" ಈ ಚುನಾವಣೆಯು ನನ್ನ ಕೊನೆಯ ಚುನಾವಣಾ ಸ್ಫರ್ಧೆಯೂ ಆಗಬಹುದು ಎಂಬುದಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಅವರು ತನ್ನ ಕ್ಷೇತ್ರದಲ್ಲಿ ನಡೆಸಿದ ಚುನಾವಣಾ ಪ್ರಚಾರ ರ‌್ಯಾಲಿಯೊಂದರಲ್ಲಿ ಹೇಳಿದ್ದಾರೆ." ನಾನು ಸುದೀರ್ಘ ಅವಧಿಯಿಂದ ಸರ್ಕಾರದಲ್ಲಿ ಇದ್ದೇನೆ. 37-38 ವರ್ಷಗಳ ಕಾಲ ನಾನು ಸಂಸತ್ತಿನಲ್ಲಿದ್ದೇನೆ. ಇದೀಗ ಇನ್ನೊಂದು ಸರ್ತಿ ನಾನು ನಿಮ್ಮಬೆಂಬಲ ಯಾಚಿಸಲು ಬಂದಿದ್ದೇನೆ" ಎಂಬುದಾಗಿ ಕಾಂಗ್ರೆಸ್‌ನ ಆಪತ್ಬಾಂಧವ ಜಂಗೀಪುರದಲ್ಲಿ ನಡೆದ ಸಮಾವೇಶದಲ್ಲಿ ಹೇಳಿದ್ದಾರೆ." ನನಗೆ ವಯಸ್ಸಾಗುತ್ತಿದೆ. ಇದು ನನ್ನ ಕೊನೆಯ ಸ್ಫರ್ಧೆಯಾಗುತ್ತದೆಯೇ ಎಂಬುದು ತಿಳಿದಿಲ್ಲ" ಎಂದು ಅವರು ಹೇಳಿದ್ದಾರೆ. |