ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಟೀಚರ್ ಮಕ್ಕಳಿಗೆ ಹೊಡೆದರೆ ಅದು ಕ್ರಿಮಿನಲ್ ಅಪರಾಧ‌!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟೀಚರ್ ಮಕ್ಕಳಿಗೆ ಹೊಡೆದರೆ ಅದು ಕ್ರಿಮಿನಲ್ ಅಪರಾಧ‌!
ಟೀಚರ್ ಮಕ್ಕಳಿಗೆ ಹೊಡೆದರೆ ಅದು ಕ್ರಿಮಿನಲ್ ಅಪರಾಧ!

ಹೌದು. ಶಿಕ್ಷಕರು ಮಕ್ಕಳಿಗೆ ಏಟು ಕೊಟ್ಟು ತಿದ್ದಿ ತೀಡುವ ಕಾಲ ಎಂದಿಗೋ ಮುಗಿದುಹೋಯ್ತು. ಮಕ್ಕಳನ್ನು ಶಿಕ್ಷಿಸಿದರೆ ಈಗ ಸುದ್ದಿಯಾಗುತ್ತದೆ. ಅಷ್ಟೇ ಅಲ್ಲ, ಜತೆಗೆ ಅದು ಕ್ರಿಮಿನಲ್ ಅಪರಾಧವೂ ಕೂಡಾ ಎಂಬ ಕಾನೂನು ಸದ್ಯದಲ್ಲೇ ಬರಲಿದೆ. ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗ (ಎನ್‌ಸಿಪಿಸಿಆರ್) ಐಪಿಸಿ ಸೆಕ್ಷನ್ 89ಕ್ಕೆ ತಿದ್ದುಪಡಿಯಾಗುವ ಅಗತ್ಯವಿದ್ದು, ಮಕ್ಕಳಿಗೆ ಶಿಕ್ಷಕರು ಹೊಡೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿದೆ.

ಶಾಲೆಗಳಲ್ಲಿ ಮಾನವ ಹಕ್ಕುಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಎನ್‌ಸಿಪಿಸಿಆರ್ ಅಧ್ಯಕ್ಷ ಶಾಂತಾ ಸಿನ್ಹಾ ಹೇಳುವಂತೆ, 12 ವರ್ಷದೊಳಗಿನ ಮಕ್ಕಳನ್ನು ಶಿಕ್ಷಕರು ಹಾಗೂ ಇತರರು ಶಿಕ್ಷಿಸುವ ಸಂಬಂಧ ಐಪಿಸಿಯಲ್ಲಿ ಸೂಕ್ತ ತಿದ್ದುಪಡಿ ತರುವ ಬಗ್ಗೆ ಚಿಂತಿಸಲಾಗುತ್ತಿದ್ದು, ಆ ಬಗ್ಗೆ ಮಾತುಕತೆ ನಡೆಯುತ್ತಿದೆ. ಸದ್ಯದಲ್ಲೇ ಈ ಬಗ್ಗೆ ಸಲಹೆ ನೀಡಲಿದ್ದೇವೆ. ಮಕ್ಕಳನ್ನು ಸ್ಕೇಲ್‌ನಿಂದ ಹೊಡೆಯುವುದು, ಕಪಾಳಕ್ಕೆ ಬಾರಿಸುವುದು, ಚಿವುಟುವುದು, ಶಾಲೆ ಮೈದಾನದಲ್ಲಿ ಓಡಿಸುವುದು, ಮೊಣಕಾಲಿನಲ್ಲಿ ಗಂಟೆಗಟ್ಟಲೆ ನಿಲ್ಲಿಸುವುದು, ಮಣಿಗಂಟಿಗೆ ಹೊಡೆಯುವುದು ಮತ್ತಿತರ ಶಿಕ್ಷೆಗಳನ್ನು ನೀಡಬಾರದು ಎಂಬ ಅಂಶಗಳನ್ನು ಸಲಹೆಯಲ್ಲಿ ಒತ್ತಿ ಹೇಳಲಾಗಿದೆ ಎನ್ನುತ್ತಾರೆ.

ಇಂತಹ ಸಲಹೆಗಳನ್ನು ಹೊತ್ತ ಸುತ್ತೋಲೆಯನ್ನು ಈಗಾಗಲೇ ಶಾಲೆಗಳಿಗೆ ರವಾನಿಸಲಾಗಿದ್ದರೂ, ಐಪಿಸಿ ಸೆಕ್ಷನ್‌ಗೇ ತಿದ್ದುಪಡಿ ತರಬೇಕೆಂಬುದು ನಮ್ಮ ಒತ್ತಾಯ. ಆದರೆ, ಇಂತಹ ತಿದ್ದುಪಡಿಯಲ್ಲಿ ಮಕ್ಕಳ ಮನೆಯಲ್ಲೂ ಈ ನಿಯಮವನ್ನು ಜಾರಿಗೆ ತರಲು ನಮ್ಮ ಒತ್ತಾಯವಿಲ್ಲ ಎನ್ನುತ್ತಾರೆ ಸಿನ್ಹಾ.

12 ವಯಸ್ಸಿನೊಳಗಿನ ಮಕ್ಕಳ ಒಳಿತಿಗಾಗಿ ಈ ನಿಯಮ ತರಬೇಕು ಎಂಬುದು ನಮ್ಮ ಅಭಿಪ್ರಾಯ. 12ರ ನಂತರ ಮಕ್ಕಳು ಪ್ರಬುದ್ಧರಾಗುತ್ತಾರೆ. ಮಕ್ಕಳ ತಂದೆತಾಯಿಯರನ್ನು ಹೊರತುಪಡಿಸಿ, ಯಾವುದೇ ಹೊರಗಿನ ವ್ಯಕ್ತಿ ಹಾಗೂ ಪಾಲಕರಿಗೆ ಈ ನಿಯಮ ಅನ್ವಯಿಸಬೇಕು ಎಂಬುದು ನಮ್ಮ ಸಲಹೆ ಎಂದರು ಸಿನ್ಹಾ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಸಬ್‌ಗೆ ಗಲ್ಲು: ಚಾರ್ಜ್‌ಶೀಟ್‌ನಲ್ಲಿ ಮುಂಬೈ ಪೊಲೀಸ್ ಒತ್ತಾಯ
ವಿದೇಶದಲ್ಲಿ ಹರಾಜಿಗಿದೆ ಟಿಪ್ಪು ಸಿಂಹಾಸನದ ಶಿಖರ!
ಮನೇಕಾ ಗಾಂಧಿಗೂ ನೋಟಿಸ್ ಜಾರಿ
ಕೇರಳ ವಿಮಾನ ನಿಲ್ದಾಣಕ್ಕೆ ಎಲ್‌‌ಟಿಟಿಇ ದಾಳಿ ಬೆದರಿಕೆ
ವಾಯುಪಡೆ ಮುಖ್ಯಸ್ಥನಾಗಿ ಪ್ರದೀಪ್ ವಸಂತ್ ನಾಯ್ಕ್
ಕಾರಾಗೃಹದಲ್ಲಿ ಗುಂಡಿನ ಕಾಳಗ: ಎರಡು ಬಲಿ