ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಾಂಗ್ರೆಸ್‌‌ಗೆ ಬೇಸರವಾದ್ರೆ ಏನು ಮಾಡುವಂತಿಲ್ಲ: ಲಾಲು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್‌‌ಗೆ ಬೇಸರವಾದ್ರೆ ಏನು ಮಾಡುವಂತಿಲ್ಲ: ಲಾಲು
ಕಾಂಗ್ರೆಸ್-ಬಿಜೆಪಿಗೆ ಸ್ವಂತ ಬಲದಿಂದ ಅಧಿಕಾರ ಸಾಧ್ಯವಿಲ್ಲ...
PTI
ಬಿಹಾರದ ಲೋಕಸಭಾ ಸೀಟು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಆರ್‌ಜೆಡಿ ನಡುವೆ ಬಿರುಕು ಹೆಚ್ಚುತ್ತಿದ್ದು, ಸೀಟು ಹಂಚಿಕೆಯಲ್ಲಿ ಕಾಂಗ್ರೆಸ್‌ಗೆ ಬೇಸರವಾದರೆ ನಾವೇನೂ ಮಾಡುವಂತಿಲ್ಲ ಎಂದು ಆರ್‌ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್ ತಿರುಗೇಟು ನೀಡಿದ್ದಾರೆ.

ಬಿಹಾರದ 37ಕ್ಷೇತ್ರಗಳಲ್ಲೂ ಕಾಂಗ್ರೆಸ್ ಸ್ಪರ್ಧಿಸಲಿದೆ ಎಂಬ ಕಾಂಗ್ರೆಸ್ ಘೋಷಣೆಯ ಬೆನ್ನಲ್ಲೇ, ಲಾಲು ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ, ಬಿಹಾರದಲ್ಲಿ ಕಾಂಗ್ರೆಸ್‌ಗೆ 3ಸೀಟು ನೀಡಲು ಮಾತ್ರ ಸಾಧ್ಯ. ಕಾಂಗ್ರೆಸ್‌ನ ಸಾಮರ್ಥ್ಯಕ್ಕೆ ಅನುಗುಣವಾಗಿ ಸೀಟು ಹಂಚಿಕೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಅಲ್ಲದೇ ಸ್ಪರ್ಧಾ ಅಖಾಡಕ್ಕೆ ಇಳಿಯುವ ಅಭ್ಯರ್ಥಿಗಳ ಸಾಮರ್ಥ್ಯ ಸಾಬೀತುಪಡಿಸಲು ಕಾಂಗ್ರೆಸ್‌ಗೆ ತಿಳಿಸಿದ್ದೆವು. ಆದರೆ ಅದಕ್ಕೆ ಸರಿಯಾಗಿ ಪ್ರತಿಕ್ರಿಯಿಸಿಲ್ಲ. ಆರ್‌ಜೆಡಿ ಯುಪಿಎ ಅಂಗ ಪಕ್ಷವಾಗಿದೆ ಎಂದ ಅವರು, ಜಾರ್ಖಂಡ್‌ನ 4 ಕ್ಷೇತ್ರಗಳಲ್ಲಿಯೂ ತಮ್ಮ ಪಕ್ಷ ಸ್ಪರ್ಧಿಸುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.

ರೈಲ್ವೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ ಎಂದು ತಿಳಿಸಿದ ಅವರು, ಚುನಾವಣೆಯ ಫಲಿತಾಂಶದ ಬಳಿಕ ಸೋನಿಯಾಗೆ ತಮ್ಮ ತಪ್ಪಿನ ಅರಿವಾಗಲಿದೆ. ಸ್ವಂತ ಬಲದಿಂದ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಕಾಂಗ್ರೆಸ್ ಮತ್ತು ಬಿಜೆಪಿ ಮನಗಾಣಬೇಕಾಗಿದೆ ಎಂದು ಸಲಹೆ ನೀಡಿದರು.

ಬಿಹಾರದ 40 ಲೋಕಸಭಾ ಕ್ಷೇತ್ರಗಳ ಸೀಟು ಹಂಚಿಕೆಯಲ್ಲಿ ಆರ್‌ಜೆಡಿ 25, ಲೋಕಜನಶಕ್ತಿ ಪಕ್ಷಕ್ಕೆ 12ಸೀಟು ನೀಡಿ ಕಾಂಗ್ರೆಸ್‌ಗೆ ಕೇವಲ 3ಸೀಟು ನೀಡಿರುವ ಬಗ್ಗೆ ಕಾಂಗ್ರೆಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಮ್ಮು ಗಡಿಯಲ್ಲಿ ಪಾಕ್ ಪಡೆಗಳಿಂದ ಗುಂಡಿನ ದಾಳಿ
ಬಿಹಾರದ 37ಕ್ಷೇತ್ರದಲ್ಲಿ ನಾವು ಸ್ಪರ್ಧಿಸುತ್ತೇವೆ: ಕಾಂಗ್ರೆಸ್
ಭಯೋತ್ಪಾದನೆಯನ್ನು ನಿರ್ಮೂಲಗೊಳಿಸಬೇಕು: ಪಾಟೀಲ್
ಆರೆಸ್ಸೆಸ್‌ಗೆ ಆಡ್ವಾಣಿ ಬೆಂಬಲಿಗ ಭಾಗ್ವತ್ ಮುಖ್ಯಸ್ಥ
ಜಾರ್ಖಂಡ್: ಕಾಂಗ್ರೆಸ್ ಜತೆ ಮೈತ್ರಿ ಮುರಿದ ಜೆಎಂಎಂ
ಟೀಚರ್ ಮಕ್ಕಳಿಗೆ ಹೊಡೆದರೆ ಅದು ಕ್ರಿಮಿನಲ್ ಅಪರಾಧ‌!