ ಪಕ್ಷದ ಕಾರ್ಯಕರ್ತರಿದೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರು ಜೇಟ್ಲಿಗೆ ಕಿವಿ ಮಾತು ಹೇಳಿದ್ದರು. ಸಮಸ್ಯೆಗಳಿದ್ದರೆ ಪಕ್ಷದ ವೇದಿಕೆಯಲ್ಲಿ ಬಗೆಹರಿಸಿಕೊಳ್ಳಬೇಕು ಎಂದು ಅಡ್ವಾಣಿ ತುಸು ಕೋಪದಿಂದಲೇ ಆಪ್ತರ ಬಳಿ ಗುಡುಗಿದ್ದರು.

ಆದರೆ ಸುಧಾಂಶು ಮಿತ್ತಲ್ ಅವರನ್ನು ವಜಾಗೊಳಿಸುವ ಜೇಟ್ಲಿ ನಿರ್ಧಾರವನ್ನು ಬಿಜೆಪಿ ಸುತಾರಾಂ ಒಪ್ಪುತ್ತಿಲ್ಲ.ಆ ಕಾರಣಕ್ಕಾಗಿಯೇ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ಸೋನಿ ಅವರು ಜೇಟ್ಲಿ ಅವರಿಗೆ ಶನಿವಾರ ರಾತ್ರಿ ಭೇಟಿಯಾಗಿ ಮಾತುಕತೆ ನಡೆಸುವ ಮೂಲಕ ವಿವಾದ ಬಗೆಹರಿಸಿಕೊಳ್ಳಲು ತಿಳಿಸಿರುವುದಾಗಿ ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಾಜನಾಥ್, ಜೇಟ್ಲಿ, ಬಿಜೆಪಿ, ಆಡ್ವಾಣಿ
ಮತ್ತಷ್ಟು
ನಾನು ಪ್ರಧಾನಿ ಸ್ಫರ್ಧೆಯಲ್ಲಿಲ್ಲ: ಶರದ್ ಪವಾರ್
'ನಕಲಿ' ತೆಲಗಿಗೆ ಏಳು ವರ್ಷ ಜೈಲು
ಚುನಾವಣಾ ಪ್ರಚಾರಕ್ಕೆ ಹೊಸಹೊಸ ಗಿಮಿಕ್‌!
ಒರಿಸ್ಸಾ: ಆರೆಸ್ಸೆಸ್ ನಾಯಕನ ಗುಂಡಿಕ್ಕಿ ಕೊಲೆ
ಚುನಾವಣೆ ಬಳಿಕ ಕಾಂಗ್ರೆಸ್‌‍‌ನೊಂದಿಗೆ ಮಾತಾಡಬಹುದು: ಕಾರಟ್
ದುರಂತ ತಪ್ಪಿಸಿಕೊಂಡ ರಾಜಧಾನಿ ಎಕ್ಸ್‌ಪ್ರೆಸ್