ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನ್ಯಾನೋ ಕನಸು ನನಸಾಗಲು ಕ್ಷಣಗಣನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನ್ಯಾನೋ ಕನಸು ನನಸಾಗಲು ಕ್ಷಣಗಣನೆ
ಸಾಮಾನ್ಯ ಜನರಿಗೂ ಕಾರು ಕನಸು ಕೈಗೆಟಕುವಂತಾಗಬೇಕು ಎಂಬುದಾಗಿ ಉದ್ಯಮಿ ರತನ್ ಟಾಟಾ ಅವರು ಕಂಡ ದೊಡ್ಡ ಕನಸಿನ ಫಲ ನ್ಯಾನೋ ಕಾರು. ಈ ಕಾರು ವಿಶ್ವದ ಅತಿ ಅಗ್ಗದ ಕಾರೆಂಬ ಅಗ್ಗಳಿಕೆ ಗಳಿಸಿದ್ದು ಸೋಮವಾರ ಮಾರುಕಟ್ಟೆಗಿಳಿಯಲಿದೆ.

ನವದೆಹಲಿಯಲ್ಲಿ ಕಳೆದ ವರ್ಷ ನಡೆದ ಆಟೋ ಎಕ್ಸ್ಪೋದ ವೇಳೆ ಈ ಕಾರನ್ನು ಅನಾವರಣಗೊಳಿಸಲಾಗಿದ್ದು, ವಿಶ್ವಾದ್ಯಂತ ಸುದ್ದಿಯಾಗಿತ್ತು. ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ಕಾರಿನ ಕಾರ್ಖಾನೆಗೆ ರೈತರ ತೀವ್ರ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ, ಈ ಸ್ಥಾವರವನ್ನು ಬಳಿಕ ಗುಜರಾತಿಗೆ ಸ್ಥಳಾಂತರಗೊಳಿಸಲಾಗಿತ್ತು. ಇದರಿಂದಾಗಿ ನ್ಯಾನೋ ಕಾರು ಮಾರುಕಟ್ಟೆಗಿಳಿಯಲು ಅನೌಪಚಾರಿಕವಾಗಿ ನಿಗದಿಪಡಿಸಲಾಗಿದ್ದ ಅಕ್ಟೋಬರ್ 2008ರ ಗುರಿಯನ್ನು ಸಾಧಿಸಲಾಗಿರಲಿಲ್ಲ.

ಕಾರಿನ ಉತ್ಪಾದನಾ ವೆಚ್ಚ ಒಂದು ಲಕ್ಷ ರೂಪಾಯಿ ಎಂಬುದಾಗಿ ಟಾಟಾ ಮೋಟಾರ್ಸ್ ಕಳೆದ ವರ್ಷ ಘೋಷಿಸಿತ್ತು. ಇದು ಇದುವರೆಗಿನ ಕಾರುಗಳಲ್ಲೇ ಅತ್ಯಂತ ಕಡಿಮೆ ವೆಚ್ಚದ ಕಾರಾಗಿದೆ. ಕಾರಿನ ಬುಕ್ಕಿಂಗ್ ಪ್ರಕ್ರಿಯೆ ಹಾಗೂ ಮಾರಾಟ ಬೆಲೆಯ ನಿರ್ದಿಷ್ಟ ವಿವರಗಳನ್ನು ಸೋಮವಾರ ಮಧ್ಯಾಹ್ನ ವಿವರಿಸಲಾಗುವುದು ಎಂದು ಟಾಟಾ ಗ್ರೂಪ್ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನ್ಯಾನೋ, ಕನಸು, ಟಾಟಾ, ರತನ್ ಟಾಟ
ಮತ್ತಷ್ಟು
ವರುಣ್ ತಪ್ಪಿತಸ್ಥ, ಕಣಕ್ಕಿಳಿಸಬೇಡಿ: ಚುನಾವಣಾ ಆಯೋಗ
ರಸ್ತೆ ಅಪಘಾತ: ನಾಲ್ವರು ಬಲಿ
ಒರಿಸ್ಸಾ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಇಂದು ಪ್ರಕಟ
ಗುಂಡಿನ ಚಕಮಕಿಯಲ್ಲಿ ಮೇಜರ್ ಸಾವು
ಗೋವಾದಲ್ಲಿ ಶ್ರೀರಾಮಸೇನೆಗೆ ನಿಷೇಧ: ರವಿ ನಾಯಕ್
ತೃತೀಯ ರಂಗ ಸೇರೆ, ಯುಪಿಎ ಬಿಡೆ: ಲಾಲೂ