ಕುಪ್ವಾರ: ಉತ್ತರ ಕಾಶ್ಮೀರದಲ್ಲಿ ಉಗ್ರಗಾಮಿ ಸಂಘಟನೆಗಳು ಮತ್ತು ಸೇನೆಯ ನಡುವೆ ನಡೆಯುತ್ತಿರುವ ಎನ್‌ಕೌಂಟರ್ ತೃತೀಯ ದಿನಕ್ಕೆ ಕಾಲಿಟ್ಟಿದೆ. ಸೇನೆಯು ಉಗ್ರರ ವಿರುದ್ಧ ಬೃಹತ್ ಕಾರ್ಯಾಚರಣೆ ನಡೆಸುತ್ತಿದೆ.
ಉಗ್ರರೊಂದಿಗಿನ ಗುಂಡಿನ ಚಕಮಕಿಯಲ್ಲಿ ಇದುವರೆಗೆ ಸೇನೆಯ ಎಂಟು ಮಂದಿ ಹತರಾಗಿದ್ದಾರೆ. ಇದೊಂದು ಭಾರೀ ಉಗ್ರಗಾಮಿ ಪಡೆಯಾಗಿದ್ದು ಉಗ್ರರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಮಾರ್ಚ್ 20ರಿಂದ ನಡೆಯುತ್ತಿರುವ ಅವಿರತ ಹೋರಾಟದಲ್ಲಿ ಏಳು ಜವಾನರು ಹಾಗೂ ಒರ್ವ ಮೇಜರ್ ಗುಂಡಿನ ಕಾಳಗದಲ್ಲಿ ಸಾವನ್ನಪ್ಪಿದ್ದಾರೆ. |