ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಡ್ಯಾಮೇಜ್ ಕಂಟ್ರೋಲ್‌ಗೆ ಲಾಲೂ-ಪಾಸ್ವಾನ್ ಯತ್ನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಡ್ಯಾಮೇಜ್ ಕಂಟ್ರೋಲ್‌ಗೆ ಲಾಲೂ-ಪಾಸ್ವಾನ್ ಯತ್ನ
ತನ್ನನ್ನು ಕಡೆಗಣಿಸಿ, ಕೇವಲ ಮೂರು ಸ್ಥಾನ ನೀಡಿ ಆರ್‌ಜೆಡಿ ಮತ್ತು ಎಲ್‌ಜೆಪಿ ನಾಯಕರು ಸ್ಥಾನ ಹೊಂದಾಣಿಕೆ ಮಾಡಿಕೊಂಡ ಕ್ರಮದಿಂದ ಸಿಟ್ಟಿಗೆದ್ದ ಕಾಂಗ್ರೆಸ್ ಇದೀಗ ಬಿಹಾರದಲ್ಲಿ 26ಕ್ಕಿಂತಲೂ ಹೆಚ್ಚಿನ ಸ್ಥಾನಗಳಲ್ಲಿ ಸ್ಫರ್ಧಿಸಲು ಮುಂದಾಗಿರುವುದು ಇದೀಗ ಸದರಿ ಪಕ್ಷಗಳ ನಾಯಕರಿಗೆ ಬಿಸಿ ತುಪ್ಪವಾಗಿದೆ.

ಕಾಂಗ್ರೆಸ್‌ನ ಈ ಕ್ರಮದಿಂದ ಯುಪಿಎ ಮತಗಳು ಒಡೆಯದಂತೆ ತಡೆಯಲು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹಾಗೂ ಎಲ್‌ಜೆಪಿ ನಾಯಕ ರಾಮ್ ವಿಲಾಸ್ ಪಾಸ್ವಾನ್ ಗುರುವಾರ ರಾತ್ರಿ ಸಭೆ ನಡೆಸಿದ್ದು, ಆ ಬಳಿಕ ಮೈತ್ರಿಕೂಟಕ್ಕೆ ಹಾನಿಯಾಗುವಂತದ್ದೇನನ್ನು ಕಾಂಗ್ರೆಸ್ ಮಾಡದು ಎಂಬುದಾಗಿ ಪಸ್ವಾನ್ ಭಾವಿಸಿದ್ದಾರೆ.

"ಯುಪಿಎಯನ್ನು ದುರ್ಬಲಗೊಳಿಸುವ ಮತ್ತು ಎನ್‌ಡಿಎಯನ್ನು ಬಲಗೊಳಿಸುವಂತಹ ಯಾವುದನ್ನೂ ಸೋನಿಯಾ ಗಾಂಧಿ ಮಾಡಲಾರರು ಎಂಬುದಾಗಿ ಲಾಲೂ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಪಾಸ್ವಾನ್ ಹೇಳಿದ್ದಾರೆ.

ಬಿಹಾರದಲ್ಲಿ ತಾನು 26ಕ್ಕಿಂತಲೂ ಹೆಚ್ಚಿನ ಅಭ್ಯರ್ಥಿಗಳನ್ನು ಕಣಕ್ಕಳಿಸುವುದಾಗಿ ಮತ್ತು ಇವರಲ್ಲಿ ಒರ್ವ ಅಭ್ಯರ್ಥಿ ಲಾಲೂ ಪ್ರಸಾದ್ ಯಾದವ್ ಅವರ ಭಾವಮೈದುನ ಆರ್‌ಜೆಡಿ ಬಂಡಾಯನಾಯಕ ಸಾಧುಯಾದವ್ ಸೇರಿದ್ದಾರೆ ಎಂದು ಕಾಂಗ್ರೆಸ್ ಘೋಷಿಸಿದ ಒಂದು ಗಂಟೆಯ ಬಳಿಕ ಪಾಸ್ವಾನ್ ಹಾಗೂ ಲಾಲೂ ಸಭೆ ನಡೆಯಿತು.

ಆರ್‌ಜೆಡಿ ಮತ್ತು ಎಲ್‌ಜೆಪಿಯು ಕಾಂಗ್ರೆಸ್ ಜತೆ ಸಮಾಲೋಚನೆ ನಡೆಸದೆಯೇ ಬಿಹಾರದ 42 ಸ್ಥಾನಗಳನ್ನು ತಮಗೆ ಇಷ್ಟಬಂದಂತೆ ಹಂಚಿಕೊಂಡಿದ್ದು ಕಾಂಗ್ರೆಸ್‌ಗೆ ಮೂರು ಸ್ಥಾನಗಳನ್ನು ಮಾತ್ರ ಉಳಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉಗ್ರರಿಗೆ ಪಾಕ್‌ನಿಂದ ಸಂಪನ್ಮೂಲ: ಪ್ರಣಬ್
ಕೋಮುವಾದಿ ಪ್ರಚಾರದ ವಿರುದ್ಧ ಪ್ರಧಾನಿ ಎಚ್ಚರಿಕೆ
ಉಗ್ರರೊಂದಿಗೆ ಕಾಳಗ: ಸೇನಾ ಅಧಿಕಾರಿ ಬಲಿ
ಸರವಣ ಹೋಟೆಲ್ ಮಾಲೀಕನಿಗೆ ಜೀವಾವಧಿ ಶಿಕ್ಷೆ
ರಾಜನಾಥ್-ಜೇಟ್ಲಿ ಶೀತಲ ಸಮರ ಅಂತ್ಯ?
ನಾನು ಪ್ರಧಾನಿ ಸ್ಫರ್ಧೆಯಲ್ಲಿಲ್ಲ: ಶರದ್ ಪವಾರ್