ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ವರುಣ್: ಉತ್ತರ ಸಲ್ಲಿಕೆ, ನಿರೀಕ್ಷಣಾ ಜಾಮೀನು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವರುಣ್: ಉತ್ತರ ಸಲ್ಲಿಕೆ, ನಿರೀಕ್ಷಣಾ ಜಾಮೀನು
ನವದೆಹಲಿ: ತನ್ನ ಚುನಾವಣಾ ಪ್ರಚಾರದ ವೇಳೆ ಉದ್ರೇಕಕಾರಿ ಭಾಷಣ ಮಾಡಿರುವ ಉತ್ತರ ಪ್ರದೇಶದ ಪಿಲಿಭಿತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿಗೆ ದೆಹಲಿ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ.

ವರುಣ್ ಗಾಂಧಿಯನ್ನು ಬಂಧಿಸದಂತೆ ಮಾರ್ಚ್ 27ರ ತನಕ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ. ವರುಣ್‌ಗೆ 50 ಸಾವಿರ ರೂಪಾಯಿ ವೈಯಕ್ತಿಕ ಮುಚ್ಚಳಿಕೆ ಆಧಾರದಲ್ಲಿ ಜಾಮೀನು ಮಂಜೂರು ಮಾಡಲಾಗಿದೆ.

ಚುನಾವಣಾ ಆಯೋಗಕ್ಕೆ ಉತ್ತರ
ವರುಣ್ ಗಾಂಧಿ ಅವರ ವಕೀಲರು ಶುಕ್ರವಾರ ಮುಂಜಾನೆ ಚುನಾವಣಾ ಆಯೋಗದ ಕಚೇರಿಗೆ ತೆರಳಿ, ಆಯೋಗ ನೀಡಿರುವ ನೋಟೀಸಿಗೆ ಉತ್ತರ ಸಲ್ಲಿಸಿದ್ದಾರೆ. ಈ ವೇಳೆ ವರುಣ್ ಹಾಜರಿರಲಿಲ್ಲ.

ಉತ್ತರ ಸಲ್ಲಿಸಲಾಗಿದೆ ಎಂದಷ್ಟೆ ತಿಳಿಸಿದ ವಕೀಲರು ಹೆಚ್ಚಿನ ವಿವರ ನೀಡಲು ನಿರೀಕರಿಸಿದ್ದಾರೆ.

ಆಯೋಗಕ್ಕೆ ಸಲ್ಲಿಸಲಾಗಿರುವ ಉತ್ತರದಲ್ಲಿ ವರುಣ್ ಸಿಡಿಯನ್ನು ತಿರುಚಲಾಗಿದೆ ಎಂದು ಪ್ರತಿಪಾದಿಸಿರುವುದಾಗಿ ಮ‌ೂಲಗಳು ಹೇಳಿವೆ.

ವರುಣ್‌ಗೆ ಸಿಡಿ ಹಸ್ತಾಂತರ
ಶುಕ್ರವಾರ ಮುಂಜಾನೆ ವರುಣ್ ಅವರ ದೆಹಲಿಯ ನಿವಾಸಕ್ಕೆ ಭೇಟಿ ನೀಡಿರುವ ಉತ್ತರ ಪ್ರದೇಶದ ಚುನಾವಣಾ ಅಧಿಕಾರಿಗಳು ವಿವಾದಾಸ್ಪದ ಸಿಡಿ ಪ್ರತಿಯನ್ನು ಹಸ್ತಾಂತರಿಸಿದ್ದಾರೆ.

ದೆಹಲಿ ಪೊಲೀಸರರೊಂದಿಗೆ ಆಗಮಿಸಿರುವ ಅಧಿಕಾರಿಗಳು ವರುಣ್ ವಾಸ್ತವ್ಯವಿರುವ, ಅವರ ತಾಯಿ ಮಾಜಿ ಕೇಂದ್ರ ಸಚಿವೆ ಮನೇಕಾ ಗಾಂಧಿ ಅವರ ನಿವಾಸಕ್ಕೆ ತೆರಳಿ ಸಿಡಿ ಹಸ್ತಾಂತರಿಸಿದ್ದಾರೆ.

ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಕಾಂಗ್ರೆಸ್ ಇತರರನ್ನು ಬೆಂಬಲಿಸುವುದು ಬಾಲ ನಾಯಿಯನ್ನು ಅಲ್ಲಾಡಿಸಿದಂತೆ'
ಡ್ಯಾಮೇಜ್ ಕಂಟ್ರೋಲ್‌ಗೆ ಲಾಲೂ-ಪಾಸ್ವಾನ್ ಯತ್ನ
ಉಗ್ರರಿಗೆ ಪಾಕ್‌ನಿಂದ ಸಂಪನ್ಮೂಲ: ಪ್ರಣಬ್
ಕೋಮುವಾದಿ ಪ್ರಚಾರದ ವಿರುದ್ಧ ಪ್ರಧಾನಿ ಎಚ್ಚರಿಕೆ
ಉಗ್ರರೊಂದಿಗೆ ಕಾಳಗ: ಸೇನಾ ಅಧಿಕಾರಿ ಬಲಿ
ಸರವಣ ಹೋಟೆಲ್ ಮಾಲೀಕನಿಗೆ ಜೀವಾವಧಿ ಶಿಕ್ಷೆ