ಎಲ್‌ಟಿಟಿಇ ದಾಳಿ ನಡೆಸುವ ಬೆದರಿಕೆಯ ಹಿನ್ನೆಲೆಯಲ್ಲಿ ಕೇರಳದ ಪ್ರಮುಖ ಮೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ತಮಿಳು ಟೈಗರ್ಸ್ ತಮಿಳು ಇಳಂ ಉಗ್ರಗಾಮಿ ಸಂಘಟನೆ ಕೇರಳದ ಪ್ರಮುಖ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸುವ ಸಾಧ್ಯತೆ ಇರುವ ಬಗ್ಗೆ ಮುಂಬೈ ಪೊಲೀಸರು ಏರ್ ಇಂಡಿಯಾ ಸೆಕ್ಯುರಿಟಿ ಅಧಿಕಾರಿಗಳಿಗೆ ಮಾಹಿತಿ ನೀಡಿರುವ ಕಾರಣ ಮುನ್ನೆಚ್ಚರಿಕೆ ಅಂಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಬೆದರಿಕೆಯ ಕುರಿತು ಮಾಹಿತಿ ಪಡೆದಿದ್ದು, ರಾಜ್ಯದ ತಿರುವನಂತಪುರಂ, ಕೊಚಿ ಹಾಗೂ ಕೋಝಿಕೋಡ್ ವಿಮಾನ ನಿಲ್ದಾಣಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಸಿಐಎಸ್‌ಎಫ್ ಅಧಿಕಾರಿಗಳು ವಿವರಿಸಿದ್ದಾರೆ. ಭದ್ರತೆಯ ಕುರಿತು ಸಿಐಎಸ್ಎಫ್ ಕಮಾಂಡೆಂಟ್ ರಾಜೀವ್ ಪಂಥ್ ಅವರು ವಿಶೇಷ ಸಭೆ ಕರೆದು ಚರ್ಚೆ ನಡೆಸಿರುವುದಾಗಿ ತಿಳಿಸಿದರು. |