ವರುಣ್ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿರುವ ಬೆನ್ನಲ್ಲೇ, ತಾಯಿ ಮನೇಕಾ ಗಾಂಧಿ ಕೂಡ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವ ಮೂಲಕ ಮತ್ತೊಂದು ವಿವಾದಕ್ಕೆ ಸಿಲುಕಿಕೊಂಡಿದ್ದಾರೆ.
ಉತ್ತರ ಪ್ರದೇಶದ ಆವೋನ್ಲಾ ಕ್ಷೇತ್ರದಲ್ಲಿ ಮನೇಕಾ ಗಾಂಧಿ ಚುನಾವಣಾ ಪ್ರಚಾರ ಮಾಡಲು ಸರ್ಕಾರಿ ಕಟ್ಟಡಗಳನ್ನು ಬಳಸಿದ್ದು ಈ ವಿವಾದಕ್ಕೆ ಕಾರಣ. ಚುನಾವಣಾ ನೀತಿ ಸಂಹಿತೆಯಲ್ಲಿ ಯಾರೇ ಆದರೂ ಪ್ರಚಾರಕ್ಕಾಗಿ ಸರ್ಕಾರದ ವಸ್ತುಗಳನ್ನು ಬಳಸಿಕೊಳ್ಳುವಂತಿಲ್ಲ.
ಆವೋನ್ಲಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಮನೇಕಾ ಗಾಂಧಿಯವರಂತೆ ಇದೇ ಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿ ಧರ್ಮೇಂದ್ರ ಕಶ್ಯಪ್ ಅವರಿಗೂ ಇದೇ ನೀತಿ ಸಂಹಿತೆ ಉಲ್ಲಂಘನೆ ಮೇಲೆ ಸಾದಾರ್ ಎಸ್‌ಡಿಎಂ ಆದ ಸಂತೋಷ್ ಕುಮಾರ್ ಶರ್ಮಾ ಅವರು ನೋಟಿಸ್ ನೀಡಿದ್ದಾರೆ. ಹಾಗೆಯೇ ಬಡೌನ್ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಡಿ.ಪಿ.ಯಾದನ್ ಹಾಗೂ ಸ್ಥಳೀಯ ಮುಖಂಡ ಡಿ.ಕೆ.ಭಾರದ್ವಾಜ್ ಅವರಿಗೂ ನೋಟಿಸ್ ನೀಡಿದ್ದಾರೆ. |