ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಹೋಗ್ರಿ, ನಾವೂ ಕೇರ್ ಮಾಡಲ್ಲ: ಲಾಲೂಗೆ ಕಾಂಗ್ರೆಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೋಗ್ರಿ, ನಾವೂ ಕೇರ್ ಮಾಡಲ್ಲ: ಲಾಲೂಗೆ ಕಾಂಗ್ರೆಸ್
ಕಾಂಗ್ರೆಸ್‌ಗೆ ಬೇಸರವಾದರೆ ಏನೂ ಮಾಡುವಂತಿಲ್ಲ ಎಂಬ ಲಾಲೂ ಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್, ಪಕ್ಷವು ಯಾವುದೇ ವ್ಯಕ್ತಿಯ ಲೆಕ್ಕಾಚಾರವನ್ನು ಅವಲಂಬಿಸಿಲ್ಲ ಎಂದಿದೆ. ಇದರಿಂದಾಗಿ ಯುಪಿಎಯಲ್ಲಿನ ಬಿರುಕು ಉತ್ತುಂಗಕ್ಕೇರಿದಂತಾಗಿದೆ.

"ನಾವು ಯಾವುದೇ ವ್ಯಕ್ತಿಯ ಲೆಕ್ಕಾಚಾರವನ್ನು ಅವಲಂಬಿಸಿಲ್ಲ. ಬಿಹಾರ, ಪಶ್ಚಿಮಬಂಗಾಳ ಮತ್ತು ಜಾರ್ಖಂಡ್‌ಗೆ ಸಂಬಂಧಿಸಿದಂತೆ ನಮಗೆ ನಮ್ಮದೆ ಆದ ಲೆಕ್ಕಾಚಾರಗಳಿವೆ. ಪ್ರತೀ ರಾಜಕೀಯ ಪಕ್ಷಗಳು ತಮ್ಮದೇ ಆದ ಲೆಕ್ಕಾಚಾರಗಳ ಮೂಲಕ ಕಾರ್ಯಾಚರಿಸುತ್ತವೆ. ಚುನಾವಣಾ ಫಲಿತಾಂಶಗಳು ಘೋಷಣೆಯಾದಾಗ ಯಾರು ಎಷ್ಚು ಬಲಹೊಂದಿದ್ದಾರೆ ಎಂಬುದು ನಿಚ್ಚಳಗೊಳ್ಳುತ್ತದೆ" ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ ಕಮ್ಯೂನಿಷ್ಟರನ್ನು ಸೋಲಿಸಲು ತಮ್ಮ ಪಕ್ಷವು ಪ್ರತೀ ಹಂತದಲ್ಲೂ ತೃಣಮೂಲ ಕಾಂಗ್ರೆಸ್‍ನೊಂದಿಗೆ ಪ್ರಚಾರ ಕೈಗೊಳ್ಳಲಿದೆ ಎಂದು ನುಡಿದರು. ಅಲ್ಲದೆ ಪ್ರತೀ ಹಂತದಲ್ಲಿಯೂ ತೃಣಮೂಲ ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿ ಕಮ್ಯೂನಿಸ್ಟರನ್ನು ಸೋಲಿಸುವ ಮೂಲಕ ಮೈತ್ರಿಯನ್ನು ಯಶಸ್ವಿಯಾಗಿಲು ಪಕ್ಷದ ಕಾರ್ಯಕರ್ತರಿಗೆ ನಿರ್ದೇಶನ ನೀಡುವುದಾಗಿ ಪ್ರಣಬ್ ನುಡಿದರು.

ಅವರು ಶನಿವಾರ ರಾತ್ರಿ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿಯೊಂದಿಗೆ ಇಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರೈಲು ಹಳಿ ಸ್ಫೋಟ: ಸಂಚಾರ ಸ್ಥಗಿತ
ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಮಾಜಿ ಕ್ರಿಕೆಟಿಗ ಮದನ್ ಲಾಲ್
ಕಾಂಗ್ರೆಸ್‌‌ಗೆ ಬೇಸರವಾದ್ರೆ ಏನು ಮಾಡುವಂತಿಲ್ಲ: ಲಾಲು
ಜಮ್ಮು ಗಡಿಯಲ್ಲಿ ಪಾಕ್ ಪಡೆಗಳಿಂದ ಗುಂಡಿನ ದಾಳಿ
ಬಿಹಾರದ 37ಕ್ಷೇತ್ರದಲ್ಲಿ ನಾವು ಸ್ಪರ್ಧಿಸುತ್ತೇವೆ: ಕಾಂಗ್ರೆಸ್
ಭಯೋತ್ಪಾದನೆಯನ್ನು ನಿರ್ಮೂಲಗೊಳಿಸಬೇಕು: ಪಾಟೀಲ್