ಎಲ್ಲೆಡೆ ಅಟ್ಟಹಾಸಗೈಯುತ್ತಿರುವ ಭಯೋತ್ಪಾದನೆಯಿಂದಾಗಿ ಜಾಗತಿಕ ಶಾಂತಿ ಹಾಗೂ ಅಭಿವೃದ್ದಿಗೆ ಭಂಗ ಉಂಟಾಗುತ್ತಿದ್ದು. ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತುಹಾಕುವಲ್ಲಿ ದೃಢ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಯೋತ್ಪಾದನೆ ದಾಳಿಯಿಂದಾಗಿ ಇಂದು ಜಾಗತಿಕ ಶಾಂತಿ, ಒಗ್ಗಟ್ಟು ಹಾಗೂ ಅಭಿವೃದ್ದಿಗೆ ತೀವ್ರ ತೆರನಾದ ಅಡ್ಡಿಯಾಗಿದೆ. ಭಯೋತ್ಪಾದನಾ ದಾಳಿಯಿಂದಾಗಿ ಭಾರತ ಬಲಿಪಶುವಾಗಿದೆ ಎಂದ ಅವರು, ಆ ನಿಟ್ಟಿನಲ್ಲಿ ಭಯೋತ್ಪಾದನೆಯನ್ನು ಬೇರು ಸಹಿತ ಮೂಲೋತ್ಪಾಟನೆ ಮಾಡಬೇಕೆಂದು ಕರೆ ನೀಡಿದರು.
ಅವರು ಚೆನ್ನೈನ ಓಟಿಎ ತರಬೇತಿ ಅಧಿಕಾರಿಗಳ ಪಾಸಿಂಗ್ ಔಟ್ ಪರೇಡ್ ಸಂದರ್ಭದಲ್ಲಿ ಮಾತನಾಡುತ್ತ ತಿಳಿಸಿದರು. ಭಯೋತ್ಪಾದನೆಯನ್ನು ಮಟ್ಟಹಾಕುವಲ್ಲಿ ಸೇನಾಪಡೆಯನ್ನು ಮತ್ತಷ್ಟು ಅಧುನೀಕರಣಗೊಳಿಸಬೇಕಾದ ಅಗತ್ಯ ಇದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ವಿಜ್ಞಾನ ಮತ್ತು ತಂತ್ರಜ್ಞಾನಗಳೊಂದಿಗೆ ಸೈನಿಕ ಪಡೆಯನ್ನು ಆಧುನೀಕರಣಗೊಳಿಸಬೇಕು, ಇದು ಆಧುನಿಕ ಯುಗ, ಆ ಕಾರಣದಿಂದಾಗಿ ಪ್ರತಿಯೊಬ್ಬ ಯೋಧನೂ ಆಧುನಿಕ ತಂತ್ರಜ್ಞಾನದ ಅನುಭವ ಹೊಂದುವ ಅಗತ್ಯ ಬಹಳಷ್ಟಿದೆ. ಅದಕ್ಕೆ ಬೇಕಾದ ಪೂರಕ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು ಎಂದರು. |