ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ವರುಣ್‌ರ ಅಭ್ಯರ್ಥಿತನ ಹಿಂತೆಗೆತವೇಕಿಲ್ಲ: ಕಾಂಗ್ರೆಸ್ ಅಚ್ಚರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವರುಣ್‌ರ ಅಭ್ಯರ್ಥಿತನ ಹಿಂತೆಗೆತವೇಕಿಲ್ಲ: ಕಾಂಗ್ರೆಸ್ ಅಚ್ಚರಿ
ಉದ್ರೇಕಕಾರಿ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿರುವ ವರುಣ್ ಗಾಂಧಿಯ ಅಭ್ಯರ್ಥಿತನವನ್ನು ಬಿಜೆಪಿ ಯಾಕೆ ಹಿಂತೆಗೆದುಕೊಂಡಿಲ್ಲ ಎಂಬುದಾಗಿ ಕಾಂಗ್ರೆಸ್ ಶುಕ್ರವಾರ ಅಚ್ಚರಿವ್ಯಕ್ತಪಡಿಸಿದೆ.

"ವರುಣ್ ಹೇಳಿಕೆಯನ್ನು ಬಿಜೆಪಿಯ ಯಾವುದೇ ಹಿರಿಯ ನಾಯಕರು ಖಂಡಿಸಿಲ್ಲ ಅಥವಾ ಆತನ ಅಭ್ಯರ್ಥಿತನವನ್ನೂ ಹಿಂತೆಗೆದುಕೊಳ್ಳದಿರುವುದು ತನಗೆ ಅಚ್ಚರಿ ಹುಟ್ಟಿಸಿದೆ" ಎಂಬುದಾಗಿ ಕಾಂಗ್ರೆಸ್ ವಕ್ತಾರೆ ಜಯಂತಿ ನಟರಾಜನ್ ಹೇಳಿದ್ದಾರೆ.

ತನ್ನ ಚುನಾವಣಾ ಕ್ಷೇತ್ರ ಪಿಲಿಭಿತ್‌ನಲ್ಲಿ ವರುಣ್ ಗಾಂಧಿ ಅವರ ಕೋಮುವಾದಿ ಭಾಷಣದ ಕುರಿತು ಪ್ರತಿಕ್ರಿಯಿಸುತ್ತಿದ್ದ ಅವರು ಕಾಂಗ್ರೆಸ್ ಇದನ್ನು ಖಂಡಿಸುವುದಾಗಿ ಹೇಳಿದರಲ್ಲದೆ, ಈ ಹೇಳಿಕೆಗಳು ದುರದೃಷ್ಟಕರ ಹಾಗೂ ಅಸಾಂವಿಧಾನಿಕವಾಗಿದ್ದು, ಇದು ಬಿಜೆಪಿಯ ದ್ವೇಷ ರಾಜಕಾರಣವನ್ನು ಪ್ರತಿಬಿಂಬಿಸಿದೆ ಎಂದು ಹೇಳಿದರು.

ಬಿಹಾರದಲ್ಲಿ ಆರ್‌ಜೆಡಿ ಮತ್ತು ಎಲ್‌ಜೆಡಿ ಪಕ್ಷಗಳು ತಮಗೆ 39 ಸ್ಥಾನಗಳನ್ನು ಇರಿಸಿಕೊಂಡು ಕಾಂಗ್ರೆಸ್‌ಗೆ ಕೇವಲ ಮೂರು ಸ್ಥಾನ ಬಿಟ್ಟಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಕಾಂಗ್ರೆಸ್ ನಿರ್ಮಿಸಿರುವ ಪರಿಸ್ಥಿತಿಯಲ್ಲ ಎಂದು ನುಡಿದರು.

ಇದೀಗ ಕಾಂಗ್ರೆಸ್ 26 ಸ್ಥಾನಗಳಲ್ಲಿ ಸ್ಫರ್ಧಿಸಲು ಮುಂದಾಗಿರುವುದರಿಂದ ಯಾವುದಾದರೂ ಸಮಸ್ಯೆ ಅಥವಾ ವಿಭಜನೆಯಾಗಬುಹುದೇ ಎಂದು ಕೇಳಿದ ಪ್ರಶ್ನೆಗೆ ಅವರು ಯಾವುದೇ ವಿಭಜನೆ ಉಂಟಾದಲ್ಲಿ ಇದಕ್ಕೆ ಕಾಂಗ್ರೆಸ್ ಕಾರಣವಲ್ಲ ಎಂದು ನುಡಿದರು. ಬಿಹಾರದಲ್ಲಿ ಸ್ಫರ್ಧಿಸುವ ಎಲ್ಲಾ 26 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸವನ್ನೂ ನಟರಾಜನ್ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಂಗೀತ ಕೇಳುವ ಹಸು ಹೆಚ್ಚು ಹಾಲು ನೀಡುತ್ತದೆ!
ಒರಿಸ್ಸಾ ವಿಶ್ವಾಸಮತ: ರಾಜ್ಯಪಾಲರಿಂದ ವರದಿ
ಶಶಿ ತರೂರ್ ತಿರುವನಂತಪುರದ ಕಾಂಗ್ರೆಸ್ ಅಭ್ಯರ್ಥಿ
ವರುಣ್: ಉತ್ತರ ಸಲ್ಲಿಕೆ, ನಿರೀಕ್ಷಣಾ ಜಾಮೀನು
'ಕಾಂಗ್ರೆಸ್ ಇತರರನ್ನು ಬೆಂಬಲಿಸುವುದು ಬಾಲ ನಾಯಿಯನ್ನು ಅಲ್ಲಾಡಿಸಿದಂತೆ'
ಡ್ಯಾಮೇಜ್ ಕಂಟ್ರೋಲ್‌ಗೆ ಲಾಲೂ-ಪಾಸ್ವಾನ್ ಯತ್ನ